ವದಂತಿಗಳನ್ನು ಅರ್ಥಹೀನವೆಂದ ಐಶ್ವರ್ಯಾ, ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲವೆಂದಿದ್ದರು. ಅಂತಹ ವಿಷಯಗಳನ್ನು ತಮ್ಮ ಕುಟುಂಬದ ಮುಖ್ಯಸ್ಥರಿಗೆ ಬಿಡುವುದಾಗಿ ಹೇಳಿ ಕೊಂಡಿದ್ದರು. ನಂತರ, ಅವರ ಮಾವ ಅಮಿತಾಬ್ ಬಚ್ಚನ್, ಹರಿದಾಡುತ್ತಿದ್ದ ಗಾಳಿ ಸುದ್ದಿಗೆ ಸ್ಪಷ್ಟನೆ ನೀಡಲು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿ, ಊಹಾಪೋಹಗಳಿಗೆ ತೆರೆ ಎಳೆದರು.