ಮಾಲಿವುಡ್ ಬ್ಯೂಟಿ ಸಾಯಿ ಪಲ್ಲವಿಗೆ ಲಾಕ್‌ಡೌನ್ ಸಮಯದಲ್ಲಿ ಪ್ರಕೃತಿಯ ಮಡಿಲಿನಲ್ಲಿರುವುದು ಹೆಚ್ಚಿಗೆ ಮಿಸ್ ಮಾಡಿಕೊಂಡರಂತೆ. ಅಲ್ಲದೆ ಸಂಭಾವನೆ ವಿಚಾರವನ್ನು ಚರ್ಚೆ ಮಾಡಿದ್ದಾರೆ.
'ಆಯ್ಕೆ ಮಾಡಿಕೊಳ್ಳುವಾಗ ನನ್ನ ಬಗ್ಗೆ ಮಾತ್ರ ನಾನು ಯೋಚನೆ ಮಾಡುವೆ ಬೇರೆ ಅವರ ಸಲಹೆ ಅಥವಾ ಏನು ಯೊಚನೆ ಮಾಡುತ್ತಾರೆ ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಜನರ ನಂಬಿಕೆಗಳ ಬಗ್ಗೆ ತಿಳಿದುಕೊಳ್ಳಲು ಶುರು ಮಾಡಿದೆ' ಎಂದು ಖಾಸಗಿ ಸಂದರ್ಶನಲ್ಲಿ ಮಾತನಾಡಿದ್ದಾರೆ.
'ಆಗ ಯಾವುದು ಸರಿ ಯಾವುದು ತಪ್ಪು ಎಂದು ಅರ್ಥ ಆಗುತ್ತಿತ್ತು. ನನ್ನ ಸುತ್ತಲು ನಡೆಯುತ್ತಿರುವುದರ ಬಗ್ಗೆ ತಿಳಿದುಕೊಳ್ಳಬೇಕು ಅಂದ್ರೆ ಸುಮ್ಮನೆ ಕೇಳಿಸಿಕೊಳ್ಳುವುದನ್ನು ನಂಬಲು ಆಗುವುದಿಲ್ಲ ನಾನು ವ್ಯಕ್ತಿಯಾಗಿ ಬೆಳೆದರೆ ಮಾತ್ರ ನನ್ನ ಬಗ್ಗೆ ಸೊಸೈಟಿ ಬಗ್ಗೆ ಅರ್ಥ ಮಾಡಿಕೊಳ್ಳಲು ಸಾಧ್ಯ.'
'ಪ್ರಕೃತಿಯ ನಡುವೆ ಇರಲು ತುಂಬಾ ಇಷ್ಟ ಪಡುವೆ. ನಾನು ಪ್ರಕೃತಿ ತಾಯಿಯ ಮಗಳು ಪ್ರಕೃತಿ ನಡುವೆ ಇದ್ದರೆ ರೂಟೆಡ್ ಫೀಲ್ ಆಗುತ್ತದೆ. ಸಿಟಿ ಜೀವನದಲ್ಲಿ ಕಂಫರ್ಟ್ ಆಗಿರುವ ಆದರೆ ಎಲ್ಲಿಯೂ ಹೊರ ಹೋಗುವುದಿಲ್ಲ. ಹೀಗಾಗಿ ಲಾಕ್‌ಡೌನ್ ಸಮಯಲ್ಲಿ ನಾನು ಸಮಸ್ಯೆ ಇಲ್ಲದೆ ಮನೆಯಲ್ಲಿದ್ದೆ. ಪ್ರಕೃತಿ ಮತ್ತು ಜಲಮೂಲಗಳು ನಡುವಿದ್ದರೆ ಖುಷಿಯಾಗಿರುವೆ.'
'ಸಂಭಾವನೆ ನೋಡಿಕೊಂಡು ಸಿನಿಮಾ ಆಯ್ಕೆ ಮಾಡಿಕೊಳ್ಳುವುದಿಲ್ಲ. ಸಿನಿಮಾ ಕಥೆ ಚೆನ್ನಾಗಿರಬೇಕು ಜನರು ನೋಡಬೇಕು ಆದರೆ ನಾನೇ ಹೊರೆ ಆಗಬಾರದು. ಒಳ್ಳೆ ಸಿನಿಮಾ ಮಾಡಿದೆ ಅನ್ನೋ ಖುಷಿ ಇರುತ್ತದೆ.
'ಒಂದು ವೇಳೆ ನಾನು ಡಾಕ್ಟರ್ ಆಗಿದ್ದರೂ ಉಚಿತ ಸೇವೆ ಮಾಡುವುದಿಲ್ಲ ಯಾರಿಂದ ಹಣ ಪಡೆಯಬೇಕು ಯಾರಿಗೆ ಫ್ರೀ ಮಾಡಬೇಕು ಎಂದು ಗೊತ್ತಿದೆ. ಸಿನಿಮಾ ವಿಚಾರದಲ್ಲೂ ಹಾಗೆ ಅವರಿಗೆ ಸಂಭಾವನೆ ಕೊಡಲು ಆಗುತ್ತದೆ ಅಂದ್ರೆ ಪಡೆಯುವೆ ಇಲ್ಲದಿದ್ದರೆ ಪಾತ್ರ ಒಪ್ಪಿಕೊಂಡು ಸಿನಿಮಾ ಮುಂದುವರೆಸುವೆ.