Actor Apology : ಬಹಿರಂಗವಾಗಿ ನಟಿ ಪ್ರೀತಿ ಜಿಂಟಾ ಕ್ಷಮೆ ಕೇಳಿದ ಹಿರಿಯ ನಟ ಸಂಜಯ್ ಖಾನ್!

Published : Nov 23, 2021, 11:31 PM IST

ಮುಂಬೈ(ನ. 23)  ಬಾಲಿವುಡ್ (Bollywood) ಹಿರಿಯ ಕಲಾವಿದ(Veteran actor), ನಟ ಸಂಜಯ್ ಖಾನ್ (Sanjay Khan)ಬಹಿರಂಗವಾಗಿ ನಟಿ ಪ್ರೀತಿ ಜಿಂಟಾರ (Preity Zinta)ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ಅಂಥ ದೊಡ್ಡ ತಪ್ಪು ಏನು ಮಾಡಿದರು ಅಂದ್ರಾ?

PREV
17
Actor Apology : ಬಹಿರಂಗವಾಗಿ ನಟಿ ಪ್ರೀತಿ ಜಿಂಟಾ ಕ್ಷಮೆ ಕೇಳಿದ ಹಿರಿಯ ನಟ ಸಂಜಯ್ ಖಾನ್!

ಹಿರಿಯ ನಟ ಸಂಜಯ್ ಖಾನ್ ಪ್ರೀತಿ ಜಿಂಟಾಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದು ಕಾರಣವನ್ನು ಹೇಳಿದ್ದಾರೆ.  ತಮ್ಮ ಮಗಳು ಸಿಮೋನ್ ವಿಮಾನದಲ್ಲಿ ಪ್ರೀತಿ ಅವರನ್ನು ಪರಿಚಯಿಸಿದರೂ ತಾನು ಗುರುತಿಸುವಲ್ಲಿ ವಿಫಲನಾದೆ. ಇದೆ ಕಾರಣಕ್ಕೆ ಕ್ಷಮೆಯಾಚಿಸುತ್ತಿದ್ದೇನೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

27

ದುಬೈಗೆ ತೆರಳಬೇಕಿದ್ದ ವಿಮಾನದಲ್ಲಿ ಎಲ್ಲರೂ ಪ್ರಯಾಣ ಮಾಡುತ್ತಿದ್ದರು.  ಗುರುತಿಸಲು ವಿಫಲರಾಗಿದ್ದಾರೆ. ಅವರ ಪಂಜಾಬ್ ಕಿಂಗ್ಸ್ XI ತಂಡದ  ಮಾಲಕಿಯಾಗಿರುವ ಪ್ರೀತಿ ಪಂದ್ಯಾವಳಿ ಸಂಬಂಧವೇ ಪ್ರಯಾಣ ಮಾಡುತ್ತಿದ್ದರು. 

37

ಸಿಮೋನ್ ಪ್ರೀತಿ ಅವರ  ಪರಿಚಯ ಮಾಡುವ ಸಂದರ್ಭ ಜಿಂಜಾ ಹೆಸರನ್ನು ಬಿಟ್ಟಿದ್ದರು. ಹಾಗಾಗಿ 80 ವರ್ಷ ವಯಸ್ಸಿನ ನಟನಿಗೆ ಗುರುತು ಹಿಡಿಯಲು ಸಾಧ್ಯವಾಗಲಿಲ್ಲ.

47

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕ್ಷಮಾಪಣೆ ಪತ್ರ ಬರೆದಿದ್ದಾರೆ. ಆತ್ಮೀಯ ಪ್ರೀತಿ - ನನ್ನ ಮಗಳು ಸಿಮೋನ್ ನಿಮ್ಮನ್ನು ದುಬೈಗೆ ವಿಮಾನದಲ್ಲಿ ಪರಿಚಯಿಸಿದಾಗ ನಾನು ನಿಮ್ಮನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಕ್ಷಮೆ ಕೇಳುವುದು ನನ್ನ ಕರ್ತವ್ಯ ಎಂದು ನಾನು ಭಾವಿಸಿದೆ. ಜಿಂಟಾ ಅಂತ ನಿಮ್ಮ ಪೂರ್ಣ ಹೆಸರು ಹೇಳಿದ್ದರೆ  ನಿಮ್ಮ ಸುಂದರ ಮುಖದ ಅನೇಕ ಚಿತ್ರಗಳನ್ನು ನೋಡಿದ ನೆನಪಾಗುತ್ತಿತ್ತು ಎಂದಿದ್ದಾರೆ.

57

ಸೋಶಿಯಲ್ ಮೀಡಿಯಾದಲ್ಲಿ ಹಿರಿಯನ  ನಾಯಕನ ಮಾತಿಗೆ ಅನೇಕರು ಕಮೆಂಟ್ ಮಾಡಿದ್ದಾರೆ. ನೀವು ಇಂಥ ವಿಚಾರಕ್ಕೆ ಕ್ಷಮೆ ಕೇಳುವ ಅಗತ್ಯ ಇರಲಿಲ್ಲ ಎಂದಿದ್ದಾರೆ.

67

ಸಂಜಯ್ ಖಾನ್ ಅವರು ಹಕೀಕತ್, ದಸ್ ಲಖ್ ಮತ್ತು ಐಕಾನಿಕ್ ಟಿವಿ ಶೋ ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್‌ ದಲ್ಲಿ ಕಾಣಿಸಿಕೊಂಡವರು. 

77
Preity Zinta

ಜಿಂಟಾ ದಂಪತಿ ಇತ್ತಿಚೆಗಷ್ಟೆ ಶುಭ ಸುದ್ದಿಯೊಂದನ್ನು ಅಭಿಮಾನಿಗಳ ಜತೆ ಹಂಚಿಕೊಂಡಿದ್ದರು. ಅವಳಿ ಮಕ್ಕಳನ್ನು ಬರಮಾಡಿಕೊಂಡಿದ್ದರು. 

Read more Photos on
click me!

Recommended Stories