ಈ ಟ್ಯಾಲೆಂಟೆಡ್‌ ನಟಿಯನ್ನು ನಟನಾ ಶಾಲೆಯಿಂದ ಹೊರಹಾಕಲಾಗಿತ್ತು?

Published : Jul 18, 2022, 06:44 PM IST

ಬಾಲಿವುಡ್‌ನ ಟ್ಯಾಲೆಂಟೆಡ್‌ ನಟಿಯರಲ್ಲಿ ಒಬ್ಬರಾದ  ಭೂಮಿ ಪೆಡ್ನೇಕರ್ ( Bhumi Pednekar ) ಅವರು ಇಂದು ಜುಲೈ 18 ರಂದು ತಮ್ಮ 33 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಭೂಮಿ ಅವರಿಗೆ ಸಂಬಂಧಿಸಿದ ಅವರ ಅಭಿಮಾನಿಗಳು ತಿಳಿಯಲೇಬೇಕಾದ  ಕುರಿತು ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

PREV
18
ಈ ಟ್ಯಾಲೆಂಟೆಡ್‌ ನಟಿಯನ್ನು ನಟನಾ ಶಾಲೆಯಿಂದ ಹೊರಹಾಕಲಾಗಿತ್ತು?

ಬಾಲಿವುಡ್‌ನ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರಾದ ಭೂಮಿ ಪೆಡ್ನೇಕರ್ ಅವರು ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಸೃಷ್ಟಿಸಿದ್ದಾರೆ.ತಮ್ಮ ಡೆಬ್ಯೂ ಪಾತ್ರಕ್ಕಾಗಿ, ಸಾಕಷ್ಟು ತೂಕವನ್ನು ಸಹ ಹೆಚ್ಚಿಸಿ ಕೊಂಡರು. ಆದರೆ, ಅವರು ನಂತರ ತೂಕ ಇಳಿಸಿಕೊಂಡು ಶೀಘ್ರದಲ್ಲೇ ಬಾಲಿವುಡ್‌ನ  ಫಿಟೆಸ್ಟ್ ನಟಿಯರ ಸಾಲಿಗೆ ಸೇರಿದರು. 

28

 ಭೂಮಿ 2015ರಲ್ಲಿ 'ದಮ್ ಲಗಾ ಕೆ ಹೈಶಾ' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಚಿತ್ರರಂಗಕ್ಕೆ ಕಾಲಿಟ್ಟ ತಕ್ಷಣ ಭೂಮಿಯ ಸ್ಥೂಲಕಾಯ  ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಅವರ ನಟನೆ ಎಲ್ಲರ ಗಮನ ಸೆಳೆಯಿತು.

38

ಅವರ ಚಲನಚಿತ್ರದ ಬಿಡುಗಡೆಯ ನಂತರ, ಭೂಮಿ ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುವುದರ ಜೊತೆಗೆ ಉತ್ತಮ ವ್ಯಾಯಾಮದ ಆಡಳಿತವನ್ನು ಅನುಸರಿಸುವ ಮೂಲಕ ಸುಮಾರು 33 ಕಿಲೋಗ್ರಾಂಗಳಷ್ಟು ತೂಕವನ್ನು ಕಡಿಮೆ ಮಾಡಿಕೊಂಡರು. ಮತ್ತೆ ಪರ್ಫೇಕ್ಟ್‌ ಫಿಗರ್‌ಗೆ ಬರಲು ಕನಿಷ್ಠ ಒಂದು ವರ್ಷ ತೆಗೆದುಕೊಂಡರು.

48

18 ಜುಲೈ 1989 ರಂದು ಮುಂಬೈನಲ್ಲಿ ಜನಿಸಿದ ಭೂಮಿ. ಕ್ಯಾನ್ಸರ್ ನಿಂದಾಗಿ 18ನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು.  ತಂದೆಯ ಮರಣದ ನಂತರ, ಆಕೆಯ ಕುಟುಂಬವು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದು ವರದಿಯಾಗಿದೆ. ಆದರೆ ಇಂದು ತನ್ನ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಈ ನಟಿ ಇಂಡಸ್ಟ್ರಿಯಲ್ಲಿ ಫೇಮಸ್‌ ಆಗಿದ್ದಾರೆ.

58

ತನ್ನ ಅದ್ಬುತ ನಟನೆಗಾಗಿ ಜನಪ್ರಿಯವಾಗಿರುವ ಭೂಮಿ ಅವರನ್ನು ಒಮ್ಮೆ ನಟನಾ ಶಾಲೆಯಿಂದ ಹೊರಹಾಕಲಾಯಿತು ಎಂದರೆ ಆಶ್ಚರ್ಯವಾಗುತ್ತದೆ.  15 ನೇ ವಯಸ್ಸಿನಲ್ಲಿ, ಭೂಮಿ ಪೆಡ್ನೇಕರ್ ಅವರ ಪೋಷಕರು ಅವರನ್ನು ನಟನಾ ಶಾಲೆಗೆ ಕಳುಹಿಸಲು ಸಾಲವನ್ನು ತೆಗೆದುಕೊಂಡರು.

 

68

ಆದರೆ ನಂತರ ಕಡಿಮೆ ಹಾಜರಾತಿಯಿಂದಾಗಿ ಭೂಮಿಯನ್ನು ಶಾಲೆಯಿಂದ ಹೊರಹಾಕಲಾಯಿತು. ಹೀಗಿರುವಾಗ ಓದಿಗಾಗಿ ಮಾಡಿದ ಸಾಲವನ್ನು ತೀರಿಸಲು ಯಶ್ ರಾಜ್ ಫಿಲಂಸ್ ನಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿ ಸಂಬಳದಿಂದಲೇ ಸಾಲ ತೀರಿಸಿದ್ದರು.


 

 

78

ಭೂಮಿ ಪೆಡ್ನೇಕರ್ ಅವರು 'ಟಾಯ್ಲೆಟ್: ಏಕ್ ಪ್ರೇಮ್ ಕಥಾ', 'ಶುಭ್ ಮಂಗಲ್ ಜ್ಯಾದಾ ಸಾವಧಾನ್', 'ಸೋನ್ ಚಿಡಿಯಾ', 'ಪತಿ ಪಟ್ನಿ ಔರ್ ವೋ', 'ಬಾಲಾ' ಮತ್ತು 'ಸಾಂಡ್ ಕಿ ಆಂಖ್' ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 

88

ಭೂಮಿ ಕೊನೆಯದಾಗಿ ನಟ ರಾಜ್‌ಕುಮಾರ್ ರಾವ್ ಎದುರು ‘ಬಧಾಯಿ ದೋ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಮುಂದಿನ ಸಿನಿಮಾ 'ರಕ್ಷಾ ಬಂಧನ' ಇದರಲ್ಲಿ ಅವರು ನಟ ಅಕ್ಷಯ್ ಕುಮಾರ್ ಎದುರು ಜೋಡಿಯಾಗಲಿದ್ದಾರೆ.

 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories