ಈ ಕಾರಣಕ್ಕೆ ನೋರಾ ಫತೇಹಿ ಡ್ಯಾನ್ಸ್‌ ಕ್ಯಾನ್ಸಲ್‌ ಮಾಡಿದ ಬಾಂಗ್ಲಾದೇಶ ಸರ್ಕಾರ

Published : Oct 18, 2022, 04:55 PM IST

ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ತನ್ನ ಅದ್ಬುತ ನೃತ್ಯಕ್ಕಾಗಿ ಫೇಮಸ್‌. ಆದರೆ ಈಗ ನೋರಾ ಫತೇಹಿ  ಡ್ಯಾನ್ಸ್‌ ಫ್ಯಾನ್ಸ್‌ಗೆ  ಒಂದು  ಬೇಸರ ಸಂಗತಿ ಹೊರಬಿದ್ದಿದೆ.ಬಾಂಗ್ಲಾದೇಶ ಸರ್ಕಾರ ಆಕೆಯ ನೃತ್ಯ ಪ್ರದರ್ಶನವನ್ನು ನಿಷೇಧಿಸಿದೆ ಮತ್ತು ಪ್ರದರ್ಶನವನ್ನು ರದ್ದುಗೊಳಿಸಿದೆ ಎಂದು ಹೇಳಲಾಗುತ್ತಿದೆ. ಅಷ್ಷಕ್ಕೂ ಕಾರಣವೇನು ಗೊತ್ತಾ?

PREV
17
ಈ ಕಾರಣಕ್ಕೆ ನೋರಾ ಫತೇಹಿ ಡ್ಯಾನ್ಸ್‌ ಕ್ಯಾನ್ಸಲ್‌ ಮಾಡಿದ ಬಾಂಗ್ಲಾದೇಶ ಸರ್ಕಾರ

ಬಾಂಗ್ಲಾದೇಶ ಸರ್ಕಾರ ಬಾಲಿವುಡ್‌ ನಟಿಯ ನೃತ್ಯ ಪ್ರದರ್ಶನವನ್ನು ನಿಷೇಧಿಸಿದೆ. ಡಾಲರ್ ಉಳಿತಾಯಕ್ಕಾಗಿ ಬಾಂಗ್ಲಾದೇಶ ಸರ್ಕಾರ ನೋರಾ ಅವರ ನೃತ್ಯ ಕಾರ್ಯಕ್ರಮವನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ.  

27

ಬಾಂಗ್ಲಾದೇಶದ ಸಾಂಸ್ಕೃತಿಕ ವ್ಯವಹಾರಗಳ ಸಚಿವಾಲಯ ಸೋಮವಾರ ನೋಟಿಸ್ ಜಾರಿ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದೆ. ಜಾಗತಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ವಿದೇಶಿ ವಿನಿಮಯ ಮೀಸಲು ಉಳಿಸಿಕೊಳ್ಳುವ ಉದ್ದೇಶದಿಂದ ನೋರಾಗೆ ಅವಕಾಶ ನೀಡಲಾಗಿಲ್ಲ ಮತ್ತು ಅವರ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ನೋಟಿಸ್‌ನಲ್ಲಿ ಬರೆಯಲಾಗಿದೆ.

37

ಮಾಧ್ಯಮ ವರದಿಗಳ ಪ್ರಕಾರ, ಮಹಿಳಾ ನಾಯಕತ್ವ ನಿಗಮವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ಮತ್ತು ಪ್ರಶಸ್ತಿಗಳನ್ನು ನೀಡಲು ನೋರಾ ಫತೇಹಿ ಅವರನ್ನು ಆಹ್ವಾನಿಸಲಾಗಿತ್ತು. 

47

ಅದೇ ಸಮಯದಲ್ಲಿ, ನೀಡಲಾದ ಸೂಚನೆಯಲ್ಲಿ, ಸಂಸ್ಕೃತಿ ಸಚಿವಾಲಯವು ವಿದೇಶಿ ವಿನಿಮಯ ಮೀಸಲು ಕಡಿಮೆಯಾಗುತ್ತಿರುವ ಮಧ್ಯೆ ಡಾಲರ್ ಪಾವತಿಗಳ ಮೇಲಿನ ಕೇಂದ್ರ ಬ್ಯಾಂಕ್‌ನ ನಿರ್ಬಂಧಗಳನ್ನು ಉಲ್ಲೇಖಿಸಿದೆ, 

57

ಕೆಲವು ತಿಂಗಳಿಂದ ನೋರಾ ಅವರ ಹೆಸರು ಹಣ ಸುಲಿಗೆ ಪ್ರಕರಣದ ಆರೋಪಿ  ಸುಖೇಶ್ ಚಂದ್ರಶೇಖರ್ ಅವರಿರ ಜೊತೆ ಸೇರಿ ಸಾಕಷ್ಟು ಸುದ್ದಿಯಲ್ಲಿದೆ

67

ನೋರಾ ಫತೇಹಿ ಅವರು ಈ ದಿನಗಳಲ್ಲಿ ಟಿವಿಯ ರಿಯಾಲಿಟಿ ಡ್ಯಾನ್ಸ್ ಶೋ ಜಲಕ್ ದಿಖ್ಲಾ ಜಾ ಶೋನ ಜಡ್ಜ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದ ತೀರ್ಪುಗಾರರಾಗಿ ಮಾಧುರಿ ದೀಕ್ಷಿತ್ ಮತ್ತು ಕರಣ್ ಜೋಹರ್ ಕೂಡ ಇದ್ದಾರೆ.

77

ನೋರಾ ಬಾಲಿವುಡ್ ಮತ್ತು ಸೌತ್ ಚಿತ್ರಗಳಲ್ಲಿ ಐಟಂ ಡ್ಯಾನ್ಸ್ ಮಾಡಿದ್ದಾರೆ. ಅವರು ಪ್ರಭಾಸ್ ಅವರ ಬಾಹುಬಲಿಯಲ್ಲಿ ಡ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ. ಅದೇ ಸಮಯದಲ್ಲಿ, ಅವರು ಅಜಯ್ ದೇವಗನ್ ಅವರ ಭುಜ್ ಚಿತ್ರದಲ್ಲಿ ಅತಿಥಿ ಪಾತ್ರವನ್ನು ಮಾಡಿದರು.

Read more Photos on
click me!

Recommended Stories