ಶಾರುಖ್ ಖಾನ್ ಅವರೊಂದಿಗೆ ನಟಿಸಿದ ಓಂ ಶಾಂತಿ ಓಂನೊಂದಿಗೆ ಬಾಲಿವುಡ್‌ನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ದೀಪಿಕಾ ನಂತರ ಹಿಂದಿರುಗಿ ನೋಡಲಿಲ್ಲ.
ದೀಪಿಕಾ ಅವರ ಮುಂದಿನ ಸಿನಿಮಾ ಪಠಾಣ್ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಇದು ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಐದು ವರ್ಷಗಳ ನಂತರ ಎಸ್‌ಆರ್‌ಕೆಯನ್ನು ಚಿತ್ರದಲ್ಲಿ ನೋಡುವ ಜೊತೆಗೆ ದೀಪಿಕಾ ಅವರನ್ನು ಬೋಲ್ಡ್ ಅವತಾರದಲ್ಲಿ ವೀಕ್ಷಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ
ಬೆಂಗಳೂರಿನವರಾದ ದೀಪಿಕಾ ಪಡುಕೋಣೆ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದು ಕನ್ನಡ ಸಿನಿಮಾದಿಂದಲೇ. ಉಪೇಂದ್ರ ಜೊತೆ ನಟಿಸಿದ ಐಶ್ವರ್ಯಾ ಈ ಬ್ಯೂಟಿಯ ಮೊದಲ ಚಿತ್ರ. ಆದರೂ, ಎಲ್ಲಿಯೂ ಅದನ್ನು ಹೇಳಿಕೊಳ್ಳುವುದಿಲ್ಲ ಈ ನಟಿ. ನಂತರ ಬಾಲಿವುಡ್‌ಗೆ ಕಾಲಿಟ್ಟ ಇವರ ಹಾಲಿವುಡ್ ಚಲನಚಿತ್ರಗಳು ಮತ್ತು ದೂರದರ್ಶನ ಸರಣಿಗಳಲ್ಲಿ ಕಾಣಿಸಿಕೊಂಡರು.
ದೀಪಿಕಾ ಪಡುಕೋಣೆ ಮತ್ತು ಅವರ ಪತಿ ರಣವೀರ್ ಸಿಂಗ್ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಆದರೆ ಆಕೆಯ ಪೋಷಕರು ಇನ್ನೂ ಬೆಂಗಳೂರಿನಲ್ಲೇ ಉಳಿದಿದ್ದಾರೆ. ಈ ಕಾರಣದಿಂದಾಗಿ ದೀಪಿಕಾ ಆಗಾಗ ಬೆಂಗಳೂರಿಗೆ ಭೇಟಿ ನೀಡುವುದನ್ನು ತಪ್ಪಿಸುವುದಿಲ್ಲ.
ಹಾಗಾಗಿ, ದೀಪಿಕಾ ತಮ್ಮ ಊರಿನಲ್ಲಿದ್ದಾಗಲೆಲ್ಲ ತನ್ನ ನೆಚ್ಚಿನ ತಾಣಗಳಿಗೆ ಭೇಟಿ ನೀಡುವುದನ್ನು ರೂಢಿಸಿಕೊಂಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ವೀಣಾ ಸ್ಟೋರ್ಸ್ ಅಂತಹ ಸ್ಥಳಗಳಲ್ಲಿ ಒಂದಾಗಿದೆ.
ಕೆಲವು ವರ್ಷಗಳ ಹಿಂದೆ ಫ್ರೆಶ್ ಇಡ್ಲಿ-ವಡಾ ರುಚಿ ಸವಿಯಲು ದೀಪಿಕಾ ಇಲ್ಲಿಗೆ ಭೇಟಿ ನೀಡಿದಾಗ ವೀಣಾ ಸ್ಟೋರ್ಸ್‌ನ ಮಾಲೀಕ ಪ್ರದೀಪ್ ಅವರೊಂದಿಗಿನ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.ಜನರದಿಂದ ತಪ್ಪಿಸಿಕೊಳ್ಳಲು ಬೆಳಿಗ್ಗೆ 6.30ಗೆ ಅಲ್ಲಿಗೆ ಭೇಟಿ ನೀಡಿದ್ದರು.
ದೀಪಿಕಾ ಅವರ ಪೋಷಕರು ಮಲ್ಲೇಶ್ವರಂನಲ್ಲಿ ವಾಸಿಸುತ್ತಿದ್ದಾರೆ ಮತ್ತು ಆಗಾಗ್ಗೆ ವೀಣಾ ಸ್ಟೋರ್ಸ್ ಮತ್ತು ಸಿಟಿಆರ್ ದೋಸೆ ಕಾರ್ನರ್ ದೀಪಿಕಾ ಭೇಟಿ ನೀಡುತ್ತಾರೆ.
ಹಲವಾರು ಸಂದರ್ಶನಗಳಲ್ಲಿ, ಅವಳು ತನ್ನ ನೆಚ್ಚಿನ ಖಾದ್ಯ ರಸಂ ಮತ್ತು ತಾನು ಮನೆಯಲ್ಲಿ ತಯಾರಿಸಿದ ದಕ್ಷಿಣ ಭಾರತೀಯ ರೆಸಿಪಿಗಳನ್ನು ಆನಂದಿಸುತ್ತೇನೆ ಎಂದು ಹೇಳಿದ್ದಾರೆ.