ಆಪ್ತಮಿತ್ರ ರಿಮೇಕ್ ಚಂದ್ರಮುಖಿ ಸಿನಿಮಾ ಶೂಟಿಂಗ್ ಆಗಿದ್ದೆಲ್ಲಿ?

First Published | Nov 19, 2024, 2:53 PM IST

ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್‌ ನಟನೆಯ ಆಪ್ತಮಿತ್ರ ಸಿನಿಮಾ ಎಲ್ಲರಿಗೂ ಗೊತ್ತು, 2004ರಲ್ಲಿ ತೆರೆಕಂಡ ಈ ಸಿನಿಮಾ ವರ್ಷ ಪೂರ್ತಿ ಥಿಯೇಟರ್‌ಗಳಲ್ಲಿ ಓಡಿ ಆ ಕಾಲದಲ್ಲಿ ಬಿಗ್ ಹಿಟ್ ಆಗಿತ್ತು. 

ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್‌ ನಟನೆಯ ಆಪ್ತಮಿತ್ರ ಸಿನಿಮಾ ಎಲ್ಲರಿಗೂ ಗೊತ್ತು, 2004ರಲ್ಲಿ ತೆರೆಕಂಡ ಈ ಸಿನಿಮಾ ವರ್ಷ ಪೂರ್ತಿ ಥಿಯೇಟರ್‌ಗಳಲ್ಲಿ ಓಡಿ ಆ ಕಾಲದಲ್ಲಿ ಬಿಗ್ ಹಿಟ್ ಆಗಿತ್ತು. ಮಲೆಯಾಳಂನ 'ಮಣಿಚಿತ್ರತಾಳು'ಸಿನಿಮಾದ ರಿಮೇಕ್ ಆಗಿದ್ದ ಈ ಸಿನಿಮಾವನ್ನು 2005ರಲ್ಲಿ ತಮಿಳಿಗೆ ರಿಮೇಕ್ ಮಾಡಲಾಗಿತ್ತು. ರಜನಿಕಾಂತ್ ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಮಾಡಿದ ಪಾತ್ರ ಮಾಡಿದ್ದರು.  ಚಂದ್ರಮುಖಿ ಹೆಸರಿನ ಈ ಸಿನಿಮಾ ತಮಿಳಿನಲ್ಲೂ ಸಖತ್ ಹಿಟ್ ಆಗಿತ್ತು. ಈ ಚಂದ್ರಮುಖಿ ಸಿನಿಮಾದ ಶೂಟಿಂಗ್ ನಡೆದಿದ್ದು, ಬೆಂಗಳೂರಿನ ಬೆಂಗಳೂರು ಪ್ಯಾಲೇಸ್‌ನಲ್ಲಿ ಆ ಪ್ಯಾಲೇಸ್‌ನ ಒಂದು ದಿನದ ಬಾಡಿಗೆ ಎಷ್ಟು, ಈ ಸಿನಿಮಾಗೆ ಎಷ್ಟು ಬಾಡಿಗೆ ವಿಧಿಸಲಾಯ್ತು ಆ ಬಗ್ಗೆ ಒಂದು ಡಿಟೇಲ್  ಸ್ಟೋರಿ ಇಲ್ಲಿದೆ. 

ಚಂದ್ರಮುಖಿ ಶೂಟಿಂಗ್ ಸ್ಥಳ

ಪಾಳು ಬಿದ್ದ ಬಂಗಲೆ ಹಳೆ ಕಟ್ಟಡಗಳಲ್ಲಿ ಪಿಶಾಚಿಗಳು ದೆವ್ವಗಳು ಇರುತ್ತವೆ ಎಂಬ ನಂಬಿಕೆ ಇದೆ. ಹಳೆಯ ಅರಮನೆಗಳಿಗೂ ಅಂತಹದ್ದೇ ಅದರದ್ದೇ ಆದ ಕಥೆಗಳಿರುತ್ತವೆ. ಅಂಥ ಅರಮನೆಯನ್ನೇ ಹುಡುಕಿ ಸಿನಿಮಾ ಶೂಟಿಂಗ್ ಮಾಡ್ತಾರೆ. ಹಾಗೆ ಹಳೆಯ ಅರಮನೆಯನ್ನೇ ಹುಡಕಿ ಮಾಡಿದ ಸಿನಿಮಾವೊಂದು ಸೂಪರ್ ಹಿಟ್ ಆಯ್ತು ಅದುವೇ ರಜನಿಕಾಂತ್ ನಟನೆಯ ಸೂಪರ್ ಡೂಪರ್ ಹಿಟ್ ಆದ ಚಂದ್ರಮುಖಿ ಚಿತ್ರ.

ಪಿ.ವಾಸು ನಿರ್ದೇಶನದಲ್ಲಿ ರಜನಿಕಾಂತ್, ಪ್ರಭು, ಜ್ಯೋತಿಕಾ, ನಯನತಾರಾ, ವಡಿವೇಲು, ವಿಜಯಕುಮಾರ್, ನಾಸರ್, ಮಾಳವಿಕಾ, ಕೆ.ಆರ್.ವಿಜಯಾ, ವಿನೀತ್ ಮುಂತಾದ ತಾರಾಗಣದೊಂದಿಗೆ 2005 ರಲ್ಲಿ ಬಿಡುಗಡೆಯಾದ ಚಿತ್ರ ಚಂದ್ರಮುಖಿ. ಹಾಸ್ಯದೊಂದಿಗೆ ಒಂದು ಥ್ರಿಲ್ಲರ್ ಕಥೆಯನ್ನು ನಿರ್ದೇಶಕ ವಾಸು ನೀಡಿದ್ದು. 190 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಂದ್ರಮುಖಿ ವಿಶ್ವಾದ್ಯಂತ 900 ಕೋಟಿ ರೂ. ಗಳಿಕೆ ಮಾಡಿತ್ತು.

Tap to resize

ರಾಮ್‌ಕುಮಾರ್ ಗಣೇಶನ್ ಪ್ರಭು ಅವರ ಶಿವಾಜಿ ಗಣೇಶನ್ಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರ ತಮಿಳು ಚಿತ್ರರಂಗದಲ್ಲಿ ಹೆಚ್ಚು ದಿನಗಳು ಪ್ರದರ್ಶನಗೊಂಡ ಸೂಪರ್ ಡೂಪರ್ ಹಿಟ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 890 ದಿನಗಳು ಪ್ರದರ್ಶನಗೊಂಡು ಭರ್ಜರಿ ಗಳಿಕೆ ಕಂಡಿತ್ತು. ಚಿತ್ರಕ್ಕೆ ವಿದ್ಯಾಸಾಗರ್ ಸಂಗೀತ ನೀಡಿದ್ದು. ಎಲ್ಲಾ ಹಾಡುಗಳು ಹಿಟ್ ಆಗಿದ್ದವು. ಚಿತ್ರದಲ್ಲಿ ರಜನಿಕಾಂತ್ ಸರವಣನ್ ಮತ್ತು ವೇಟಯನ್ ರಾಜ ಎಂಬ ಪಾತ್ರಗಳಲ್ಲಿ ನಟಿಸಿದ್ದಾರೆ. ಜ್ಯೋತಿಕಾ ಚಂದ್ರಮುಖಿಯಾಗಿ ಅಬ್ಬರಿಸಿದ್ದಾರೆ.

ಸುಮಾರು 150 ವರ್ಷಗಳ ಹಿಂದೆ ವೇಟೈಯನ್ ರಾಜ ಆಂಧ್ರಪ್ರದೇಶದ ವಿಜಯನಗರಕ್ಕೆ ಹೋದ. ಅಲ್ಲಿ ಚಂದ್ರಮುಖಿ ಎಂಬ ನರ್ತಕಿಯನ್ನು ನೋಡಿ ಅವಳ ಮೇಲೆ ಆಸೆಪಟ್ಟ. ಆದರೆ, ನರ್ತಕಿ ಇನ್ನೊಬ್ಬ ನರ್ತಕ ಗುಣಶೇಖರನನ್ನು ಪ್ರೀತಿಸುತ್ತಿದ್ದಳು. ಇದು ವೇಟ್ಟಯನ್ ರಾಜನಿಗೆ  ಈ ವಿಚಾರ ತಿಳಿದು ಗುಣಶೇಖರನನ್ನು ಕೊಂದು ಚಂದ್ರಮುಖಿಯನ್ನು ಸುಟ್ಟುಹಾಕಿದ. ತನ್ನ ಆಸೆ ಈಡೇರದ ಚಂದ್ರಮುಖಿ ಆತ್ಮವು ದುರ್ಗಾಳ ದೇಹವನ್ನು ಪ್ರವೇಶಿಸಿತು. ನಂತರ ಏನಾಯಿತು ಎಂಬುದೇ  ಚಂದ್ರಮುಖಿ ಅಥವಾ ಕನ್ನಡದ ಆಪ್ತಮಿತ್ರದ ಸಿನಿಮಾ ಕತೆ.

ಈ ಎಲ್ಲಾ ದೃಶ್ಯಗಳ ಶೂಟಿಂಗ್ ನಡೆದಿದ್ದು, ಕರ್ನಾಟಕದಲ್ಲಿ ಇಲ್ಲಿನ ಮೈಸೂರಿ ಅರಮನೆ ಬಹಳ ಪ್ರಸಿದ್ಧ ಹಾಗೆಯೇ ಬೆಂಗಳೂರು ಅರಮನೆಯೂ ಅಷ್ಟೇ ಪ್ರಸಿದ್ಧ ಈ ಬೆಂಗಳೂರಿನ ಅರಮನೆಯಲ್ಲಿ ಈ ಚಂದ್ರಮುಖಿ ಸಿನಿಮಾದ ಶೂಟಿಂಗ್ ನಡೆದಿತ್ತು.

ರಜನಿಕಾಂತ್, ಬೆಂಗಳೂರು ಅರಮನೆ

ಈ ಅರಮನೆಯನ್ನು ನೋಡಲು ಭಾರತೀಯರಿಗೆ 225 ರೂ. ಮತ್ತು ವಿದೇಶಿ ಪ್ರವಾಸಿಗರಿಗೆ 450 ರೂ. ಪ್ರವೇಶ ಶುಲ್ಕ ವಿಧಿಸಲಾಗುತ್ತದೆ. ನೀವು ಕೂಡ ಹೋಗಿ ನೋಡಬಹುದು. ಈ ಅರಮನೆಯನ್ನು ಶೂಟಿಂಗ್‌ಗೆ ಮಾತ್ರವಲ್ಲದೆ ಮದುವೆಗೂ ಬಾಡಿಗೆಗೆ ನೀಡುತ್ತಾರೆ. ನಿಮಗೂ ಈ ಅರಮನೆಗೆ ಹೋಗಬೇಕು, ಅಲ್ಲಿ ಮದುವೆ ಮಾಡಿಕೊಳ್ಳಬೇಕು ಅಂತ ಆಸೆ ಇದ್ದರೆ ಹೋಗಬಹುದು. ಈ ಅರಮನೆ ಸುಮಾರು 120 ವರ್ಷಗಳಷ್ಟು ಹಳೆಯದು.

ಅಂದಹಾಗೆ ಕನ್ನಡದ ಆಪ್ತಮಿತ್ರದಲ್ಲಿ ಸಾಹಸಸಿಂಗ್ ವಿಷ್ಣುವರ್ಧನ್‌, ನಟಿ ಸೌಂದರ್ಯ, ರಮೇಶ್ ಅರವಿಂದ್, ದ್ವಾರಕೀಶ್, ಪ್ರೇಮ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

Latest Videos

click me!