Love for Gold: ಬಪ್ಪಿ ಲಹರಿ ಅಷ್ಟು ಚಿನ್ನ ಧರಿಸಲು ಕಾರಣವೇನು ಗೊತ್ತಾ?

First Published Nov 29, 2021, 7:07 PM IST

70ರ ದಶಕದಲ್ಲಿ ಬಾಲಿವುಡ್‌ಗೆ (Bollywood) ಡಿಸ್ಕೋ (Disco) ಮತ್ತು ರಾಕ್ (Rock) ಸಂಗೀತವನ್ನು ಪರಿಚಯಿಸಿದ ಸಂಗೀತ ಸಂಯೋಜಕ ಬಪ್ಪಿ ಲಹಿರಿ (Bappi lahiri) ಅವರು ತಮ್ಮ 69ನೇ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಾರೆ. 27 ನವೆಂಬರ್ 1952ರಂದು ಕೋಲ್ಕತ್ತಾದಲ್ಲಿ ಜನಿಸಿದ ಬಪ್ಪಿ ಸಾಹಬ್ ಅವರು ವಿಶಿಷ್ಟವಾದ ಧ್ವನಿ ಮತ್ತು ಸಂಗೀತದಿಂದ ಜನಮನ ಗೆದ್ದಿದ್ದಾರೆ. ಇದರ ಹೊರತಾಗಿ, ಅವರು ಅವರ ಲುಕ್‌ಗೆ ಫೇಮಸ್‌. ಅವರು ಧರಿಸುವ ಚಿನ್ನದ (Gold) ಆಭರಣಗಳಿಂದ ಈ ಗಾಯಕ ಸಖತ್‌ ಸುದ್ದಿ ಮಾಡಿದ್ದಾರೆ. ಆದರೆ ಬಪ್ಪಿ ಲಹಿರಿಗೆ ಇಷ್ಟು ಚಿನ್ನಾಭರಣ ಹಾಕುವ ಹವ್ಯಾಸ ಎಲ್ಲಿಂದ ಬಂತು ಗೊತ್ತಾ? ಮತ್ತು ಅವರು ಅಷ್ಟೊಂದು ಚಿನ್ನ ಧರಿಸಲು ಕಾರಣವೇನು ಎಂದು ತಿಳಿಯಲು ಮುಂದೆ ಓದಿ.  

ಬಪ್ಪಿ ಲಹಿರಿ ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್ ಹಾಡುಗಳನ್ನು ಹಾಡಿದ್ದಾರೆ. ತೀರ್ಪುಗಾರರಾಗಿಯೂ ಹಲವು ರಿಯಾಲಿಟಿ ಶೋಗಳನ್ನು ಮಾಡಿದ್ದಾರೆ. ಬಾಲಿವುಡ್‌ಗೆ ಡಿಸ್ಕೋ ಮತ್ತು ರಾಕ್ ಸಂಗೀತವನ್ನು ಪರಿಚಯಿಸಿದ ಸಂಗೀತ ಸಂಯೋಜಕ ಬಪ್ಪಿ ಲಹಿರಿ ಅವರು. ಆದರೆ ಪ್ರಸಿದ್ಧ ಗಾಯಕನ ಈ ಜನಪ್ರಿಯತೆ ರಾಜಕೀಯದಲ್ಲಿ ಕೆಲಸ ಮಾಡಲಿಲ್ಲ.  

ಬಪ್ಪಿ ಲಹಿರಿ ಭಾರತದ ಬಂಗಾರದ ಮನುಷ್ಯ ಎನ್ನಬಹುದು. ಅವರ ದೇಹದ ಆಭರಣಗಳಿಂದ ಮುಚ್ಚಿ ಹೋಗಿರುತ್ತದೆ. ಕುತ್ತಿಗೆಯಲ್ಲಿ ಬಹಳಷ್ಟು ಸರಗಳು ಮತ್ತು ಉಂಗುರಗಳಿಂದ ತುಂಬಿದ ಕೈಗಳು ಬಪ್ಪಿ ದಾ ಅವರ ಲುಕ್‌. ಅಮೇರಿಕನ್ ರಾಕ್‌ಸ್ಟಾರ್ ಎಲ್ವಿಸ್ ಪ್ರೀಸ್ಲಿಯಿಂದ ಬಪ್ಪಿ ಅವರು ಆಭರಣಗಳನ್ನು ಧರಿಸಲು ಸ್ಫೂರ್ತಿ ಪಡೆದರು.
 

ಹಾಲಿವುಡ್ ಗಾಯಕ ಎಲ್ವಿಸ್ ಪ್ರೀಸ್ಲಿ ಅವರು ಚಿನ್ನದ ಸರಗಳನ್ನು ಧರಿಸುತ್ತಿದ್ದರು ಮತ್ತು ನಾನು ಅವರನ್ನು ತುಂಬಾ ಇಷ್ಟ ಪಡುತ್ತೇನೆ. ಆ ಸಮಯದಲ್ಲಿ ನಾನು ಯಶಸ್ವಿ ವ್ಯಕ್ತಿಯಾದಾಗ, ನನ್ನದೇ ಆದ ವಿಭಿನ್ನ ಲುಕ್‌ ಹೊಂದಲು ನಿರ್ಧರಿಸಿದೆ. ಅದರ ನಂತರ ನಾನು ಚಿನ್ನವನ್ನು ಧರಿಸಲು ಶುರು ಮಾಡಿದೆ. ಚಿನ್ನ ನನ್ನ ಪಾಲಿಗೆ ಅದೃಷ್ಟ ಎಂದು ಬಪ್ಪಿ ಲಹಿರಿ ಸಂದರ್ಶನವೊಂದರಲ್ಲಿ ಹೇಳಿದ್ದರು. 
 

ಬಪ್ಪಿ ಲಾಹಿರಿ ಮಾತ್ರವಲ್ಲ, ಅವರ ಪತ್ನಿ ಚಿತ್ರಾನಿ ಕೂಡ ಚಿನ್ನವನ್ನು ಇಷ್ಟ ಪಡುತ್ತಾರೆ. ಇದು 2014ರ ಚುನಾವಣಾ ಅಫಿಡವಿಟ್ ಪ್ರಕಾರ ಅವರ ಬಳಿ 967 ಗ್ರಾಂ ಚಿನ್ನ, 8.9 ಕೆಜಿ ಬೆಳ್ಳಿ, ನಾಲ್ಕು ಲಕ್ಷ ಮೌಲ್ಯದ ವಜ್ರವಿತ್ತು. ಆದರೆ ಇದು ಈಗ ಇನ್ನೂ  ಜಾಸ್ತಿಯಾಗಿದೆ

ಈ ಗಾಯಕರು 2014ರಲ್ಲಿ,  ಬಿಜೆಪಿಯಿಂದ ಚುನಾವಣೆಯಲ್ಲಿ ನಿಂತಿದ್ದರು. ಆದರೆ ಸೋತಿದ್ದರು. ಈ ವೇಳೆ ಬಪ್ಪಿ ಲಹರಿ ಅವರು ತಮ್ಮ ಆಸ್ತಿ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದರು. ಚುನಾವಣಾ ಅಫಿಡವಿಟ್ ಪ್ರಕಾರ, 2014ರಲ್ಲಿ ಬಪ್ಪಿ ಲಹರಿ ಬಳಿ 754 ಗ್ರಾಂ ಚಿನ್ನ ಮತ್ತು 4.62 ಕೆಜಿ ಬೆಳ್ಳಿ ಹೊಂದಿದ್ದರು. ಇದೀಗ ಮತ್ತಷ್ಟೂ ಹೆಚ್ಚಿರಬಹುದು. 

ಬಪ್ಪಿ ಲಾಹರಿಯವರು ತುಂಬಾ ಚಿಕ್ಕ ವಯಸ್ಸಿನಿಂದಲೇ ಸಂಗೀತ ಶಿಕ್ಷಣ ಪಡೆದರು. ಅವರ ತಂದೆ ಅಪರೇಶ್ ಲಾಹಿರಿ ಬಂಗಾಳಿ ಗಾಯಕ ಹಾಗೂ ತಾಯಿ ಬನ್ಸಾರಿ ಲಾಹಿರಿ ಕೂಡ ಸಂಗೀತಗಾರ್ತಿ. ಅವರು ಸಂಗೀತವನ್ನು ಆನುವಂಶಿಕವಾಗಿ ಪಡೆದರು. ಪಾಪ್ ಸಂಗೀತವನ್ನು ಭಾರತಕ್ಕೆ ತಂದ ಕೀರ್ತಿ ಬಪ್ಪಿ ದಾ ಅವರಿಗೂ ಸಲ್ಲುತ್ತದೆ.
 

70ರ ದಶಕದಲ್ಲಿ ಚಿತ್ರರಂಗವನ್ನು ಪ್ರವೇಶಿಸಿದ ಬಪ್ಪಿ 80ರ ದಶಕದಲ್ಲಿ ತಮ್ಮ ಕೆರಿಯರ್‌ನ ಉತ್ತುಂಗ ತಲುಪಿದರು. ಆ ಸಮಯದಲ್ಲಿ ಪ್ರತಿ ಚಿತ್ರದಲ್ಲೂ ಹಾಡಲು ನಿರ್ಮಾಪಕರ ಮೊದಲ ಆಯ್ಕೆ ಅವರೇ ಆಗಿದ್ದರು. 1975ರಲ್ಲಿ ‘ಜಖ್ಮಿ’ ಸಿನಿಮಾದಿಂದ ಬಪ್ಪಿ ಸಖತ್‌ ಫೇಮಸ್‌ ಆದರು.

ಬಪ್ಪಿ ದಾ ಅವರು ಹಾಡಿದ  'ಬಾಂಬೆ ಸೆ ಆಯಾ ಮೇರಾ ದೋಸ್ತ್, ನಾನು ಡಿಸ್ಕೋ ಡ್ಯಾನ್ಸರ್, ಜುಬಿ-ಜುಬಿ, ಯಾದ್ ಆ ರಹಾ ಹೈ ತೇರಾ ಪ್ಯಾರ್, ಯಾರ್ ಬಿನಾ ಚೈನ್ ಕಹಾನ್ ರೇ, ತಮ್ಮ ತಮ್ಮ ಲೋಗೇ,' ಹಾಡುಗಳು ಇಂದಿಗೂ ಜನರ ಬಾಯಲ್ಲಿ ಉಳಿದಿವೆ.

click me!