ಸ್ಟಾರ್ ಹೋಟೆಲ್‌ ಬಾಗಿಲು ತಟ್ಟಿ ತಟ್ಟಿ ಕಿರಿಕ್ ಮಾಡಿದ ವಿದ್ಯಾ ಬಾಲನ್; ಭಿಕ್ಷೆ ಬೇಡಿದ್ದು ನಿಜವೇ?

Published : Mar 25, 2024, 01:52 PM ISTUpdated : Mar 25, 2024, 02:52 PM IST

ಸ್ಟಾರ್ ಹೋಟೆಲ್‌ ಎದುರು ಭಿಕ್ಷೆ ಬೇಡಿದ ವಿದ್ಯಾ. ಸ್ನೇಹಿತರು ಹಾಕಿರುವ ಜಾಲೆಂಜ್‌ ಹೇಗೆ ಸ್ವೀಕರಿಸಿದ್ದರು ಗೊತ್ತಾ?

PREV
110
ಸ್ಟಾರ್ ಹೋಟೆಲ್‌ ಬಾಗಿಲು ತಟ್ಟಿ ತಟ್ಟಿ ಕಿರಿಕ್ ಮಾಡಿದ ವಿದ್ಯಾ ಬಾಲನ್; ಭಿಕ್ಷೆ ಬೇಡಿದ್ದು ನಿಜವೇ?

ಬಾಲಿವುಡ್ ಬೋಲ್ಡ್‌ ನಟಿ ವಿದ್ಯಾ ಬಾಲನ್ ನಟಿಯಾದ ಮೇಲೆ ಸ್ನೇಹಿತರು ಹಾಕಿದ ಭಿಕ್ಷೆ ಬೇಡುವ ಚಾಲೆಂಜ್‌ನ ಹೇಗೆ ಸ್ವೀಕರಿಸಲು ಗೊತ್ತಾ? ಘಟನೆ ರಿವೀಲ್ ಮಾಡಿದ್ದಾರೆ. 

210

ಹಿಂದೊಮ್ಮೆ ವಿದ್ಯಾ ಬಾಲನ್​ ಹೋಟೆಲ್​ ಎದುರು ಭಿಕ್ಷೆ ಬೇಡಿದ್ದರಂತೆ. ಈ ಕುರಿತು ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.  ಆ ಸಂದರ್ಭಧಲ್ಲಿ ನಾನು ಇಂಡಿಯಾ ಮ್ಯೂಸಿಕ್ ಗ್ರೂಪ್ ಗಾಗಿ ಕೆಲಸ ಮಾಡುತ್ತಿದ್ದೆ.

310

ಪ್ರತಿ ವರ್ಷ ಶಾಸ್ತ್ರೀಯ ಸಂಗೀತ ಕಛೇರಿ, ಭಾರತೀಯ ಶಾಸ್ತ್ರೀಯ ಸಂಗೀತ ಕಚೇರಿಯನ್ನು ಆಯೋಜಿಸುತ್ತಿದ್ದರು. ಅದೊಮ್ಮೆ 3 ದಿನಗಳ ಕಾಲ ಡೇ ಅಂಡ್ ನೈಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು. 

410

ಆ ಸಂದರ್ಭದಲ್ಲಿ ನಾನು ಭಿಕ್ಷೆ ಬೇಡುವ ಸ್ಥಿತಿ ಎದುರಾಯಿತು ಎಂದಿದ್ದಾರೆ.ವಿದ್ಯಾ ಬಾಲನ್​ ಅವರು  ಸಂಘಟನಾ ಸಮಿತಿಯ ಭಾಗವಾಗಿದ್ದರು.  ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದರು.  
 

510

ಈ ಸಂದರ್ಭದಲ್ಲಿ ಆ ದಿನ ಕಾರ್ಯಕ್ರಮ ಮುಗಿದ ಬಳಿಕ  ನಾರಿಮನ್ ಪಾಯಿಂಟ್​ ಬಳಿ ಇರುವ ಹೋಟೆಲ್​ ಎದುರು ವಿದ್ಯಾ ಬಾಲನ್​ ಭಿಕ್ಷೆ ಬೇಡಿದ್ದರಂತೆ. 

610

ಅಷ್ಟಕ್ಕೂ ಆಗಿದ್ದೇನೆಂದರೆ, ಇದು ವಿದ್ಯಾ ಬಾಲನ್​ ಅವರ ಸ್ನೇಹಿತೆಯೊಬ್ಬರು ಚಾಲೆಂಜ್​ ಹಾಕಿದ್ದದರಂತೆ. ಈ ಕುರಿತು ನಟಿ ಹೇಳಿದ್ದೇನೆಂದರೆ, ಆ ಸಂದರ್ಭದಲ್ಲಿ ಚಾಲೆಂಜ್​ ಮಾಡುವುದು ನಮ್ಮ ಸ್ನೇಹಿತ ವರ್ಗಕ್ಕೆ ಸಕತ್​ ಖುಷಿ ತರುತ್ತಿತ್ತು.  
 

710

ಅದರಂತೆಯೇ ನನ್ನ ಸ್ನೇಹಿತೆ ಒಬ್ಬಳು  ಚಾಲೆಂಜ್ ಹಾಕಿದ್ದಳು. ಆ ಚಾಲೆಂಜ್​ ಪ್ರಕಾರ,  ಮಧ್ಯರಾತ್ರಿ ಓಬೆರಾಯ್-ದಿ ಪಾಮ್ಸ್ ಕಾಫಿ ಶಾಪ್​ನ  ಮುಂದೆ ಭಿಕ್ಷೆ ಬೇಡಬೇಕಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿ ಭಿಕ್ಷೆ ಬೇಡಲು ಹೋಗಿದ್ದೆ ಎಂದು ನಟಿ ಹೇಳಿದ್ದಾರೆ.

810

ಮಧ್ಯರಾತ್ರಿ  ಕಾಫಿ ಶಾಪ್  ಬಾಗಿಲು ತಟ್ಟಲು ಶುರು ಮಾಡಿದೆ. ಅಲ್ಲಿದ್ದವರಿಗೆ ಯಾರಿಗೂ ನಾನು ನಟಿ ಎಂದು ತಿಳಿಯಲಿಲ್ಲ.  ಬಾಗಿಲು ತಟ್ಟಿ ತಟ್ಟಿ ಕಿರಿಕಿರಿ ಮಾಡಿದೆ.

910

ನನಗೆ ಮುಜುಗರ ಆಗುತ್ತಲೇ ಇದ್ದರೂ ಚಾಲೆಂಜ್​ ಗೆಲ್ಲಬೇಕಿತ್ತು. ನಂತರ ನಾನು ಒಂದೇ ಸಮನೆ ಬಾಗಿಲು ತಟ್ಟುತ್ತ,  ದಯವಿಟ್ಟು, ನನಗೆ ಹಸಿವಾಗಿದೆ. 
 

1010

ನಿನ್ನೆಯಿಂದ ನಾನು ಏನನ್ನೂ ತಿಂದಿಲ್ಲ. ತಿನ್ನಲು ಏನಾದರೂ ಕೊಡು ಎಂದು ಕೇಳುತ್ತಲೇ ಇದ್ದೆ ಎಂದು ವಿದ್ಯಾ ಬಾಲನ್​ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories