ಬರೋಬ್ಬರಿ ಮೂರು ಪ್ಯಾನ್ ಇಂಡಿಯಾ ಸಿನ್ಮಾಗೆ ಹೀರೋಯಿನ್ ಆದ ಬಾಲಿವುಡ್ ನಟಿ, ಆಲಿಯಾ, ದೀಪಿಕಾ ಅಲ್ಲ!

Published : Feb 09, 2024, 11:02 AM ISTUpdated : Feb 09, 2024, 11:10 AM IST

ಬಾಲಿವುಡ್‌ನಲ್ಲಿ ಹಲವಾರು ದಕ್ಷಿಣ ಭಾರತದ ಮೂವಿಗಳು ಬ್ಲಾಕ್‌ಬಸ್ಟರ್‌ ಆಗಿವೆ. ಹೀಗಾಗಿ ಬಾಲಿವುಡ್ ನಟ-ನಟಿಯರು, ಸೌತ್ ನಿರ್ಮಾಪಕರೊಂದಿಗೆ ಕೆಲ್ಸ ಮಾಡೋಕೆ ಆಸಕ್ತಿ ತೋರಿಸುತ್ತಿದ್ದಾರೆ. ಸದ್ಯ ಬರೋಬ್ಬರಿ 300 ಕೋಟಿಯ ಪ್ಯಾನ್ ಇಂಡಿಯಾ ಸಿನ್ಮಾದಲ್ಲಿ ನಟಿಸೋಕೆ ಈ ಬಾಲಿವುಡ್ ನಟಿ ಆಯ್ಕೆಯಾಗಿದ್ದಾರೆ. ಆಕೆ ಆಲಿಯಾ, ದೀಪಿಕಾ ಅಲ್ಲ..ಮತ್ಯಾರು?

PREV
19
ಬರೋಬ್ಬರಿ ಮೂರು ಪ್ಯಾನ್ ಇಂಡಿಯಾ ಸಿನ್ಮಾಗೆ ಹೀರೋಯಿನ್ ಆದ ಬಾಲಿವುಡ್ ನಟಿ, ಆಲಿಯಾ, ದೀಪಿಕಾ ಅಲ್ಲ!

ಬಾಲಿವುಡ್‌ನಲ್ಲಿ ಇತ್ತೀಚಿಗೆ ಹಿಂದಿ ಸಿನಿಮಾಗಳಿಗಿಂತಲೂ ಸೌತ್‌ ಸಿನಿಮಾಗಳೇ ಹೆಚ್ಚು ಸೌಂಡ್ ಮಾಡ್ತಿವೆ. RRR, KGF ಪಾರ್ಟ್‌ 2, ಪುಷ್ಪ ದಿ ರೂಲ್, ಪಾರ್ಟ್‌ 1ನಂತಹ ಹಲವಾರು ದಕ್ಷಿಣ ಭಾರತದ ಮೂವಿಗಳು ಬ್ಲಾಕ್‌ಬಸ್ಟರ್‌ ಆಗಿವೆ. ಹೀಗಾಗಿ ಬಾಲಿವುಡ್ ನಟ-ನಟಿಯರು, ಸೌತ್ ನಿರ್ಮಾಪಕರೊಂದಿಗೆ ಕೆಲ್ಸ ಮಾಡೋಕೆ ಆಸಕ್ತಿ ತೋರಿಸುತ್ತಿದ್ದಾರೆ.

29

ಈಗಾಗಲೇ ದಕ್ಷಿಣದ ನಿರ್ದೇಶಕರ ಎರಡು ಪ್ರಮುಖ ಚಿತ್ರಗಳಾದ 'ಜವಾನ್' ಮತ್ತು 'ಅನಿಮಲ್.' ಬಾಲಿವುಡ್‌ನಲ್ಲಿ ಸಕ್ಸಸ್ ಆಗಿದೆ. ಆಲಿಯಾ ಭಟ್,‌ ಕಿಯಾರಾ ಅಡ್ವಾನಿ, ಐಶ್ವರ್ಯಾ ರೈ ಹೀಗೆ ಹಲವು ನಟಿಯರು ಸೌತ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ, ಮತ್ತೊಬ್ಬ ಬಾಲಿವುಡ್ ನಟಿ ಮೂರು ಪ್ರಮುಖ ಪ್ಯಾನ್-ಇಂಡಿಯಾ ಚಿತ್ರಗಳಲ್ಲಿ ಪ್ರಮುಖ ನಟಿಯಾಗಿ ನಟಿಸಲು ಸಿದ್ಧರಾಗಿದ್ದಾರೆ. 

39

ಆಕೆ ಮತ್ಯಾರೂ ಅಲ್ಲ. ಶ್ರೀದೇವಿ ಪುತ್ರಿ ಜಾನ್ವಿ ಕಪೂರ್. ಜ್ಯೂನಿಯರ್ ಎನ್‌ಟಿಆರ್‌ ನಟಿಸಲಿರುವ ದೇವರಾ: ಪಾರ್ಟ್‌ 1 ಸಿನಿಮಾದಲ್ಲಿ ಜಾನ್ವಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರ್ತಿದೆ. ಕೊರಟಾಲ ಶಿವ ನಿರ್ದೇಶನದ ಪ್ಯಾನ್-ಇಂಡಿಯಾ ಚಿತ್ರವು ಏಪ್ರಿಲ್ 5ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

49

ಜಾನ್ವಿ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳೊಂದಿಗೆ ಇನ್ನೂ ಎರಡು ಚಿತ್ರಗಳಿಗೆ ಸಹಿ ಹಾಕಿದ್ದಾರೆ ವರದಿಯಾಗಿದೆ. ಮೊದಲನೆಯದು ಜೂನಿಯರ್ ಎನ್‌ಟಿಆರ್‌ನ ಆರ್‌ಆರ್‌ಆರ್ ಸಹನಟ ರಾಮ್ ಚರಣ್ ಜೊತೆ. ಬುಚ್ಚಿ ಬಾಬು ನಿರ್ದೇಶಿಸಲಿರುವ ರಾಮ್ ಚರಣ್ ಜೊತೆಗಿನ ಆರ್‌ಸಿ 16 ಕ್ಕೆ ಜಾನ್ವಿ ಇತ್ತೀಚೆಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.

59

ಸೂರ್ಯ ನಟನೆಯ ಮುಂಬರುವ ಚಿತ್ರದಲ್ಲೂ ಜಾನ್ವಿ ಅಭಿನಯಿಸಲಿದ್ದಾರೆ. ಸೂರ್ಯ ಅಭಿನಯದ 'ಕರ್ಣ' ಚಿತ್ರದಲ್ಲಿ ದ್ರೌಪದಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಕೇಶ್ ಓಂಪ್ರಕಾಶ್ ಮೆಹ್ರಾ-ನಿರ್ದೇಶನದ 'ಕರ್ಣ'ದಲ್ಲಿ ದ್ರೌಪದಿಯ ಪಾತ್ರವನ್ನು ಮಾಡಲು ಜಾನ್ವಿ ಸಜ್ಜಾಗಿದ್ದಾರೆ. 

69

ನಟಿ ಶೀಘ್ರದಲ್ಲೇ ಹಿಂದಿ ರೊಮ್ಯಾಂಟಿಕ್ ಕಾಮಿಡಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಅದರಲ್ಲಿ ಅವರು ತಮ್ಮ ನಟ ವರುಣ್ ಧವನ್ ಜೊತೆ ನಟಿಸಲಿದ್ದಾರೆ. ಈ ಚಿತ್ರವನ್ನು ಧರ್ಮಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಶಶಾಂಕ್ ಖೈತಾನ್ ನಿರ್ದೇಶಿಸಿದ್ದಾರೆ. ಉಳಿದ ಮೂರು ಚಿತ್ರಗಳ ಶೂಟಿಂಗ್ ಮುಂಬರುವ ತಿಂಗಳುಗಳಲ್ಲಿ ಪ್ರಾರಂಭವಾಗಲಿದ್ದು, ಜಾನ್ವಿ ವರ್ಷವಿಡೀ ಬ್ಯುಸಿಯಾಗಿರಲಿದ್ದಾರೆ.

79

ಜಾನ್ವಿ ಸಾಮಾನ್ಯವಾಗಿ ಹಿಂದಿ ಚಿತ್ರಕ್ಕೆ 3.5 ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ ತೆಲುಗಿನಲ್ಲಿ ನಟಿಸಲು ಶ್ರೀದೇವಿ ಮಗಳು 5 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

89

ಜಾನ್ವಿ ಕಪೂರ್ ಅವರು ಬಾಲಿವುಡ್​ನಲ್ಲಿ ಸಕ್ರಿಯ ನಟಿ. ಅವರು ಯಾವುದೇ ಬ್ರೇಕ್ ಇಲ್ಲದೆ ಸಾಲು ಸಾಲು ಪ್ರಾಜೆಕ್ಟ್ ಒಪ್ಪಿಕೊಂಡು ಮಾಡುತ್ತಲೇ ಇರುತ್ತಾರೆ. ಆದರೆ ಅವರ ಮೊದಲ ಸೌತ್ ಸಿನಿಮಾವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ.

99

ಜಾನ್ವಿ ಕಪೂರ್ ಅವರ ತಂದೆ ಬೋನಿ ಕಪೂರ್ ಅವರು ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಸಕ್ರಿಯರಾಗಿದ್ದರೂ ಅವರ ಪುತ್ರಿಯರು ಇನ್ನೂ ದಕ್ಷಿಣದ ಚಿತ್ರರಂಗದತ್ತ ಒಲವು ತೋರಿಸಿರಲಿಲ್ಲ. ಇದು ಜಾನ್ವಿಗೆ ಮೊದಲ ಸೌತ್ ಸಿನಿಮಾ.

Read more Photos on
click me!

Recommended Stories