ಅಭಿಷೇಕ್‌ನಿಂದ ದೂರಾಗಿರುವ ವದಂತಿ ನಡುವೆಯೇ ಬಚ್ಚನ್ ಕುಟುಂಬದೊಂದಿಗೆ ಹೋಲಿ ದಹನ ಆಚರಿಸಿದ ಐಶ್ವರ್ಯಾ ರೈ

Published : Mar 25, 2024, 01:55 PM ISTUpdated : Mar 25, 2024, 02:40 PM IST

ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಬೇರಾಗುತ್ತಿದ್ದಾರೆ, ಐಶ್ವರ್ಯಾ ರೈ ಕಂಡರೆ ಅವರ ಅತ್ತೆ ಜಯಾ ಬಚ್ಚನ್‌ಗೆ ಆಗೋಲ್ಲವಂತೆ, ನಾದಿನಿ ಶ್ವೇತಾ ನಟಿ ಮೇಲೆ ಕಿಡಿ ಕಾರುತ್ತಾಳೆ ಎಂಬೆಲ್ಲ ವದಂತಿಗಳ ನಡುವೆಯೇ ಐಶ್ ಬೇಬಿ  ಬಚ್ಚನ್ ಕುಟುಂಬದೊಂದಿಗೆ ಹೋಲಿ ಕಾ ದಹನ ಹಬ್ಬ ಆಚರಿಸಿದ್ದಾರೆ.

PREV
18
ಅಭಿಷೇಕ್‌ನಿಂದ ದೂರಾಗಿರುವ ವದಂತಿ ನಡುವೆಯೇ ಬಚ್ಚನ್ ಕುಟುಂಬದೊಂದಿಗೆ ಹೋಲಿ ದಹನ ಆಚರಿಸಿದ ಐಶ್ವರ್ಯಾ ರೈ

ಬಚ್ಚನ್ ಕುಟುಂಬ ಎಲ್ಲಾ ಹಬ್ಬಗಳನ್ನು ಒಟ್ಟಿಗೆ ಆಚರಿಸಲು ಹೆಸರುವಾಸಿಯಾಗಿದೆ. ಜಗತ್ತು ಅಥವಾ ಮಾಧ್ಯಮ ವರದಿಗಳು ಏನೇ ಇರಲಿ, ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ತಮ್ಮ ಕುಟುಂಬವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ.

28

 ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ನಡುವಿನ ನಿರಂತರ ಕೌಟುಂಬಿಕ ಕಲಹದ ವರದಿಗಳ ನಡುವೆ, ಹೋಲಿಕಾ ದಹನ್ ಆಚರಣೆಗಾಗಿ ಕುಟುಂಬವು ಮತ್ತೆ ಒಟ್ಟಿಗೆ ಸೇರಿದ ಫೋಟೋಗಳು ಸೋಷ್ಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. 

38

ಜಯಾ ಬಚ್ಚನ್ ಮತ್ತು ಐಶ್ವರ್ಯಾ ವರ್ಷಗಳ ಬಳಿಕ ಒಟ್ಟಿಗೇ ಕಾಣಿಸಿಕೊಂಡು ವಿಷಯಗಳು ಹಗುರಾಗುತ್ತಿರುವುದರ ಸೂಚನೆ ನೀಡಿದ್ದಾರೆ. 

48

ಪ್ರತಿ ವರ್ಷದಂತೆ ಬಚ್ಚನ್‌ ಕುಟುಂಬ ಈ ವರ್ಷವೂ ಹೋಲಿಯನ್ನೂ ಜೋರಾಗಿ ಆಚರಿಸಿತು. ಈ ಸಂದರ್ಭದಲ್ಲಿ ಅಭಿಷೇಕ್, ಐಶ್ವರ್ಯಾ, ನವ್ಯಾ ನವೇಲಿ ನಂದಾ, ಅಮಿತಾಭ್, ಜಯಾ ಬಚ್ಚನ್ ಇರುವುದನ್ನು ಫೋಟೋಗಳಲ್ಲಿ ಕಾಣಬಹುದು.

58

ಹೀಗೆ ಬಚ್ಚನ್ ಕುಟುಂಬ ಹಬ್ಬದಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದರೂ, ಐಶ್ವರ್ಯಾ ಜೊತೆ ಅಂಥಾ ವಿಶೇಷ ಪ್ರೀತಿ ಯಾವುದೇ ಫೋಟೋದಲ್ಲಿ ಕಾಣುತ್ತಿಲ್ಲ ಎಂದು ನೆಟ್ಟಿಗರು ಆಕ್ಷೇಪ ಎತ್ತಿದ್ದಾರೆ. 

68

ಎಲ್ಲವೂ ಸರಿ ಇದೆ ಎಂದು ಬಚ್ಚನ್ ಕುಟುಂಬ ತೋರಿಸಲು ಹೆಣಗಾಡುತ್ತಿದ್ದರೂ, ಖಂಡಿತಾ ಅಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ನೆಟ್ಟಿಗರ ಆಂಬೋಣ. ಅಲ್ಲದೆ, ಐಶ್ವರ್ಯಾ ಬಚ್ಚನ್ ಮನೆ ಜಲ್ಸಾದಿಂದ ಹೊರ ಹೋಗಿ ಮಗಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.

78

ಅಂಬಾನಿ ಮನೆಯ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಬಚ್ಚನ್ ಕುಟುಂಬ ಎಲ್ಲರೂ ಒಟ್ಟಾಗಿ ಬಂದರೂ ಐಶ್ವರ್ಯಾ ತಮ್ಮ ಅತ್ತೆ ಜಯಾ ಬಚ್ಚನ್ ಹಾಗೂ ನಾದಿನಿ ಶ್ವೇತಾ ಬಚ್ಚನ್ ಮತ್ತು ಮಾವ ಅಮಿತಾಬ್ ಬಚ್ಚನ್‌ರಿಂದ ಕೊಂಚ ಅಂತರ ಕಾಯ್ದುಕೊಂಡೇ ಇದ್ದರು. 

88

ಒಟ್ಟಿನಲ್ಲಿ ಬಚ್ಚನ್ ಕುಟುಂಬದಲ್ಲಿ ಜಡೆ ಜಗಳ ಕೋಲ್ಡ್ ವಾರ್ ರೂಪದಲ್ಲಿರುವಂತಿದೆ. ಎಲ್ಲ ಪೋಸ್ಟ್‌ಗಳನ್ನು ಗಮನಿಸುವಾಗ ಕುಟುಂಬದೊಂದಿಗೆ ಹೊಂದಿಕೊಳ್ಳಲು ಐಶ್ವರ್ಯಾ ಪ್ರಯತ್ನ ಪಡುತ್ತಿರುವುದು ಸ್ಪಷ್ಟವಾಗಿದೆಯಾದರೂ ಎಲ್ಲವೂ ಸರಿಯಾಗುತ್ತಿಲ್ಲ ಎಂಬುದು ಸ್ಪಷ್ಚವಾಗಿದೆ.

Read more Photos on
click me!

Recommended Stories