ಇತ್ತೀಚೆಗೆ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬೇರ್ಪಡುತ್ತಿದ್ದಾರೆ ಎಂಬ ವದಂತಿಗಳು ಹೆಚ್ಚಾಗಿ ಹರಿದಾಡುತ್ತಿವೆ. ಅಂಬಾನಿ ಮದುವೆಯಲ್ಲೂ ಇವರಿಬ್ಬರು ದೂರ ದೂರ ಇದ್ದರು. ಇದಲ್ಲದೆ, ಈಗ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದಾಗಿ ಇವರ ವಿಚ್ಛೇದನದ ವದಂತಿಗಳು ಸಂಚಲನ ಮೂಡಿಸಿವೆ. ಆದಾಗ್ಯೂ, ಈ ಬಗ್ಗೆ ಐಶ್ವರ್ಯಾ ಅಥವಾ ಅಭಿಷೇಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ವದಂತಿಗಳಿಗೆ ಪುಷ್ಠಿ ನೀಡುತ್ತದೆ.