ಬಾಲಿವುಡ್ ಕೃಷ್ಣ ಸುಂದರಿ ಬಿಪಾಶ ಬಸು ಮತ್ತು ಪತಿ ಕಿರಣ್ ಸಿಂಗ್ ಗ್ರೋವರ್ ಮಗಳಿಗಾಗಿ ಹೊಸ ಐಷಾರಾಮಿ ಕಾರು ಖರೀದಿಸಿದ್ದಾರೆ.
ಬಿಳಿ ಬಣ್ಣದ Audi Q7 ಕಾರನ್ನು ಖರೀದಿಸಿದ್ದಾರೆ. 'ದೇವಿ new ride' ಎಂದು ಬಿಪಾಶಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಈ ಕಾರಿನ ಬೆಲೆ ಸುಮಾರು 87 ಲಕ್ಷದಿಂದ 92 ಲಕ್ಷವಿದೆ. ಮಾಡೆಲ್, ಡಿಸೈನ್ ಹಾಗೂ ಇನ್ನಿತ್ತರ ಅಗತ್ಯಗಳನ್ನು ಅಳವಡಿಸಿಕೊಂಡರೆ 95 ಲಕ್ಷ ರೂಪಾಯಿ ಮುಟ್ಟುತ್ತದೆ.
ಕೆಲವು ದಿನಗಳ ಹಿಂದೆ ಮಗಳಿಗೆ 6 ತಿಂಗಳಾಗಿದೆ ಎಂದು ಬರೆದುಕೊಂಡು ಕೇಕ್ ಕಟ್ ಮಾಡಿ ಮನೆಯಲ್ಲಿ ಸರಳವಾಗಿ ಆಚರಿಸಿದ್ದಾರೆ .
ದೇವಿ ನೋಡಲು ಹೇಗಿದ್ದಾಳೆ, ಯಾರಂತಿದ್ದಾಳೆ ಪ್ರತಿಯೊಂದರ ಬಗ್ಗೆ ನೆಟ್ಟಿಗರಿಗೆ ಕ್ಯೂರಿಯಾಸಿಟಿ ಹೆಚ್ಚಿದೆ. ಮುಖ ರಿವೀಲ್ ಮಾಡಲು ಡಿಮ್ಯಾಂಡ್ ಮಾಡುತ್ತಿದ್ದಾರೆ.
ಬಿಪಾಶ ಬಸು ಮಗುವಿಗೆ ದೇವಿ ಎಂದು ಹೆಸರಿಟ್ಟಾಗಿ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಅಭಿಪ್ರಾಯ ವ್ಯಕ್ತವಾಗಿತ್ತು. ದೇವರ ಹೆಸರು ಹಿಂದು ಹೆಸರು ಎಂದು ಸುಮ್ಮನಾದರು.
Vaishnavi Chandrashekar