Aishwarya Rai Bachchan: ಸರ್ವರ್ ಆದ ಐಶ್ವರ್ಯಾ ರೈ, 30 ಜನಕ್ಕೆ ಊಟ ಬಡಿಸಿದ ಬಿಗ್‌ಬಿ ಸೊಸೆ

First Published | Nov 28, 2021, 10:34 AM IST

30 ಜನಕ್ಕೆ ಸರ್ವರ್ ಆಗಿದ್ದ ಐಶ್ವರ್ಯಾ ರೈ ಬಚ್ಚನ್(Aishwarya rai bachchan) ಮನೆಯಲ್ಲಿ ಹೇಗಿರುತ್ತಾರೆ ಎಂಬ ಕುತೂಹಲ ಇದೆಯಾ ? ಭಾರತೀಯ ಮೌಲ್ಯಗಳನ್ನು ಪ್ರೀತಿಸೋ(Love) ಮಾಜಿ ವಿಶ್ವಸುಂದರಿ ಬಗ್ಗೆ ನೀವರಿಯದ ವಿಚಾರ

ಐಶ್ವರ್ಯಾ ರೈ ಬಚ್ಚನ್(Aishwarya Rai Bachchan) ಒಮ್ಮೆ 30 ಜನರಿಗೆ ಮತ್ತು ಅಮಿತಾಬ್ ಬಚ್ಚನ್‌ಗೆ(Amitabh Bachchan) ಸ್ವತಃ ಕೈಯಾರೆ ಊಟ ಬಡಿಸಿದ್ದಾರೆ ಎಂದು ಸಂಗೀತಗಾರ ವಿಶಾಲ್ ದಾದ್ಲಾನಿ ಬಹಿರಂಗಪಡಿಸಿದ್ದಾರೆ. ನಟಿ ಹಾಗೂ ಮಾಜಿ ವಿಶ್ವಸುಂದರಿ ಎಲ್ಲರಿಗೂ ಆಹಾರ ಮತ್ತು ಸಿಹಿತಿಂಡಿಗಳನ್ನು ಬಡಿಸಿದ ನಂತರವೇ ಅವರು ಊಟಕ್ಕೆ ಕುಳಿತರು ಎಂದಿದ್ದಾರೆ.

ಅಭಿಷೇಕ್ ಬಚ್ಚನ್ ಮತ್ತು ಚಿತ್ರಾಂಗದಾ ಸಿಂಗ್ ಅವರು ತಮ್ಮ ಸಿನಿಮಾ ಬಾಬ್ ಬಿಸ್ವಾಸ್ ಪ್ರಚಾರಕ್ಕಾಗಿ ಭೇಟಿ ನೀಡಿದಾಗ ಸರಿಗಮಪ ವಿಶೇಷ ಸಂಚಿಕೆಯ ಶೂಟಿಂಗ್ ಸಂದರ್ಭದಲ್ಲಿ ವಿಶಾಲ್ ದಾದ್ಲಾನಿ ಮಾತನಾಡುತ್ತಿದ್ದರು. ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ವಿಶಾಲ್ ತೀರ್ಪುಗಾರರಾಗಿ ಭಾಗವಹಿಸುತ್ತಾರೆ.

Tap to resize

ಶೋ ನಿರೂಪಕ ಆದಿತ್ಯ ನಾರಾಯಣ್ ಅಭಿಷೇಕ್‌ಗೆ ಐಶ್ವರ್ಯಾ ಎಂದಾದರೂ ಮನೆಕೆಲಸಗಳನ್ನು ಮಾಡುತ್ತಾರೆಯೇ ಎಂದು ಕೇಳಿದಾಗ, ವಿಶಾಲ್ ದಾದ್ಲಾನಿ ಇದಕ್ಕೆ ಉತ್ತರಿಸಿದ್ದು ಇದು ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ.

ನಾವೆಲ್ಲರೂ ಸುಮಾರು 30 ಜನರ ದೊಡ್ಡ ತಂಡ ಅಮಿತಾಭ್ ಬಚ್ಚನ್ ಅವರ ಜೊತೆ ರಾತ್ರಿಯ ಊಟಕ್ಕೆ ಸೇರಿದ್ದೆವು. ನಾವು ಯಾವಾಗಲೂ ಬಚ್ಚನ್ ಅವರೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದರೆ, ಈ ಬಾರಿ ಇಡೀ ಗುಂಪು ರಾತ್ರಿಯ ಊಟಕ್ಕೆ ಬಂದಿತು. ಸಾಮಾನ್ಯವಾಗಿ ಅಂತಹ ಕೂಟದಲ್ಲಿ, ನಾವು ಬಹಳಷ್ಟು ಸರ್ವರ್‌ಗಳೊಂದಿಗೆ ಬಫೆಯನ್ನು ಹೊಂದಿರುತ್ತೇವೆ. ಆದರೆ ಎಲ್ಲರಿಗೂ ಊಟ ಬಡಿಸುತ್ತೇನೆ ಎಂದು ಐಶ್ವರ್ಯಾ ಹಠ ಹಿಡಿದಿದ್ದರು.

ಐಶ್ವರ್ಯಾ ಹಾಗೆ ಮಾಡುವ ಅಗತ್ಯವಿರಲಿಲ್ಲ, ನಮ್ಮೆಲ್ಲರ ನಡುವೆ ಯಾವುದೇ ಔಪಚಾರಿಕತೆ ಇಲ್ಲ. ಪ್ರಚಾರಕ್ಕಾಗಿ ಅಲ್ಲಿ ಕ್ಯಾಮೆರಾಗಳು ಇರಲಿಲ್ಲ, ಆದರೆ ಐಶ್ವರ್ಯಾ ಅದನ್ನು ಪ್ರೀತಿಯಿಂದ ಮಾಡಿದ್ದಾರೆ. ಆಕೆ ನಮಗೆ ತುಂಬಾ ವರ್ಷಗಳಿಂದ ಗೊತ್ತು. ನನಗೂ ಆಶ್ಚರ್ಯವಾಗಿತ್ತು ಏಕೆಂದರೆ ಎಲ್ಲರೂ ಊಟ ಮಾಡಿದ ನಂತರ ಅವರು ಎಲ್ಲರಿಗೂ ಸಿಹಿ ಬಡಿಸಿದ್ದಾರೆ.

ನಂತರ ಮಾತ್ರ ನಟಿ ಊಟ ಮಾಡಲು ಕುಳಿತಿದ್ದರು. ಆ ದಿನ ಐಶ್ವರ್ಯಾ ರೈ ಬಚ್ಚನ್ ಅವರು ನಮಗೆ ಆಹಾರವನ್ನು ಬಡಿಸಿದ ಕಾರಣ ನಾವೆಲ್ಲರೂ ಈ ಭೂಮಿ ಮೇಲಿನ ಅದೃಷ್ಟವಂತರು ಎಂದು ಭಾವಿಸಿದೆವು. ಅವರು ನಿಜವಾಗಿಯೂ ಅದ್ಭುತ ವ್ಯಕ್ತಿ ಎಂದಿದ್ದಾರೆ.

ಅಭಿಷೇಕ್ ಬಚ್ಚನ್ ಉತ್ತರಿಸಿ ಐಶ್ವರ್ಯಾ ನಿಜವಾಗಿಯೂ ಬೆಸ್ಟ್. ಅವಳು ತುಂಬಾ ಸರಳ ವ್ಯಕ್ತಿ. . ಅವರು ನಮ್ಮ ಭಾರತೀಯ ಮೌಲ್ಯಗಳನ್ನು ಪ್ರೀತಿಸುತ್ತಾರೆ. ನಮ್ಮ ಮಗಳಿಗೂ ಅದನ್ನೇ ಕಲಿಸುತ್ತಿದ್ದಾರೆ. ಅವರು ಮಾಡುವ ಎಲ್ಲದಕ್ಕೂ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.

Latest Videos

click me!