ಮುಖದ ಮೇಲೆ ಕತ್ತರಿ, ಚಾಕು ಪ್ರಯೋಗ ಬೇಡ; ಪಾಸ್ಟಿಕ್‌ ಸರ್ಜರಿ ಬಗ್ಗೆ ಕಾಜೋಲ್ ಹೇಳಿಕೆ ವೈರಲ್!

First Published | Mar 26, 2024, 10:20 AM IST

ನ್ಯಾಚುಲರ್ ಬ್ಯೂಟಿ ಅನ್ನೋ ಪಟ್ಟ ಪಡೆದಿರುವ ಕಾಜೋಲ್‌...ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವ ಹೆಣ್ಣು ಮಕ್ಕಳಿಗೆ ಕಿವಿ ಮಾತು ಹೇಳಿದ್ದಾರೆ.

ಬಾಲಿವುಡ್ ಸುಂದರಿ ಕಾಜೋಲ್ ಯಾವುದೇ ರೀತಿಯ ಸರ್ಜರಿ ಅಥವಾ ಮುಖದ ಮೇಲೆ ಪ್ರಯೋಗಗಳನ್ನು ಮಾಡಿಲ್ಲ. ತಮ್ಮ ಬ್ಯೂಟಿಯನ್ನು ನ್ಯಾಚುರಲ್‌ ಆಗಿ ಕಾಪಾಡಿಕೊಂಡಿದ್ದಾರೆ.

ಈ ಹಿಂದೆ ಸಿನಿಮಾ ಪ್ರಚಾರ ಮಾಡುವಾಗ ಕಾಜೋಲ್‌ ಪ್ಲಾಸ್ಟಿಕ್‌ ಸರ್ಜರಿ ಬಗ್ಗೆ ಧ್ವನಿ ಎತ್ತಿದ್ದರು. ಕತ್ತರಿ, ಚಾಕುವಿನ ಪ್ರಯೋಗ ನಿಮ್ಮ ಸೌಂದರ್ಯದ ಮೇಲಾಗದಂತೆ ನೋಡಿಕೊಳ್ಳಿ ಎಂದಿದ್ದರು.
 

Tap to resize

ದೇವರು ನಿಮ್ಮನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಸೃಷ್ಟಿ ಮಾಡಿದ್ದಾನೆ. ದೇವರು ನಿಮಗೆ ಯಾವುದನ್ನು ಕೊಡಲಿಲ್ಲ ಎಂಬ ಕೊರಗು ನಿಮಗಿದೆಯೋ ಆ ಕೊರತೆಯನ್ನು ನೀಗಿಸಲು ಮೇಕ್ ಅಪ್ ಯಾವಾಗಲೂ ಇರುತ್ತದೆ. 

ಅದು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ನೀವು ಪ್ಲಾಸ್ಟಿಕ್ ಸರ್ಜರಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಕಾಜೋಲ್ ಹೇಳಿದ್ದಾರೆ. 
 

ಯಾರದೇ ಒತ್ತಡಕ್ಕೆ ಒಳಗಾಗಿ ನೀವು ಸರ್ಜರಿ ಮಾಡಿಸಿಕೊಳ್ಳುವುದು ಯೋಗ್ಯವಲ್ಲ. ನಿಮ್ಮ ಸೌಂದರ್ಯ ಹಾಗೂ ನಿಮ್ಮ ಜೀವನದ ಕುರಿತು ನೀವೇ ನಿರ್ಧಾರ ತೆಗೆದುಕೊಳ್ಳಬೇಕೇ ಹೊರತು ಇತರರು ಆಡುವ ಮಾತುಗಳಿಗೆ ಕಿವಿಕೊಡಬಾರದು 

ನನ್ನ ಬಣ್ಣದ ಕುರಿತು ಹಾಗೂ ನಾನು ದಪ್ಪಗಿದ್ದೇನೆ ಎಂದು ಹಲವಾರು ಮಂದಿ ಟೀಕಿಸಿದ್ದರು. ನಾನು ಅವರ ಮಾತಿಗೆ ಬೆಲೆ ನೀಡಲಿಲ್ಲ. ಅವರ ಮಾತುಗಳು ನನ್ನನ್ನು ದುರ್ಬಲಗೊಳಿಸದಂತೆ ನಾನು ನೋಡಿಕೊಂಡೆ ಎಂದು ಕಾಜೋಲ್ ಹೇಳಿದ್ದಾರೆ. 

ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ, ಶಿಲ್ಪಾ ಶೆಟ್ಟಿ, ಐಶ್ವರ್ಯಾ ರೈ ಬಚ್ಚನ್, ಅದಿತಿ ರಾವ್, ಕತ್ರಿನಾ ಕೈಫ್, ಕಂಗನಾ ರನೌತ್, ಪ್ರೀತಿ ಜಿಂಟಾ, ಬಿಪಾಶಾ ಬಸು,  ವಾಣಿ ಕಪೂರ್, ಸುಶ್ಮಿತಾ ಸೇನ್, ಆಯೇಶಾ ಟಾಕಿಯಾ, ಮೌನಿ ರಾಯ್, ಶ್ರುತಿ ಹಾಸನ್, ಜಾನ್ವಿ ಕಪೂರ್  ಸೇರಿದಂತೆ ಅನೇಕರ ಹೆಸರಿದೆ. 

Latest Videos

click me!