ಟಾಲಿವುಡ್ ಸ್ಟಾರ್ ನಟಿ ಸಮಂತಾ ಮತ್ತು ಸೆನ್ಸೇಷನ್ ಹೀರೋ ವಿಜಯ್ ದೇವರಕೊಂಡ ಇಬ್ಬರೂ ಟರ್ಕಿಯಲ್ಲಿದ್ದಾರೆ. ಟಿರ್ಕಿಯಲ್ಲಿ ಮಸ್ತ್ ಎಂಜಾಯ್ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ವಿಜಯ್ ದೇವರಕೊಂಡ ಜೊತೆ ಸಮಂತಾ ಟರ್ಕಿಯಲ್ಲಿ ಏನ್ ಮಾಡ್ತಿದ್ದಾರೆ ಅಂತೀರ. ಇಬ್ಬರೂ ಶೂಟಿಂಗ್ ಪ್ರಯುಕ್ತ ಟರ್ಕಿಯಲ್ಲಿ ಬೀಡುಬಿಟ್ಟಿದ್ದಾರೆ. ಸಮಂತಾ ಸದ್ಯ ಮತ್ತು ದೇವರಕೊಂಡ ಇಬ್ಬರೂ ಖುಷಿ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣ ಸದ್ಯ ಟರ್ಕಿಯಲ್ಲಿ ನಡೆಯುತ್ತಿದ್ದು ಸಮಂತಾ ಮತ್ತು ದೇವರಕೊಂಡ ಸೇರಿದಂತೆ ಸಿನಿಮಾತಂಡದ ಅನೇಕರು ಟರ್ಕಿಯಲ್ಲಿದ್ದಾರೆ.
ಈಗಾಗಲೇ ಖುಷಿ ಸಿನಿಮಾದ ಪೋಸ್ಟರ್ ಮೂಲಕ ಸಮಂತಾ ದೇವರಕೊಂಡ ಅಭಿಮಾನಿಗಳ ಗಮನ ಸೆಳೆದಿದ್ದರು. ಸಾಂಗ್ ಕೂಡ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಸಮಂತಾ ಮುಸ್ಲಿಂ ಯುವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬುರ್ಕಾ ಧರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಹಸಿರು ಬಣ್ಣದ ಅದ್ದೂರಿ ಗೌನ್‌ನಲ್ಲಿ ಸಮಂತಾ ಮಿಂಚಿದ್ದಾರೆ. ಹುಲ್ಲು ಹಾಸಿನ ಮೇಲೆ ಹಾಯಾಗಿ ಮಲಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ ಸಮಂತಾ. ದುಬಾರಿ ಗೌನ್ ಇದಾಗಿದ್ದು ವಿ ನೆಕ್ ಇದೆ. ಜೊತೆಗೆ ಹೈ ಹೀಲ್ಸ್ ಧರಿಸಿದ್ದಾರೆ.
ಸಮಂತಾ ಧರಿಸಿರುವ ಬಟ್ಟೆಯ ಬೆಲೆ ಬರೋಬ್ಬರಿ 1,58,000 ಎಂದು ವರದಿಯಾಗಿದೆ. ದುಬಾರಿ ಗೌನ್ ನಲ್ಲಿ ಸಮಂತಾ ಟರ್ಕಿಯಲ್ಲಿ ಮಿಂಚುತ್ತಿದ್ರೆ, ಇತ್ತ ದೇವರಕೊಂಡ ಕೆಫೆಯಲ್ಲಿ ಕೇಕ್, ಕಾಫಿ ಸವಿಯುತ್ತಿದ್ದಾರೆ. ಫೋಟೋ ಶೇರ್ ಮಾಡಿ ಟರ್ಕಿ ಮತ್ತು ಫುಡ್ ಎಂದು ಕ್ಯಾಪ್ಷನ್ ನೀಡಿ ಫೋಟೋ ಶೇರ್ ಮಾಡಿದ್ದಾರೆ.
ವಿಜಯ್ ದೇವರಕೊಂಡ ಶೇರ್ ಮಾಡಿರುವ ಮತ್ತೊಂದು ಫೋಟೋದಲ್ಲಿ ಭರ್ಜರಿ ಭೋಜನ ಮಾಡುತ್ತಿದ್ದಾರೆ. ಊಟದ ತಟ್ಟೆಯ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ದೇವವರಕೊಂಡ ಮತ್ತು ಸಮಂತಾ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ.