ನಟಿ ತಮನ್ನಾ 2005ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಹಿಂದಿ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದರು. ಚಾಂದ್ ಸಾ ರೋಷನ್ ಚೆಹ್ರಾ ಸಿನಿಮಾ ಮೂಲಕ ಮೊದಲ ಬಾರಿಗೆ ತರೆಮೇಲೆ ಮಿಂಚಿದರು. ಬಳಿಕ ತೆಲುಗು ಸಿನಿಮಾರಂಗಕ್ಕೆ ಬಂದರು. ನಂತರ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಲಿಯಾದರು. ಈಗಲೂ ಬಹುಬೇಡಿಕೆಯ ನಟಿಯಾಗಿರುವ ತಮನ್ನಾ ತಮಿಳು, ತೆಲುಗು ಜೊತೆಗೆ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಬೋಲ ಶಂಕರ್. ಗುರ್ತುಂದ ಸೀತಕಲಂ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.