ಬಿಕಿನಿ ಹಿಡಿದು ಮನೆಗೆ ನುಗ್ಗಿದ ಅಭಿಮಾನಿ; ರಂಪಾಟಕ್ಕೆ ಬೆಚ್ಚಿಬಿದ್ದ ನಟಿ ಪೂಜಾ ಬೇಡಿ

Published : Mar 20, 2024, 11:45 AM IST

ಹರಾಜಿಲ್ಲಿ ಮಾರಾಟವಾದ ಬಿಕಿನಿಯನ್ನು ಮನೆಗೆ ನೇರ ನುಗ್ಗಿದ ಅಭಿಮಾನಿ. ತಲೆ ನೋವು ಬರಿಸಿದ ಘಟನೆ ಬಿಚ್ಚಿಟ್ಟ ಪೂಜಾ ಬೇಡಿ.

PREV
19
ಬಿಕಿನಿ ಹಿಡಿದು ಮನೆಗೆ ನುಗ್ಗಿದ ಅಭಿಮಾನಿ; ರಂಪಾಟಕ್ಕೆ ಬೆಚ್ಚಿಬಿದ್ದ ನಟಿ ಪೂಜಾ ಬೇಡಿ

ಬಾಲಿವುಡ್ ಹಿರಿಯ ನಟಿ ಕಬೀರ್ ಬೇಡಿ ಅವರ ಸಖತ್ ಬೋಲ್ಡ್‌ ಪುತ್ರಿ ನಟಿ ಪೂಜಾ ಬೇಡಿ ತಮ್ಮ ಜೀವನದಲ್ಲಿ ಮರೆಯಲಾಗದ ಘಟನೆಯನ್ನು ಹಂಚಿಕೊಂಡಿದ್ದಾರೆ.

29

ನಟ-ನಟಿಯರು ಹೆಚ್ಚು ಜನಪ್ರಿಯರಾದಂತೆ ಫ್ಯಾನ್ಸ್​ ಸಂಖ್ಯೆ ಹೆಚ್ಚುತ್ತದೆ. ಅಭಿಮಾನ ಅತಿರೇಕಕ್ಕೂ ಹೋಗುವುದಿದೆ. ಅದೇ ರೀತಿ, ಅಭಿಮಾನಿಗಳು ಅತಿರೇಕಕ್ಕೆ ಹೋಗಿ ನಟಿ ಪೂಜಾ ಪೇಚಿಗೆ ಸಿಲುಕಿರುವುದೂ ಇದೆ.

39

ಆ ದಿನಗಳಲ್ಲಿ ನಾನು ಬೋಲ್ಡ್ ನಟಿಯಾಗಿದ್ದೆ... ನನಗೆ ಸಾಕಷ್ಟು ಅಭಿಮಾನಿಗಳಿದ್ದರು. ಆಗಿನ ಕಾಲದಲ್ಲಿ ಮೊಬೈಲ್, ಸೋಷಿಯಲ್ ಮೀಡಿಯಾ ಇರಲಿಲ್ಲ... ಅಭಿಮಾನಿಗಳೆಲ್ಲ ಖುದ್ದು ಭೇಟಿಯಾಗುತ್ತಿದ್ದರು. ಅವರಲ್ಲಿ ಒಬ್ಬರು ಅನೀಸ್ ಎಂಬ ಅಭಿಮಾನಿಯಿದ್ದ.

49

 ಅವನ ಹೆಸರು ಬೇರೇನೋ ಇತ್ತು. ಆದರೆ ತನ್ನನ್ನು ನನಗಾಗಿ ಅನೀಸ್​ ಎಂದು ಬದಲಿಸಿಕೊಂಡಿದ್ದ. ಇದಕ್ಕೆ ಕಾರಣ, ಅದು ನನ್ನ ನೆಚ್ಚಿನ   ಸುಗಂಧ ದ್ರವ್ಯವಾಗಿತ್ತು. ಅದಕ್ಕಾಗಿ ನಾನು ನಿಮ್ಮ ದೇಹ ಎನ್ನುತ್ತಿದ್ದ ಆ ಅಭಿಮಾನಿ ತನ್ನನ್ನು ತಾನು ಅನೀಸ್​ ಎಂದು ಹೇಳಿಕೊಂಡಿದ್ದ' ಎಂಬ ಘಟನೆಯನ್ನು ನಟಿ ನೆನೆದಿದ್ದಾರೆ. 

59

 ನಾನು ನಿಜಕ್ಕೂ ಹೆದರಿ ಹೋಗಿದ್ದೆ. ಏಕೆಂದರೆ ಆತ ನನಗೆ ದಿನಕ್ಕೆ ಏನಿಲ್ಲವೆಂದರೂ ಸಾವಿರಾರು  ಬಾರಿ ಕರೆ ಮಾಡುತ್ತಿದ್ದ. ಅವನಿಗೆ ನನ್ನ ನಂಬರ್ ಹೇಗೆ ಸಿಕ್ಕಿತೋ ಗೊತ್ತಿಲ್ಲ. ಕಿರಿಕಿರಿ ಹೆಚ್ಚಾದಾಗ  ದೂರವಾಣಿ ಇಲಾಖೆಗೆ ದೂರು ನೀಡಿದ್ದೆ.

69

ಇದನ್ನು ತಿಳಿದ ಬುದ್ಧಿವಂತ ಅನೀಸ್​ ನನ್ನ ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿದುಬಂದು ಬೇರೆ ಬೇರೆ  ಸಂಖ್ಯೆಗಳಿಂದ ಕರೆ ಮಾಡತೊಡಗಿದ. ರಕ್ತದಿಂದ ನನಗೆ ಪ್ರೇಮ ಪತ್ರ ಬರೆಯುತ್ತಿದ್ದ' ಎಂದು ಪೂಜಾ ಬೇಡಿ ನೆನಪಿಸಿಕೊಂಡಿದ್ದಾರೆ. 

79

1993ರಲ್ಲಿ ರಿಲೀಸ್ ಆದ ಲೂಟೆರಾ ಸಿನಿಮಾದಲ್ಲಿ ಪೂಜಾ ಬೇಡಿ ಒಂದು ಬಿಕಿನಿ ಧರಿಸಿದ್ದರಂತೆ. ಅನೀಸ್‌ ಎಂಬ ಅಭಿಮಾನಿ ಅದನ್ನು ಹರಾಜಿನಲ್ಲಿ ಖರೀದಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗಲಿಲ್ಲ.

89

ಒಂದು ದಿನ ನನ್ನ ಮನೆಯ ಕರೆಗಂಟೆ ಬಾರಿಸಿತು ಮತ್ತು ಅವನು ನನ್ನ ಬಿಕಿನಿಯನ್ನು ಕೈಯಲ್ಲಿ ಹಿಡಿದುಕೊಂಡು ಪ್ರವೇಶಿಸಿದನು. ನಾನು ಅವನನ್ನು ಕುಳಿತುಕೊಳ್ಳುವಂತೆ ಹೇಳಿದೆ. ನಂತರ ಅವನನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ

99

ಆದರೆ ಅವನು ನನ್ನನ್ನು ಬಿಕಿನಿಯಲ್ಲಿ ನೋಡಬೇಕೆಂದು ಒತ್ತಾಯಿಸುತ್ತಲೇ ಇದ್ದನು. ಅವನು ನನ್ನ ಕ್ರೇಜಿಸ್ಟ್ ಅಭಿಮಾನಿ, ನಾನು ಮದುವೆಯಾಗುವವರೆಗೂ ನನಗೆ ಕಿರುಕುಳ ನೀಡಿದ್ದನು. ಅಂತಹ ಅನೇಕ ಹುಚ್ಚು ಅಭಿಮಾನಿಗಳು ಇದ್ದರು ಎಂದಿದ್ದಾರೆ. 

Read more Photos on
click me!

Recommended Stories