ಸ್ಟೈಲಿಷ್ ರೆಡ್ ಗೌನ್​ನಲ್ಲಿ ರೋಸ್​​ನಂತೆ ಕಂಡ ನಭಾ ನಟೇಶ್‌: ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನೋಡಿ ಅಂತನ್ನೋದಾ!

First Published | Jul 14, 2024, 8:06 PM IST

ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ವಜ್ರಕಾಯ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ನಭಾ ನಟೇಶ್ ಬಿಡುಗಡೆಗೆ ಸಿದ್ದವಾಗಿರುವ ತೆಲುಗಿನ ಡಾರ್ಲಿಂಗ್ ಸಿನಿಮಾದಲ್ಲಿ ನಟಿಸಿದ್ದು, ಇದೀಗ ಹೊಸ ಫೋಟೋಶೂಟ್​ನಲ್ಲಿ ಮಿಂಚುತ್ತಿದ್ದಾರೆ.
 

ಶೃಂಗೇರಿಯ ಹುಡುಗಿ ನಭಾ ನಟೇಶ್‌ ಸಿನಿಮಾಗಳಿಗಿಂತಲೂ ಹೊಸ ಹೊಸ ಫೋಟೋ ಶೂಟ್‌ನಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆ ಇದೀಗ ಅವರ ನ್ಯೂ ಫೋಟೋಸ್ ಇದೀಗ ಸಖತ್ ವೈರಲ್ ಆಗುತ್ತಿವೆ.

ಸದ್ಯ ನಭಾ ನಟೇಶ್‌ ಧರಿಸಿರೋ ಸ್ಟೈಲಿಷ್ ರೆಡ್ ಗೌನ್ ಸಖತ್ ಇಂಟ್ರಸ್ಟಿಂಗ್ ಆಗಿದೆ. ಫುಲ್ ಫಿಟ್ & ಫೈನ್ ಅನಿಸೋ ಗೌನ್ ಧರಿಸಿಕೊಂಡು ನಭಾ ನಟೇಶ್ ಸಖತ್ ಆಗಿ ಮಿಂಚುತ್ತಿದ್ದಾರೆ. ಜೊತೆಗೆ ಡ್ರೆಸ್‌ಗೆ ಮ್ಯಾಚ್ ಆಗುವ ಹೇರ್‌ಸ್ಟೈಲ್ ಮತ್ತು ಮೇಕಪ್‌ನಲ್ಲಿ ನಭಾ ಕಂಗೊಳಿಸುತ್ತಿದ್ದಾರೆ.

Tap to resize

ರೆಡ್ ಗೌನ್ ಡ್ರೆಸ್‌ನಲ್ಲಿ ವಿಶೇಷವಾಗಿಯೇ ನಭಾ ನಟೇಶ್ ಪೋಸ್ ಕೊಟ್ಟಿದ್ದು, ಗ್ರೇ ಬ್ಯಾಗ್ರೌಂಡ್‌ನಲ್ಲಿಯೇ ನಭಾ ನಟೇಶ್ ವಿಭಿನ್ನವಾಗಿ ತರೇಹವಾರಿ ಅನಿಸೋ ಪೋಸ್ ಕೊಟ್ಟು ನೆಟ್ಟಿಗರ ಗಮನ ಸೆಳೆದಿದ್ದಾರೆ.

ರೆಡ್‌ ಡ್ರೆಸ್‌ನಲ್ಲಿ ಮಿಂಚಿರುವ ನಭಾ ನಟೇಶ್ ಫೋಟೋಶೂಟ್‌ ನೋಡಿ ನೆಟ್ಟಿಗರು ಲೈಕ್ಸ್ ಹಾಗೂ ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಜೊತೆಗೆ ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನೋಡಿ ಎಂದು ವಜ್ರಕಾಯದ ಚಿತ್ರದ ಹಾಡನ್ನು ಕಮೆಂಟ್‌ನಲ್ಲಿ ಹಾಕಿ ಹೊಗಳಿದ್ದಾರೆ.

ಅಪಘಾತದಿಂದ ಚೇತರಿಸಿಕೊಂಡ ಬಳಿಕ ನಭಾ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ತೆಲುಗಿನ ಡಾರ್ಲಿಂಗ್ ಚಿತ್ರದ ಮೂಲಕ ನಭಾ ನಟೇಶ್, ನಟ ಪ್ರಿಯಾದರ್ಶಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

ಸದ್ಯ ಡಾರ್ಲಿಂಗ್ ಚಿತ್ರದ ಪ್ರೋಮೋ ಝಲಕ್‌, ಪೋಸ್ಟರ್ ಲುಕ್‌ನಿಂದ ಸಿನಿಮಾ ಗಮನ ಸೆಳೆಯುತ್ತಿದೆ. ವಿಭಿನ್ನ ಪಾತ್ರದ ಮೂಲಕ ನಭಾ ಮತ್ತೆ ಕಮ್‌ ಬ್ಯಾಕ್ ಮಾಡುತ್ತಿದ್ದು, ಚಿತ್ರವನ್ನು ಹನುಮಾನ್ ಸಿನಿಮಾದ ನಿರಂಜನ್ ರೆಡ್ಡಿ ಬಂಡವಾಳ ಹೂಡಿದ್ದಾರೆ.

ಅಂದಹಾಗೆ ನಭಾ ನಟೇಶ್ ಸ್ವಯಂಭು ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಕೆಲಸ ಕೂಡ ನಡೆಯುತ್ತಿದೆ. ನಿಖಿಲ್ ಸಿದ್ಧಾರ್ಥ್‌ಗೆ  ನಾಯಕಿಯಾಗಿ ನಭಾ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಸಿನಿಮಾವಲ್ಲದೇ ನಭಾ ನಟೇಶ್ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಎಲ್ಲ ಚಿತ್ರಗಳಲ್ಲಿ ಇಸ್ಮಾರ್ಟ್ ಸಿನಿಮಾ ಹೆಚ್ಚು ಗಮನ ಸೆಳೆದಿತ್ತು. ನಂತರ ಡಿಸ್ಕೋ ರಾಜಾ ಸಿನಿಮಾದಲ್ಲೂ ನಭಾ ನಟೇಶ್ ಅಭಿನಯ ಜನರಿಗೆ ಇಷ್ಟವಾಗಿತ್ತು.
 

Latest Videos

click me!