ಅಭಿಷೇಕ್‌ ಲವ್ ಮಾಡಿದ್ರು, ಐಶೂಗೆ ಮನಸ್ಸಿರಲಿಲ್ಲ; ಹೀಗಿದ್ರೂ ಮ್ಯಾರೇಜ್‌ ಆಗಿರೋ ಮಹಾ ಮ್ಯಾಜಿಕ್ ರಿವೀಲ್!

First Published | May 27, 2024, 11:33 AM IST

 ಸಿಕ್ಕ ಮಾಹಿತಿ ಪ್ರಕಾರ, ನಟ ಅಭಿಷೇಕ್ ಬಚ್ಚನ್ ನಟಿ ಐಶ್ವರ್ಯಾ ರೈ ಅವರ ರೂಪ ಹಾಗೂ ಒಳ್ಳೆಯ ವ್ಯಕ್ತಿತ್ವಕ್ಕೆ ಮಾರುಹೋಗಿ ಲವ್ ಮಾಡತೊಡಗಿದ್ದರು. ಲವ್ ಅಟ್ ಫಸ್ಟ್ ಸೈಟ್ ಎಂಬಂತೆ, ನೋಡಿದೊಡನೆಯೇ 'ಇವಳೇ ನನ್ ಹೆಂಡ್ತಿ' ಎಂಬ ಭಾವ ಮೂಡಿತ್ತು. ಆದರೆ ನಟಿ ಐಶ್ವರ್ಯಾ ರೈಗೆ ಹಾಗೆ ಇರಲಿಲ್ಲ.

ಬಾಲಿವುಡ್ ಕ್ಯೂಟ್ ಕಪಲ್ಸ್ ನಟಿ ಐಶ್ವರ್ಯಾ ರೈ (Aishwrya Rai) ಹಾಗೂ ನಟ ಅಭಿಷೇಕ್ ಬಚ್ಚನ್ (Abhishek Bachchan) ಈಗ ದಂಪತಿಗಳು. ಅವರಿಗೆ ಆರಾಧ್ಯ ಎಂಬ ಮಗಳಿದ್ದಾಳೆ ಎಂಬುದು ಎಲ್ಲರಿಗೂ ಗೊತ್ತು. ಐಶೂ ಜತೆ ಅಭಿಷೇಕ್ ಸಾಕಷ್ಟು  ಚಿತ್ರಗಳಲ್ಲಿ ಒಟ್ಟಿಗೇ ನಟಿಸಿದ್ದಾರೆ. 
 

ಅವರಿಬ್ಬರೂ ಶೂಟಿಂಗ್‌ ಸಮಯದಲ್ಲಿ ಮಾತುಕತೆ ಆಡುತ್ತ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು ಎಂದೇ ಎಲ್ಲರೂ ಭಾವಿಸಿದ್ದಾರೆ. ಮೊದಲು ಸ್ನೇಹಿತರಾಗಿದ್ದು ಬಳಿಕ ಅದೇ ಸ್ನೇಹ ಪ್ರೇಮಕ್ಕೆ ತಿರುಗಿದೆ. ಆ ನಂತರ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮದುವೆಯಾಗಿದ್ದಾರೆ ಎಂದು ಬಹುತೇಕರು ಅಂದುಕೊಂಡಿದ್ದಾರೆ. ಆದರೆ, ನಿಜ ಸಂಗತಿ ಬೇರೆಯೇ ಇದೆ ಎನ್ನಲಾಗುತ್ತಿದೆ. 

Tap to resize

ಹೌದು, ಸಿಕ್ಕ ಮಾಹಿತಿ ಪ್ರಕಾರ, ನಟ ಅಭಿಷೇಕ್ ಬಚ್ಚನ್ ನಟಿ ಐಶ್ವರ್ಯಾ ರೈ ಅವರ ರೂಪ ಹಾಗೂ ಒಳ್ಳೆಯ ವ್ಯಕ್ತಿತ್ವಕ್ಕೆ ಮಾರುಹೋಗಿ ಲವ್ ಮಾಡತೊಡಗಿದ್ದರು. ಲವ್ ಅಟ್ ಫಸ್ಟ್ ಸೈಟ್ ಎಂಬಂತೆ, ನೋಡಿದೊಡನೆಯೇ 'ಇವಳೇ ನನ್ ಹೆಂಡ್ತಿ' ಎಂಬ ಭಾವ ಮೂಡಿತ್ತು. ಆದರೆ ನಟಿ ಐಶ್ವರ್ಯಾ ರೈಗೆ ಹಾಗೆ ಇರಲಿಲ್ಲ. ಐಶೂ ಅಭಿಷೇಕ್‌ ಅವರನ್ನು ಸ್ನೇಹಿತ ಎಂದೂ ಅಂದುಕೊಂಡಿರಲಿಲ್ಲ ಎನ್ನುತ್ತಿವೆ ಮೂಲಗಳು. 

ಮದುವೆಗೂ ಮೊದಲು ನಟಿ ಐಶ್ವರ್ಯಾ ರೈ ಸ್ನೇಹಿತರ ಲಿಸ್ಟ್ ನೋಡಿದರೆ ಅದರಲ್ಲಿ ಎಲ್ಲೂ ನಟ ಅಭಿಷೇಕ್ ಬಚ್ಚನ್ ಹೆಸರು ಕಾಣಿಸುವುದಿಲ್ಲ. ಐಶೂ ಮನೆಯಲ್ಲಿ ನಡೆಯುತ್ತಿದ್ದ ಫಂಕ್ಷನ್‌ಗಳಿಗೆ ಬಾಲಿವುಡ್‌ನ ಹಲವಾರು ಸ್ನೇಹಿತರು ಬರುತ್ತಿದ್ದರು. ಆದರೆ, ಅವರಲ್ಲಿ ಅಭಿಷೇಕ್ ಬಚ್ಚನ್ ಕಾಣಿಸುತ್ತಿರಲಿಲ್ಲ. 
 

ಆದರೆ, ಯಾವಾಗ ಅಭಿಷೇಕ್ ಕಡೆಯಿಂದ ಮದುವೆ ಪ್ರಸ್ತಾಪ ಬಂತೋ ಆಗ ಐಶ್ವರ್ಯಾ ರೈ ಆ ಬಗ್ಗೆ ಅಲರ್ಟ್ ಆಗಿ ಅಮಿತಾಭ್ ಬಚ್ಚನ್ ಕುಟುಂಬ ಕುಡಿ ಎಂಬ ಕಾರಣಕ್ಕೆ ಅಭಿಷೇಕ್ ಜತೆ ಮದುವೆಯಾಗಲು ಒಪ್ಪಿಗೆ ನೀಡಿದ್ದರು ಅಷ್ಟೇ ಎನ್ನುತ್ತವೆ ಸುದ್ದಿ ಮೂಲಗಳು. 
 

ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಅವರನ್ನು ಲವ್ ಮಾಡಿದ್ದು ನಿಜವೇ ಆಗಿದ್ದರೂ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು ಎಂಬುದು ಶುದ್ಧ ಸುಳ್ಳು ಎನ್ನಲಾಗುತ್ತದೆ. ಗುರು ಹಾಗೂ ಹಲವು ಸಿನಿಮಾಗಳಲ್ಲಿ ಈ ಇಬ್ಬರೂ ಒಟ್ಟಿಗೇ ನಟಿಸಿದ್ದರೂ, ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದರು. 

ಆದರೆ, ಎಲ್ಲೂ ಕೂಡ ಐಶೂ ಕಡೆಯಿಂದ ಎಲ್ಲಿಯೂ ಅಭಿಷೇಕ್ ಬಚ್ಚನ್ ಕಡೆ ರೊಮ್ಯಾಂಟಿಕ್ ನೋಟ-ಮಾತುಕತೆ ಕಾಣಿಸುತ್ತಿರಲಿಲ್ಲ. ಆದರೆ, ಅಭಿಷೇಕ್ ಬಚ್ಚನ್ ಕಡೆಯಿಂದ ಆ ನೋಟ, ನಡೆ ಕಾಣಿಸುತ್ತಿತ್ತು ಎನ್ನಲಾಗುತ್ತಿದೆ. ಅದೇನೇ ಇರಲಿ, ಇಂದು ನಟಿ ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಪತ್ನಿ ಹಾಗೂ ಅಮಿತಾಭ್ ಬಚ್ಚನ್ ಸೊಸೆ. 
 

ಆರಾಧ್ಯ ಎಂಬ ಮಗಳೊಂದಿಗೆ ಈ ಸಂಸಾರ ಸುಖ ದಾಂಪತ್ಯ ನಡೆಸುತ್ತಿದೆ. ಇತ್ತೀಚೆಗೆ ಅವರಿಬ್ಬರ ಮಧ್ಯೆ ಮನಸ್ತಾಪ, ಕಿರಿಕಿರಿ ಕಾಣಿಸಿಕೊಂಡಿದ್ದರೂ ಇಬ್ಬರೂ ಸ್ವಲ್ಪ ದಿನ ಬೇರೆ ಬೇರೆ ಆಗಿದ್ದರೂ ಮತ್ತೆ ಅವರಿಬ್ಬರೂ ಒಂದಾಗುವ ಎಲ್ಲ ಕ್ಷಣ ಇದೆ ಎಂದೇ ಎಲ್ಲರೂ ಭಾವಿಸಿದ್ದಾರೆ. 

ನಟಿ ಐಶ್ವರ್ಯಾ ರೈ ಬುದ್ಧಿವಂತೆ, ಅವಳು ಸಂಸಾರವನ್ನು ಸರಿ ದಾರಿಗೆ ತರುವ ಪ್ರಯತ್ನದಲ್ಲಿ ಹೀಗೆ ಮಾಡಿರುತ್ತಾಳೆ. ಡಿವೋರ್ಸ್ ಪಡೆಯುವ ಯಾವುದೇ ಉದ್ದೇಶ ಹಾಗೂ ಅವರಲ್ಲಿ ಇಲ್ಲ ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮತ್ತೆ ಒಂದಾಗಿ ಯಾವತ್ತೂ ಚೆನ್ನಾಗಿರಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆಯಾಗಿದೆ. 
ಐಶ್ವರ್ಯಾ ರೈ ಬಚ್ಚನ್ ಮತ್ತು ಬಿಗ್‌ ಬಿ ಕುಟುಂಬದ ಕುಡಿ ಅಭಿಷೇಕ್ ಬಚ್ಚನ್ ಮದುವೆಯಾಗಿ 17 ವರ್ಷವಾಗಿದೆ. 2007 ಏಪ್ರಿಲ್ 20 ರಂದು ಇವರಿಬ್ಬರೂ ಮದುವೆಯಾದರು. ಬಾಲಿವುಡ್‌ ಈ ಸುಂದರ ಜೋಡಿ ಬೇರೆಯಾಗಿದೆ, ಜೊತೆಗಿಲ್ಲ ಎನ್ನಲಾಗಿತ್ತು. ಐಶ್ವರ್ಯಾ ರೈ ಮನೆಬಿಟ್ಟು ಹೋಗಿ ಗಂಡನಿಂದ ದೂರಾಗಿದ್ದಾರೆ ಅಂತೆಲ್ಲ ಸುದ್ದಿ ಹಬ್ಬಿತ್ತು. ಅದಕ್ಕೆ ಈ ಇಬ್ಬರೂ ತಕ್ಕ ಉತ್ತರ ನೀಡಿದ್ದಾರೆ.
 

Latest Videos

click me!