41 ವರ್ಷಕ್ಕೆ ಕಾಲಿಟ್ಟ ಕತ್ರಿನಾ ಕೈಫ್; ಅಂಡಾಣು ಫ್ರೀಜ್‌ ಮಾಡಿಟ್ಟಿದ್ದೀರಾ ಎಂದ ನೆಟ್ಟಿಗರು

First Published | Jul 16, 2024, 10:24 AM IST

ಹುಟ್ಟುಹಬ್ಬದ ಸಂಭ್ರಮದಲ್ಲಿ ಕತ್ರಿನಾ ಕೈಫ್. ಮದುವೆಯಾಗಿ ಮೂರು ವರ್ಷ ಆಗ್ತಿದೆ ಮಗು ಯಾವಾಗ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು...... 

ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್‌ ಜುಲೈ 16ರಂದು 41 ವರ್ಷಕ್ಕೆ ಕಾಲಿಡುತ್ತಾರೆ. ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಉದ್ದೇಶದಲ್ಲಿ ಮಂಗಳೂರಿಗೆ ಆಗಮಿಸಿದ್ದರು. 

ಬಾಲಿವುಡ್ ನಟ ಸುನೀಶ್ ಶೆಟ್ಟಿ, ಆತಿಯಾ ಶೆಟ್ಟಿ, ಕೆಎಲ್‌ ರಾಹುಲ್‌ ಮತ್ತು ಕುಟುಂಬಸ್ಥರ ಜೊತೆ ಕತ್ರಿನಾ ಕೈಫ್ ಕೊರಗಜ್ಜನ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Tap to resize

ಇನ್ನು 2021 ಡಿಸೆಂಬರ್ 9ರಂದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಾಲ್ ಅದ್ಧೂರಿಯಾಗಿ ಮದುವೆ ಮಾಡಿಕೊಂಡರು.  ಬಾಲಿವುಡ್‌ನ ಸಖತ್ ರೊಮ್ಯಾಂಟಿಕ್ ಕಪಲ್‌ಗಳು ಇವರು. 

ಈ ವರ್ಷ 41 ಆಗ್ತಾ ಬರ್ತಿದೆ ನೀವು ಯಾಕೆ ಮಗು ಮಾಡಿಕೊಳ್ಳಬಾರದು? ಅಥವಾ ಇನ್ನಿತ್ತರ ಸೆಲೆಬ್ರಿಟಿಗಳ ರೀತಿಯಲ್ಲಿ ನೀವು ಎಗ್‌ ಫ್ರೀಜ್ ಮಾಡಿಸಿದ್ದೀರಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
 

ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯಲ್ಲಿ ಕತ್ರಿನಾ ಕೈಫ್‌ ಕೂಡ ಒಬ್ಬರು. ಮದುವೆಯಾದ ಮೇಲೆ ಯಾವ ಸಿನಿಮಾ ಪ್ರಜೆಕ್ಟ್‌ಗೂ ಸಹಿ ಮಾಡಿಲ್ಲ.

ಇನ್ನು ಜನರ ನಡುವೆ ಹೆಚ್ಚಾಗಿ ಕಾಣಿಸಿಕೊಳ್ಳದ ಕಾರಣ ಕತ್ರಿನಾ ಪ್ರೆಗ್ನೆಂಟ್ ಅನ್ನೋ ಗಾಸಿಪ್ ಹಬ್ಬಿದೆ. ಅನಂತ್ ಅಂಬಾನಿ ಮದುವೆಯಲ್ಲಿ ಕೊಂಚ ಹೊಟ್ಟೆ ಕಾಣುತ್ತಿತ್ತು ಅಂತಾರೆ ಫ್ಯಾನ್ಸ್‌.

Latest Videos

click me!