ಹುಟ್ಟುಹಬ್ಬದಂದು ಮೆಟರ್ನಿಟಿ ಫೋಟೋಶೂಟ್‌ಗೆ ಪೋಸ್‌ ನೀಡಿದ Sonam Kapoor!

First Published | Jun 9, 2022, 5:06 PM IST

ಸೋನಂ ಕಪೂರ್ (Sonam Kapoor) ಇಂದು ಜೂನ್ 7 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಟಿ ಇತ್ತೀಚೆಗೆ ತನ್ನ ಬೇಬಿಮೂನ್‌ನಿಂದ ಮರಳಿದ್ದಾರೆ. ಅವರು ಮತ್ತು ಆನಂದ್ ಅಹುಜಾ ಅವರ ಇಟಲಿ ಪ್ರವಾಸದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಪ್ರಸ್ತುತ ನಟಿ ತನ್ನ ಗರ್ಭಧಾರಣೆಯ ಮೂರನೇ ತ್ರೈಮಾಸಿಕವನ್ನು ತಲುಪಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ಸುಂದರವಾದ ಫೋಟೋಶೂಟ್ ಮಾಡಿದ್ದಾರೆ. 

ಸೋನಂ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬೇಬಿ ಬಂಪ್ ಅನ್ನು ತೋರಿಸುತ್ತಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಅವರು ತಮ್ಮ  ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ.

ಸೋನಂ ಕಪೂರ್ ಮೆಟರ್ನಿಟಿ ಫೋಟೋಶೂಟ್‌ಗಾಗಿ ಬಿಳಿ ಸ್ಯಾಟಿನ್‌ ಡ್ರೆಸ್‌ ಅನ್ನು ಧರಿಸಿದ್ದಾರೆ. ಅವರು ಡಿಸೈನರ್ ಕ್ರಾಪ್ ಟಾಪ್‌ನೊಂದಿಗೆ ಸ್ಯಾಟಿನ್ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೈಡಿನಲ್ಲಿರುವ  ಉದ್ದನೆಯ ಬಟ್ಟೆಯನ್ನು ಬೀಸುತ್ತಾ ಪೋಸ್ ನೀಡುತ್ತಿದ್ದಾರೆ.

Tap to resize

ಆಕೆಯ ಉಡುಪಿನಲ್ಲಿ ಸ್ಪಾರ್ಕಲ್‌ ಮತ್ತು ಮುತ್ತುಗಳನ್ನು ಬಳಸಲಾಗಿದೆ. ಸೋನಂ ಅದರೊಂದಿಗೆ ತನ್ನ ಕೂದಲನ್ನು ಕಟ್ಟಿದ್ದು ಹೇರ್‌ಸ್ಟೈಲ್‌ಗೆ  ಬಿಳಿ ಬಣ್ಣದ ಮುತ್ತುಗಳನ್ನು ಹಾಕಿದ್ದಾರೆ. ನ್ಯೂಡ್ ಮೇಕಪ್ ಮೂಲಕ  ಲುಕ್‌ ಅನ್ನು ಪೂರ್ಣಗೊಳಿಸಿದ್ದಾರೆ. 

ಸೋನಂ ಕಪೂರ್‌ನ ಫೋಟೊಗಳನ್ನು ನೋಡಿದ ಅಭಿಮಾನಿಗಳು ಅಪಾರ ಪ್ರೀತಿಯನ್ನು ಹರಿಸುತ್ತಿದ್ದಾರೆ. ನಟಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ. 

ಅದೇ ಸಮಯದಲ್ಲಿ, ಕೆಲವು ಬಳಕೆದಾರರು ಇದು ಯಾವ ರೀತಿಯ ಫೋಟೋಗ್ರಫಿ ಎಂದು ಪ್ರಶ್ನೆಗಳನ್ನು ಸಹ ಕೇಳುತ್ತಿದ್ದಾರೆ. ಅಷ್ಟೇ ಅಲ್ಲ ನಟಿಯ ಬೇಬಿ ಬಂಪ್‌ ನೋಡಿದವರೂ ಮಗ, ಮಗಳು ಎಂದು ಹೇಳತೊಡಗಿದ್ದಾರೆ.

ಸೋನಂ ಕಪೂರ್ ಇತ್ತೀಚೆಗೆ  ಇಟಲಿಯಲ್ಲಿ ಆನಂದ್ ಅಹುಜಾ ಅವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತಿದ್ದಾರೆ. ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಸೋನಮ್ ಕಪೂರ್ 2018 ರಲ್ಲಿ ಆನಂದ್ ಅಹುಜಾ ಅವರನ್ನು ವಿವಾಹವಾದರು . ಅದರ ನಂತರ ಅವಳು ಲಂಡನ್‌ಗೆ ಶಿಫ್ಟ್ ಆದರು. 

sonam kapoor

ಮದುವೆಯಾದ ನಂತರ ಚಿತ್ರರಂಗದಿಂದ ದೂರ ಉಳಿದಿರುವ ಸೋನಂ  'ಸಾವರಿಯಾ' ಚಿತ್ರದ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು.

Latest Videos

click me!