Katrina Kaif Marriage: ಬಾಲಿವುಡ್ ಕಪಲ್ ಮದುವೆಗೆ ಮೊಬೈಲ್ ಅವಕಾಶವಿಲ್ಲ

Published : Nov 25, 2021, 07:07 PM ISTUpdated : Nov 25, 2021, 07:09 PM IST

ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್(Katrina Kaif) ಅವರ ವಿವಾಹಕ್ಕೆ(Marriage) ಮೊಬೈಲ್ ತಗೊಂಡು ಹೋಗೋ ಅವಕಾಶ ಇಲ್ಲ ಅಂತೆ.ಹೌದು ಈ ವಿಚಾರದಲ್ಲಿ ಪಿಗ್ಗಿಯನ್ನೇ ಫಾಲೋ ಮಾಡಿದ್ದಾರೆ ನಟಿ.

PREV
15
Katrina Kaif Marriage: ಬಾಲಿವುಡ್ ಕಪಲ್ ಮದುವೆಗೆ ಮೊಬೈಲ್ ಅವಕಾಶವಿಲ್ಲ

ಕತ್ರಿನಾ ಕೈಫ್(Katrina kaif) ಮತ್ತು ವಿಕ್ಕಿ ಕೌಶಲ್ ಅವರ ಮದುವೆಯ ಸುದ್ದಿ ಟ್ರೆಂಡ್‌ ಆಗುತ್ತಿದೆ. ಮುಂದಿನ ವಾರ ಸೆಲೆಬ್ರಿಟಿಗಳು ಮದುವೆಯಾಗಲಿದ್ದಾರೆ. ದಂಪತಿಗಳು ಮುಂದಿನ ವಾರ ಮುಂಬೈನಲ್ಲಿ(Mumbai) ಕೋರ್ಟ್ ಮ್ಯಾರೇಜ್ ಆಗಲಿದ್ದಾರೆ ಎನ್ನಲಾಗುತ್ತಿದೆ. 

25

ರಾಜಸ್ಥಾನದಲ್ಲಿ ಅವರ ವಿವಾಹದ ವಿಧಿವಿಧಾನಗಳ ಮೊದಲು, ವಿಕ್ಕಿ ಮತ್ತು ಕತ್ರಿನಾ ಮುಂಬೈನಲ್ಲಿ ವಿವಾಹವಾಗಲಿದ್ದಾರೆ. ರಣಥಂಬೋರ್ ಬಳಿಯ ರೆಸಾರ್ಟ್‌ನಲ್ಲಿ ತಮ್ಮ ರಾಯಲ್ ವಿವಾಹಕ್ಕಾಗಿ ಜೈಪುರಕ್ಕೆ ತೆರಳುವ ಮೊದಲು ವಿಕ್ಕಿ ಮತ್ತು ಕತ್ರಿನಾ ಮುಂದಿನ ವಾರ ಮುಂಬೈನಲ್ಲಿ ಕೋರ್ಟ್ ಮದುವೆಯಾಗಲಿದ್ದಾರೆ ಎನ್ನಲಾಗಿದೆ.

35

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆಯಲ್ಲಿ ನೋ ಫೋನ್ ರೂಲ್ಸ್ ಇರಲಿದೆಯಂತೆ. ಇದು ಅವರಿಬ್ಬರಿಗೂ ಬಿಗ್‌ ಡೇ. ಆದ್ದರಿಂದ ಅವರಿಗೆ ತಿಳಿಯದೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳು ಮತ್ತು ವೀಡಿಯೊಗಳು ಲೀಕ್ ಆಗಬಾರದೆಂದು  ಈ ರೀತಿ ಮಾಡುತ್ತಿದ್ದಾರೆ.

45

ಈ ವಾರದ ಆರಂಭದಲ್ಲಿ ಕತ್ರಿನಾ ಕೈಫ್ ಕೆಲವು ಜಾಹೀರಾತುಗಳ ಚಿತ್ರೀಕರಣವನ್ನು ಹೊರತುಪಡಿಸಿ ತನ್ನ ಸಂಪೂರ್ಣ ಗಮನವನ್ನು ತನ್ನ ಮದುವೆಯ ಮೇಲೆ ಕೇಂದ್ರೀಕರಿಸಿದ್ದಾರೆ. ವಿಕ್ಕಿ ಕೌಶಲ್ ಅವರ ಸಹೋದರ, ನಟ ಸನ್ನಿ ಕೌಶಲ್ ಮತ್ತು ಅವರ ತಾಯಿಯೊಂದಿಗೆ ಎಲ್ಲಾ ಸಿದ್ಧತೆ ಮಾಡುತ್ತಿದ್ದಾರೆ.

55

ಅವರ ಮದುವೆಯಲ್ಲಿ ಭಾಗವಹಿಸೋ ಅತಿಥಿಗಳ ಪಟ್ಟಿಯಲ್ಲಿ ಕರಣ್ ಜೋಹರ್, ಅಲಿ ಅಬ್ಬಾಸ್ ಜಾಫರ್, ಕಬೀರ್ ಖಾನ್ ಮತ್ತು ಮಿನಿ ಮಾಥುರ್, ರೋಹಿತ್ ಶೆಟ್ಟಿ, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ, ವರುಣ್ ಧವನ್ ಮತ್ತು ನತಾಶಾ ದಲಾಲ್ ಮುಂತಾದವರು ಇದ್ದಾರೆ.

Read more Photos on
click me!

Recommended Stories