ಸಿಂಪಲ್‌ ಜೀನ್ಸ್‌ ಬಾಡಿಕಾನ್‌ ಡ್ರೆಸ್‌ಗೆ ಇಷ್ಟು ದುಡ್ಡು ಕೊಟ್ರಾ ಆಲಿಯಾ ಭಟ್‌?

First Published | May 26, 2024, 8:13 PM IST

ಬಾಲಿವುಡ್‌ನ ಮುದ್ದಾದ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್, ಮಗಳು ರಾಹಾ ಬಂದ ಮೇಲೆ ಈ ಜೋಡಿಯ ಖುಷಿ ಮತ್ತಷ್ಟು ಹೆಚ್ಚಾಗಿದೆ. ಆಲಿಯಾ ತನ್ನ ಇನ್ಸ್ಟಾಗ್ರಾಮ್​ನಲ್ಲಿ ಮಗಳು ರಾಹಾ ಅವರ ಫೋಟೋವನ್ನು ಶೇರ್ ಮಾಡಿದ್ರು. ಇದೀಗ ಸ್ಲೀವ್ ಲೆಸ್ ಜೀನ್ಸ್ ಡ್ರೆಸ್​ನಲ್ಲಿ ಆಲಿಯಾ ಮಿಂಚುತ್ತಿದ್ದಾರೆ.
 

ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಇಂದಿನ ಟ್ರೆಂಡ್‌ಗೆ ಸರಿಹೊಂದುವ ವಿಭಿನ್ನ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಸರಳ ಸ್ಲೀವ್ ಲೆಸ್ ಜೀನ್ಸ್ ಉಡುಪಿನಲ್ಲಿ ಮಿಂಚಿದ್ದಾರೆ. ನೋಡಲು ಸಿಂಪಲ್‌ ಆಗಿರುವ ಈ ಕಾಸ್ಟ್ಯೂಮ್‌ ಬೆಲೆ ಮಾತ್ರ ನಿಮ್ಮನ್ನು ಅಚ್ಚರಿಗೆ ದೂಡುತ್ತದೆ. 

ಬಾಲಿವುಡ್‌ ನಟಿ ಆಲಿಯಾ ಭಟ್ ಫ್ಯಾಷನ್ ಪ್ರಿಯೆ. ತಮ್ಮ ಬಗೆಬಗೆಯ ಲುಕ್‌ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ಎದುರಾಗುತ್ತಿರುತ್ತಾರೆ. ಆಲಿಯಾ ಹೊಸ ಫೋಟೋಸ್ ಶೇರ್‌ ಮಾಡಿ ತನ್ನ ಅಭಿಮಾನಿಗಳಿಗೆ ಕಿಕ್ ನೀಡಿದ್ದಾರೆ.

Tap to resize

ಜಸ್ಟ್ ಅದರ್ ಸ್ಮಾರ್ಫ್ ಎಂಬ ಶೀರ್ಷಿಕೆಯೊಂದಿಗೆ ಅದ್ಭುತ ಸರಣಿ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಆಲಿಯಾ ಭಟ್ ಅವರ ಸ್ಟೈಲಿಶ್ ಸ್ಲೀವ್ ಲೆಸ್ ಡ್ರೆಸ್ ಆಕರ್ಷಕ ಇಂಡಿಗೊ ಬ್ಲೂ ಶೇಡ್‌ನಲ್ಲಿದೆ.

ಸ್ಕೂಪ್ ನೆಕ್ಲೈನ್, ದುಬಾರಿ ಡೆನಿಮ್ ಫ್ಯಾಬ್ರಿಕ್, ರಿಯರ್ ಜಿಪ್ ಫಾಸ್ಟಿಂಗ್, ಗ್ರಿಸ್-ಕ್ರಾಸ್ ಸ್ಟ್ರಾಪ್ಸ್, ಬಾಡಿಕಾನ್ ಫಿಟ್, ಬ್ಯಾಕ್ಲೆಸ್ ವಿನ್ಯಾಸವಿರುವ ಈ ಈ ಡೆನಿಮ್ ಬಾಡಿಕಾನ್ ಮಿಡಿ ಡ್ರೆಸ್ ಬೆಲೆ 1.37 ಲಕ್ಷ ರೂಪಾಯಿ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಜಿಗ್ರಾ ಚಿತ್ರದ ಶೂಟಿಂಗ್‌ನಲ್ಲಿ ಆಲಿಯಾ ಬಿಜಿಯಾಗಿದ್ದು, ಚಿತ್ರಕ್ಕೆ ನಿರ್ಮಾಪಕಿಯಾಗಿಯೂ ಅವರು ಬಂಡವಾಳ ಹೂಡುತ್ತಿದ್ದಾರೆ. ವಾಸನ್‌ ಬಾಲಾ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಆಲಿಯಾ ಭಟ್ ಅವರು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ ನಟಿ ಗಂಗೂಬಾಯಿ ಸಿನಿಮಾಗಾಗಿ ರಾಷ್ಟ್ರಪ್ರಶಸ್ತಿ ಕೂಡಾ ಮುಡಿಗೇರಿಸಿಕೊಂಡಿದ್ದಾರೆ.

ಆಲಿಯಾ ಮತ್ತು ರಣಬೀರ್ 14 ಏಪ್ರಿಲ್ 2022 ರಂದು ಮುಂಬೈನಲ್ಲಿರುವ ಅವರ ನಿವಾಸದಲ್ಲಿ ಹಿಂದೂ ಸಂಪ್ರದಾಯಗಳ ಪ್ರಕಾರ ವಿವಾಹವಾದರು. ನವೆಂಬರ್ 2022 ರಲ್ಲಿ, ಅವಳು ತನ್ನ ಮಗಳು ರಾಹಾಗೆ ಜನ್ಮ ನೀಡಿದರು.

Latest Videos

click me!