ಮೊದಲ ಭೇಟಿಯಲ್ಲೇ ಕತ್ರಿನಾ ಕೈಫ್‌ಗೆ ಪ್ರಪೋಸ್‌ ಮಾಡಿದ ವಿಕ್ಕಿ ಕೌಶಲ್‌!

Published : Jun 01, 2023, 04:25 PM IST

ಬಾಲಿವುಡ್‌ನ ಜನಪ್ರಿಯ ಜೋಡಿ ವಿಕ್ಕಿ ಕೌಶಲ್ (Vicky Kaushal)  ಮತ್ತು ಕತ್ರಿನಾ ಕೈಫ್ (Katrina Kaif)  ಆಗಾಗ ಒಂದಲ್ಲ ಒಂದು ಕಾರಣಕ್ಕೆ ಮುಖ್ಯಾಂಶಗಳಲ್ಲಿ ಇರುತ್ತಾರೆ. ಈಗ ಇತ್ತೀಚಿನ ಸಂಭಾಷಣೆಯ ಸಮಯದಲ್ಲಿ, ವಿಕ್ಕಿ ತನ್ನ ಮತ್ತು ಕತ್ರಿನಾಳ ಮೊದಲ ಭೇಟಿ ಯಾವಾಗ ಮತ್ತು ಎಲ್ಲಿ ಎಂದು ಬಹಿರಂಗಪಡಿಸಿದರು?

PREV
18
ಮೊದಲ ಭೇಟಿಯಲ್ಲೇ ಕತ್ರಿನಾ ಕೈಫ್‌ಗೆ ಪ್ರಪೋಸ್‌ ಮಾಡಿದ ವಿಕ್ಕಿ ಕೌಶಲ್‌!

ವಿಕ್ಕಿ ಮತ್ತು ಕತ್ರಿನಾ ಮೊದಲು ಭೇಟಿಯಾದದ್ದು ಪ್ರಶಸ್ತಿ ಕಾರ್ಯಕ್ರಮವೊಂದರಲ್ಲಿ. ಕಾರ್ಯಕ್ರಮವನ್ನು ವಿಕ್ಕಿ ಮತ್ತು ಆಯುಷ್ಮಾನ್ ಖುರಾನಾ ಜಂಟಿಯಾಗಿ ಹೋಸ್ಟ್ ಮಾಡಿದ್ದರು. 

28

ಪ್ರಶಸ್ತಿ ಕಾರ್ಯಕ್ರಮದಲ್ಲಿ ವಿಕ್ಕಿ ಕತ್ರಿನಾಗೆ ಪ್ರಪೋಸ್ ಮಾಡಿದ್ದರು. ವಿಕ್ಕಿ ಮತ್ತು ಕತ್ರಿನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ, ಕಾರ್ಯಕ್ರಮದ ಕ್ಲಿಪ್ ಕೂಡ ವೈರಲ್ ಆಗಿತ್ತು, 

38

ಇದರಲ್ಲಿ ವಿಕ್ಕಿ ಕತ್ರಿನಾಗೆ, 'ನೀವು ಒಳ್ಳೆಯ ವಿಕ್ಕಿ ಕೌಶಲ್‌ ಅನ್ನು ಹುಡುಕಿಕೊಂಡು ಏಕೆ ಮದುವೆಯಾಗಬಾರದು? ಮದುವೆ ಸೀಸನ್ ನಡೆಯುತ್ತಿದೆ. ಹಾಗಾಗಿ ನಿಮಗೂ  ಹಾಗೆ ಅನ್ನಿಸುತ್ತಿರಬೇಕು ಎಂದು ನಾನು ಅಂದುಕೊಂಡೆ, ಅದಕ್ಕೇ ಕೇಳಿದೆ,' ಎಂದು ಹೇಳಿದ್ದಾರೆ.
 

48

ಈ ಜೋಡಿಯ ಮದುವೆಯ ನಂತರ ಅವರಿಬ್ಬರ ಈ ಕ್ಲಿಪ್ ವೈರಲ್ ಆಗಿದ್ದು, ಕತ್ರಿನಾ ವಿಕ್ಕಿಯ ಮಾತನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದಾರೆಂಬುವುದು ಅವರ ಮುಖದಲ್ಲೇ ಸ್ಪಷ್ಟವಾಗಿತ್ತು.

58

ಇದು ಇವರಿಬ್ಬರ ಮೊದಲ ಭೇಟಿ. ಆದರೆ, ಈಗ ವಿಕ್ಕಿ ಕೌಶಲ್ ಅವರು ಕತ್ರಿನಾ ಅವರಿಗಾಗಿ ಮಾತನಾಡಿದ ಈ ಸಾಲುಗಳನ್ನು ಸ್ಕ್ರಿಪ್ಟ್ ಮಾಡಲಾಗಿತ್ತು ಎಂಬುವುದೂ ಇದೀಗ ಬಹಿರಂಗಗೊಂಡಿದೆ.

68

ಯಾವ ನಟಿಯೇ ವೇದಿಕೆಗೆ ಬರಲಿ, ಅವರಿಗೆ ಈ ಮಾತುಗಳನ್ನು ಹೇಳಬೇಕೆಂದು ನಂಗೆ ಗೊತ್ತಿತ್ತು. ಆದರೆ ಕತ್ರಿನಾಳನ್ನು ನೋಡಿ ವಿಕ್ಕಿಗೆ ಮೂಡಿದ ಭಾವವೇ ಬೇರೆ. ಶಾಕ್ ಆಗಿದ್ದು, ಆಡಿದ ಮಾತುಗಳು ಹೃದಯದಿಂದ ಹೊರಹೊಮ್ಮಿದ್ದವು ಎಂದಿದ್ದಾರೆ.


 

78

ಈ ಪ್ರಶಸ್ತಿ ಕಾರ್ಯಕ್ರಮದ ನಂತರ ವಿಕ್ಕಿ ಮತ್ತು ಕತ್ರಿನಾ ಉತ್ತಮ ಸ್ನೇಹಿತರಾದರು ಮತ್ತು ಯಾವಾಗಲೂ  ಜೊತೆಯಾಗಿಯೇ ಸಮಯ ಕಳೆಯಲು ಪ್ರಾರಂಭಿಸಿದರು

88

3 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ನಂತರ, ಇಬ್ಬರೂ 2021 ರಲ್ಲಿ ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್‌ನಲ್ಲಿ ವಿವಾಹವಾದರು.

Read more Photos on
click me!

Recommended Stories