Samantha: ನಾಗ ಚೈತನ್ಯ ಜೊತೆ ಪಾಪು ಕನಸು ಕಂಡಿದ್ದ ನಟಿ..! ಹೇಳಿದ್ದಿಷ್ಟು

Suvarna News   | Asianet News
Published : Nov 28, 2021, 05:34 PM ISTUpdated : Nov 28, 2021, 05:38 PM IST

ಸಮಂತಾ(Samantha Ruth Prabhu) ಹಾಗೂ ನಾಗ ಚೈತನ್ಯ(Naga chaitanya) ವಿಚ್ಚೇದಿತರಾದರೂ ಈ ಜೋಡಿ ಕುರಿತು ಬಹಳಷ್ಟು ಚರ್ಚೆಗಳಾಗುತ್ತಲೇ ಇದೆ. ಎಲ್ಲವೂ ಸರಿ ಇದ್ದಿದ್ದರೆ ಈಗಾಗಲೇ ಸಮಂತಾ ಕಡೆಯಿಂದ ಪುಟ್ಟ ಪಾಪು ಬಗ್ಗೆ ಸಿಹಿ ಸುದ್ದಿ ಬಂದಿರುತ್ತಿತ್ತೇನೋ.. ಹೌದು. ಮದುವೆಯಾಗಿ 6 ತಿಂಗಳಿಗೆ ನಾಗ ಚೈತನ್ಯ ಜೊತೆ ಪುಟ್ಟ ಕಂದನಿಗೆ ಅಮ್ಮನಾಗೋ ಕನಸು ಬಿಚ್ಚಿಟ್ಟಿದ್ದರು ನಟಿ.

PREV
16
Samantha: ನಾಗ ಚೈತನ್ಯ ಜೊತೆ ಪಾಪು ಕನಸು ಕಂಡಿದ್ದ ನಟಿ..! ಹೇಳಿದ್ದಿಷ್ಟು

ಮದುವೆಯಾಗಿ ನಾಲ್ಕು ವರ್ಷಗಳನ್ನು ಪೋರೈಸಲು ಕೆಲವೇ ದಿನಗಳಿದ್ದಾಗ ಸಮಂತಾ ಮತ್ತು ನಾಗ ಚೈತನ್ಯ ವಿಚ್ಚೇದನೆ ಪಡೆದು ಬೇರೆಯಾಗಿದ್ದಾರೆ. ಇಬ್ಬರೂ ಆ ವಿಚ್ಚೇದನಾ ನಂತರದ ದಿನಗಳಲ್ಲಿ ಹಾದು ಹೋಗುತ್ತಿದ್ದಾರೆ. 2018 ರಲ್ಲಿ ಅವರು ಮದುವೆಯಾಗಿ ಆರು ತಿಂಗಳಾದಾಗ, ಮಗುವನ್ನು ಹೊಂದಲು ಟೈಮ್‌ಲೈನ್ ಅಂತಿಮಗೊಳಿಸುವ ಬಗ್ಗೆ ಸಮಂತಾ ಮಾತನಾಡಿದ್ದರು.

26

ಹೌದು. ಮದುವೆಯಾಗಿ ಆರೇ ತಿಂಗಳಿಗೆ ನಾಗ ಚೈತನ್ಯ ಅವರ ಮಗುವಿಗೆ ಅಮ್ಮನಾಗೋ ಬಗ್ಗೆ ಎಕ್ಸೈಟ್ ಆಗಿ ಮಾತನಾಡಿದ್ದರು ಸೌತ್ ನಟಿ. ಫಿಲ್ಮ್ ಕಂಪ್ಯಾನಿಯನ್‌ಗೆ ನೀಡಿದ ಸಂದರ್ಶನದಲ್ಲಿ ಸಮಂತಾ ತಾನು ಭಾರೀ ಒಳ್ಳೆಯ ಬಾಲ್ಯವನ್ನು ಹೊಂದಿರದ ಕಾರಣ ತನ್ನ ಮಗು ತನಗೆ ಸರ್ವಸ್ವ ಎಂದು ಹೇಳಿದ್ದರು. ದುರದೃಷ್ಟವಶಾತ್, ಸಮಂತಾ ಮತ್ತು ನಾಗ ಚೈತನ್ಯ ರಾಜಿ ಮಾಡಿಕೊಳ್ಳಲಾಗದ ಭಿನ್ನಾಭಿಪ್ರಾಯಗಳಿಂದ ಬೇರ್ಪಟ್ಟಾಗಿದೆ.

36

ಅಕ್ಟೋಬರ್ 2 ರಂದು, ಸಮಂತಾ ಮತ್ತು ನಾಗ ಚೈತನ್ಯ ತಮ್ಮ ಪ್ರತ್ಯೇಕತೆಯನ್ನು ಘೋಷಿಸುವ ಜಂಟಿ ಹೇಳಿಕೆಯನ್ನು ಹಂಚಿಕೊಂಡರು. 2017 ರಲ್ಲಿ ಗೋವಾದಲ್ಲಿ ಮದುವೆಯಾದ ಜೋಡಿ ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದರು. 2021 ರಲ್ಲಿ ಅವರ ವಿವಾಹ ವಾರ್ಷಿಕೋತ್ಸವದ ಮೊದಲು, ಅವರು ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದ್ದಾರೆ.

46

ಹಳೆಯ ಸಂದರ್ಶನವೊಂದಲ್ಲಿ ಸಮಂತಾ, ನನಗೆ ನನ್ನ ಮಗು ಯಾವಾಗ ಬೇಕು ಎಂದು ನಾನು ದಿನಾಂಕವನ್ನು ಹಾಕಿದ್ದೇನೆ. ದಿನಾಂಕವನ್ನು ನಿಗದಿಪಡಿಸಲಾಗಿದೆ! ಹಾಗೆ, ನಾವು ನಿಗದಿಪಡಿಸಿದ ದಿನಾಂಕದ ಪ್ರಕಾರ ಅದು ನಡೆಯುತ್ತದೆ! ಆದರೆ ನಾಗ ಚೈತನ್ಯ ನಿಗದಿಪಡಿಸಿದ ದಿನವೇ ಅದು ನಡೆಯುತ್ತೆ ಎನ್ನುವುದು ನನಗೆ ಗೊತ್ತು. ಆದರೆ ನಾವು ಯಾವಾಗ ಮಗುವನ್ನು ಹೊಂದಲು ಬಯಸುತ್ತೇವೆ ಎಂದು ನಾವು ಖಂಡಿತವಾಗಿಯೂ ಟೈಮ್‌ಲೈನ್ ಅನ್ನು ನಿಗದಿಪಡಿಸಿದ್ದೇವೆ ಎಂದಿದ್ದರು.

56

ತನ್ನ ಮಗುವಿಗೆ ಎಲ್ಲವನ್ನೂ ನೀಡುವುದಾಗಿ ಬಹಿರಂಗಪಡಿಸಿದ್ದರು ನಟಿ. ನನಗೆ ಮಗುವಾದಾಗ, ಆ ಮಗು ನನ್ನ ಸರ್ವಸ್ವವಾಗಲಿದೆ. ಕೆಲಸ ಮಾಡುವ ತಾಯಂದಿರ ಬಗ್ಗೆ ನನಗೆ ಹೆಚ್ಚಿನ ಗೌರವವಿತ್ತು. ನನ್ನ ಬಾಲ್ಯವು ತುಂಬಾ ಚೆನ್ನಾಗಿರಲಿಲ್ಲ. ಎಲ್ಲರೂ ತಮ್ಮ ಮಗುವಿಗೆ ಇಲ್ಲದಿದ್ದನ್ನೆಲ್ಲಾ ನೀಡಲು ಬಯಸುತ್ತಾರೆ. ನನಗೆ ಮಗುವಾದ ನಂತರದ ಮೊದಲ ಕೆಲವು ವರ್ಷಗಳಲ್ಲಿ ನಾನು ಎಲ್ಲಿಯೂ ಕಾಣಿಸಲಾರೆ. ಆ ಮಗು ನನಗೆ ಎಲ್ಲವೂ ಆಗಿರುತ್ತದೆ ಎಂದಿದ್ದರು.

66

ಸಮಂತಾ ಮತ್ತು ನಾಗ ಚೈತನ್ಯ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ನಾಗ ಚೈತನ್ಯ 200 ಕೋಟಿ ಜೀವನಾಂಶ ನೀಡಿದ್ದರೂ ಸಮಂತಾ ಅದನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.

Read more Photos on
click me!

Recommended Stories