ಸಾವರ್ಕರ್ ಚಿತ್ರಕ್ಕಾಗಿ ನಟ ರಣದೀಪ್ ಹೂಡಾ ರೂಪಾಂತರ: ದಂಗಾದ ಅಭಿಮಾನಿಗಳು

Published : Mar 20, 2024, 12:46 PM IST

ಚಿತ್ರಕ್ಕಾಗಿ 30 ಕೆ.ಜಿ. ತೂಕ ಇಳಿಸಿಕೊಂಡ ರಣದೀಪ್ ಹೂಡಾ ಫೋಟೋ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ಚಿತ್ರಕ್ಕಾಗಿ ಹೂಡಾ, ತಮ್ಮ ಮೈಮಾಟ ಹಾಗೂ ಕೇಶ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ. 

PREV
17
ಸಾವರ್ಕರ್ ಚಿತ್ರಕ್ಕಾಗಿ ನಟ ರಣದೀಪ್ ಹೂಡಾ ರೂಪಾಂತರ: ದಂಗಾದ ಅಭಿಮಾನಿಗಳು

ಖ್ಯಾತ ನಟ ರಣದೀಪ್ ಹೂಡಾ, ಶೀಘ್ರವೇ ಬಿಡುಗಡೆಯಾಗಲಿರುವ ತಮ್ಮ ಅಭಿನಯದ 'ಸ್ವಾತಂತ್ರ್ಯ ವೀರ ಸಾವರ್ಕರ್' ಚಿತ್ರಕ್ಕಾಗಿ ತಾವು ಮಾಡಿಕೊಂಡ ದೇಹದ ರೂಪಾಂತರ ಫೋಟೋವೊಂದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

27

ಚಿತ್ರಕ್ಕಾಗಿ 30 ಕೆ.ಜಿ. ತೂಕ ಇಳಿಸಿಕೊಂಡ ಅವರ ಈ ಫೋಟೋ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ಚಿತ್ರಕ್ಕಾಗಿ ಹೂಡಾ, ತಮ್ಮ ಮೈಮಾಟ ಹಾಗೂ ಕೇಶ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ. 

37

ಅದರಲ್ಲಿಯೂ ಮುಖ್ಯವಾಗಿ ಅವರ ದೇಹದ ಆಕಾರ ಎಲ್ಲರನ್ನು ನಿಬ್ಬೆರಗಾಗಿಸಿದೆ. ಕಟ್ಟುಮಸ್ತಾದ ಬಾಡಿ ಹೊಂದಿದ್ದ ರಣದೀಪ್​ ಹೂಡಾ ಅವರು ಸಾವರ್ಕರ್​ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ತೆಳ್ಳಗಾಗಿದ್ದಾರೆ. ಅಂದಾಜು 30 ಕೆಜಿ ದೇಹದ ತೂಕವನ್ನು ಅವರು ಕಡಿಮೆ ಮಾಡಿಕೊಂಡಿದ್ದಾರೆ. 

47

ಎದೆಗೂಡಿನ ಮೂಳೆಗಳು ಕಾಣುವ ರೀತಿಯಲ್ಲಿ ಪೋಸ್​ ನೀಡಿದ್ದಾರೆ. ಅವರ ಬದ್ಧತೆಗೆ ಅಭಿಮಾನಿಗಳು ಭೇಷ್​ ಎನ್ನುತ್ತಿದ್ದಾರೆ. ನೀವು ಭಾರತದ 'ಕ್ರಿಸ್ಟಿಯನ್ ಬಾಲೆ' (ಹಾಲಿವುಡ್ ನಟ) ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ. ವೈರಲ್​ ಫೋಟೋಗೆ ನೆಟ್ಟಿಗರು ಕಮೆಂಟ್​ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. 

57

ಈ ಸಿನಿಮಾದಲ್ಲಿ ರಣದೀಪ್​ ಹೂಡಾ ಜೊತೆ ನಟಿ ಅಂಕಿತಾ ಲೋಖಂಡೆ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಮಾರ್ಚ್​ 22ರಂದು ಹಿಂದಿ ಮಾತ್ರವಲ್ಲದೇ ಮರಾಠಿ ಭಾಷೆಯಲ್ಲೂ ಈ ಸಿನಿಮಾ ಬಿಡುಗಡೆ ಆಗಲಿದೆ. 

67

ಮಹಾತ್ಮ ಗಾಂಧಿ, ಬಾಲ ಗಂಗಾಧರ್​ ತಿಲಕ್​, ಡಾ. ಬಿ.ಆರ್​. ಅಂಬೇಡ್ಕರ್​, ಸುಭಾಷ್​ ಚಂದ್ರ ಬೋಸ್​, ಜವಹರ್​ ಲಾಲ್​ ನೆಹರು, ಮದನ್​ ಲಾಲ್​ ಧಿಂಗ್ರ, ಭಗತ್​ ಸಿಂಗ್​ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳು ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಸಿನಿಮಾದಲ್ಲಿವೆ. 

77

ಇನ್ನು ಪಾಕ್ ಜೈಲಲ್ಲಿ ಸಾವನ್ನಪ್ಪಿದ್ದ ಭಾರತೀಯ ಸರಬ್ಬಿತ್ ಸಿಂಗ್ ಪಾತ್ರಕ್ಕೂ ರಣದೀಪ್ ಹೂಡಾ ರೂಪಾಂತರ ಮಾಡಿಕೊಂಡಿದ್ದರು. ಸದ್ಯ ರಣದೀಪ್‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರವನ್ನು ತಾವೇ ನಿರ್ಮಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories