Katrina Kaif Wedding: ಮದುವೆ ಸಂಭ್ರಮ ಶುರು, ಕತ್ರೀನಾಗೆ 1 ಲಕ್ಷದ ಮೆಹಂದಿ

Published : Nov 26, 2021, 10:41 AM ISTUpdated : Nov 26, 2021, 11:33 AM IST

ಬಾಲಿವುಡ್‌ನಲ್ಲಿ ಮದುವೆ ಸೀಸನ್. ನಟಿ ಕತ್ರೀನಾ ಕೈಫ್(Katrina Kaif) ಮದುವೆ(Wedding) ಸಿದ್ಧತೆ ಶುರು ಮಾಡಿದ್ದಾರೆ. ಬಾಲಿವುಡ್‌ನ(Bollywood) ನೀಳ ಸುಂದರಿಯ ಕೈಗಳನ್ನು ಅಲಂಕರಿಸಲು ಈಗಾಗಲೇ  ಲಕ್ಷದ ಮೆಹಂದಿ(Mehandi) ಸಿದ್ಧ ಮಾಡಲಾಗಿದೆ.

PREV
18
Katrina Kaif Wedding: ಮದುವೆ ಸಂಭ್ರಮ ಶುರು, ಕತ್ರೀನಾಗೆ 1 ಲಕ್ಷದ ಮೆಹಂದಿ

ಕತ್ರಿನಾ ಕೈಫ್(Katrina Kaif) ಮತ್ತು ವಿಕ್ಕಿ ಕೌಶಲ್ ಅವರ ಮದುವೆಯ(Wedding) ಕುರಿತು ದಿನಕ್ಕೊಂದು ಸುದ್ದಿ ಬರುತ್ತಿದೆ. ಕೋರ್ಟ್ ಮ್ಯಾರೇಜ್, ಮೊಬೈಲ್ ನಿಷೇಧ ಸೇರಿ ಮದುವೆ ಕುರಿತು ಈಗಾಗಲೇ ಹಲವು ಅಪ್ಡೇಟ್‌ಗಳು ಹೊರಬಿದ್ದಿವೆ. ಪ್ರತಿದಿನ ಅವರ ಮದುವೆಯ ಬಗ್ಗೆ ಹೊಸ ವಿಷಯ ಹೊರಬೀಳುತ್ತಿದೆ.

28

ಅವರು ಡಿಸೆಂಬರ್‌ನಲ್ಲಿ ರಾಜಸ್ಥಾನದ ಐಷಾರಾಮಿ ಫೋರ್ಟ್-ರೆಸಾರ್ಟ್‌ನಲ್ಲಿ ಮದುವೆಯಾಗಲಿದ್ದಾರೆ. ಆದರೆ ಅದಕ್ಕೂ ಮೊದಲು, ಅವರು ಯಾವುದೇ ಫೋನ್ ಒಳತರಲು ಅವಕಾಶವಿಲ್ಲ. ಕೋರ್ಟ್ ಮ್ಯಾರೇಜ್ ಆಗಲಿದ್ದಾರೆ ಎನ್ನಲಾಗಿದೆ.

38

ಇನ್‌ಸ್ಟಂಟ್ ಬಾಲಿವುಡ್‌ನ ಇತ್ತೀಚಿನ ಅಪ್ಡೇಟ್ ಪ್ರಕಾರ ರಾಜಸ್ಥಾನದ ಪ್ರಸಿದ್ಧ ಸೋಜತ್ ಮೆಹೆಂದಿಯಿಂದ ಕತ್ರೀನಾ ಅವರ ವಿವಾಹದ ಮೆಹೆಂದಿಯನ್ನು ಸಿದ್ಧಪಡಿಸುತ್ತಿದೆ ಎನ್ನಲಾಗಿದೆ.

48

ರಾಜಸ್ಥಾನದ ಜೋಧ್‌ಪುರದ ಪಾಲಿ ಜಿಲ್ಲೆಯ ಸೋಜತ್ ಮೆಹೆಂದಿ (ಗೋರಂಟಿ) ಯನ್ನು ವಧು ಕತ್ರಿನಾ ಕೈಫ್ ಅವರ ವಿಶೇಷ ದಿನಕ್ಕಾಗಿ ಕಳುಹಿಸಲಾಗುತ್ತದೆ. ಸೋಜತ್ ಗೋರಂಟಿ ಇಡೀ ಪ್ರಪಂಚದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ.

58

ಈಗ ಈ ಮೆಹೆಂದಿಯನ್ನು ಕತ್ರಿನಾಗೆ ಉಡುಗೊರೆಯಾಗಿ ಕಳುಹಿಸಲಾಗುತ್ತದೆ. ಸೋಜತ್ ನ ಕುಶಲಕರ್ಮಿಗಳು ನೈಸರ್ಗಿಕವಾಗಿ ಮೆಹಂದಿಯನ್ನು ತಯಾರಿಸುತ್ತಿದ್ದು, ಇದಕ್ಕೆ ಯಾವುದೇ ರಾಸಾಯನಿಕವನ್ನು ಸೇರಿಸುವುದಿಲ್ಲ. ಇದಲ್ಲದೆ, ಸೋಜತ್ ಹೆನ್ನಾವನ್ನು ಕೈಯಿಂದ ತಯಾರಿಸಲಾಗುತ್ತಿದೆ.

68

ಇದನ್ನು ಕತ್ರಿನಾಗೆ ಕಳುಹಿಸಲಾಗುವುದು. ಸೋಜತ್‌ನ ಮೆಹಂದಿ ಮಾರಾಟಗಾರರ ಪ್ರಕಾರ, ಕತ್ರಿನಾ ಅವರ ಮದುವೆಗೆ ಮೆಹಂದಿ ತಯಾರಿಗೆ ಸುಮಾರು 50,000 ರಿಂದ 1 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಆದರೆ, ಈ ಮೆಹೆಂದಿಯ ಹಿಂದಿರುವ ವ್ಯಕ್ತಿ ಸೆಲೆಬ್ರಿಟಿ ದಂಪತಿಗಳಿಂದ ಯಾವುದೇ ಹಣವನ್ನು ತೆಗೆದುಕೊಳ್ಳುವುದಿಲ್ಲ ಎನ್ನಲಾಗಿದೆ.

78

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರು ಕಬೀರ್ ಖಾನ್-ಮಿನಿ ಮಾಥುರ್ ಅವರ ಮನೆಯಲ್ಲಿ ತಮ್ಮ ಸೀಕ್ರೆಟ್ ನಿಶ್ಚಿತಾರ್ಥ ಸಮಾರಂಭದ ನಂತರ ಅತಿಥಿ ಪಟ್ಟಿಯನ್ನು ರಹಸ್ಯವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಸಮಾರಂಭದಲ್ಲಿ ಅವರ ಕುಟುಂಬದ ಸದಸ್ಯರು ಮಾತ್ರ ಹಾಜರಿದ್ದರು.

88

ರೋಕಾ ಸಮಾರಂಭದಲ್ಲಿ ಕತ್ರಿನಾ ಅವರ ತಾಯಿ ಸುಝೇನ್ ಟರ್ಕೊಯೆಟ್, ಅವರ ಸಹೋದರಿ ಇಸಾಬೆಲ್ಲೆ ಕೈಫ್, ವಿಕ್ಕಿಯ ಪೋಷಕರು, ಶಾಮ್ ಕೌಶಲ್ ಮತ್ತು ವೀಣಾ ಕೌಶಲ್ ಮತ್ತು ಸಹೋದರ ಸನ್ನಿ ಕೌಶಲ್ ಉಪಸ್ಥಿತರಿದ್ದರು.

Read more Photos on
click me!

Recommended Stories