ಸಲ್ಮಾನ್‌ ಖಾನ್‌ಗೆ ಐಶ್ವರ್ಯಾ ರೈ ಅಣ್ಣನ ಪಾತ್ರದ ಆಫರ್ : ನಟ ಹೇಳಿದ್ದೇನು?

Published : Nov 19, 2024, 12:17 PM ISTUpdated : Nov 19, 2024, 12:18 PM IST

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್‌ ಒಂದು ಕಾಲದ ಜೋಡಿ ಹಕ್ಕಿಗಳು, ಆಮೇಲೆ ಅವರಿಬ್ಬರು ಕಿತ್ತಾಡಿಕೊಂಡು ದೂರಾಗಿದ್ದು, ಸಲ್ಮಾನ್ ಖಾನ್ ಫುಲ್ ವೈಲೆಂಟ್ ಆಗಿದ್ದು ಬಾಲಿವುಡ್‌ನಲ್ಲಿ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಪ್ರೇಮಿಯಾಗಿದ್ದ ಸಲ್ಮಾನ್‌ ಖಾನ್‌ಗೆ ಒಮ್ಮೆ ಐಶ್ವರ್ಯಾ ರೈ ಸೋದರನ ಪಾತ್ರ ಮಾಡುವಂತೆ ಸಿನಿಮಾವೊಂದರಲ್ಲಿ ಆಫರ್ ಮಾಡಲಾಗಿತ್ತಂತೆ.

PREV
15
ಸಲ್ಮಾನ್‌ ಖಾನ್‌ಗೆ ಐಶ್ವರ್ಯಾ ರೈ ಅಣ್ಣನ ಪಾತ್ರದ ಆಫರ್ : ನಟ ಹೇಳಿದ್ದೇನು?

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್‌ ಒಂದು ಕಾಲದ ಜೋಡಿ ಹಕ್ಕಿಗಳು, ಆಮೇಲೆ ಅವರಿಬ್ಬರು ಕಿತ್ತಾಡಿಕೊಂಡು ದೂರಾಗಿದ್ದು, ಸಲ್ಮಾನ್ ಖಾನ್ ಫುಲ್ ವೈಲೆಂಟ್ ಆಗಿದ್ದು ಬಾಲಿವುಡ್‌ನಲ್ಲಿ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಪ್ರೇಮಿಯಾಗಿದ್ದ ಸಲ್ಮಾನ್‌ ಖಾನ್‌ಗೆ ಒಮ್ಮೆ ಐಶ್ವರ್ಯಾ ರೈ ಸೋದರನ ಪಾತ್ರ ಮಾಡುವಂತೆ ಸಿನಿಮಾವೊಂದರಲ್ಲಿ ಆಫರ್ ಮಾಡಲಾಗಿತ್ತಂತೆ.

25

 90 ರ ದಶಕದ ಉತ್ತರಾರ್ಧದಲ್ಲಿ ಐಶ್ವರ್ಯಾ ಹಾಗೂ ಸಲ್ಮಾನ್ ಖಾನ್ ಅವರ ಪ್ರಣಯ ಸಂಬಂಧ ಉತ್ತುಂಗದಲ್ಲಿದ್ದ ಕಾಲ, ಅದು ಬಾಲಿವುಡ್‌ನ ಬಹು ಚರ್ಚಿತ ವಿಚಾರಗಳಲ್ಲೂ ಒಂದಿದ್ದು, ಬಹಳವಾಗಿ ಪ್ರೀತಿಸುತ್ತಿದ್ದ ಈ ಜೋಡಿ ನಂತರ ಸಾರ್ವಜನಿಕವಾಗಿ ಪರಸ್ಪರ ದೂರಾಗಿದ್ದರು. ಹೀಗಿರುವಾಗ ಇದೇ ಸಮಯದಲ್ಲಿ ನಟ ಸಲ್ಮಾನ್‌ ಖಾನ್‌ಗೆ ಐಶ್ವರ್ಯಾ ರೈ ಸೋದರನ ಪಾತ್ರ ಮಾಡುವಂತೆ ಹೇಳಲಾಗಿತ್ತಂತೆ. ಪ್ರೇಮಿಗೆ ಅಣ್ಣನ ಪಾತ್ರ ಮಾಡು ಅಂದ್ರೆ ಯಾರು ರೆಡಿ ಇರ್ತಾರೆ ಹೇಳಿ.

35

2000 ದಲ್ಲಿ ಬಿಡುಗಡೆಯಾದ ಐಶ್ವರ್ಯಾ ರೈ ನಟನೆಯ ಜೋಶ್ ಸಿನಿಮಾದಲ್ಲಿ ಐಶ್ ಸೋದರ ಪಾತ್ರ ಮಾಡುವುದಕ್ಕೆ ನಟ ಸಲ್ಮಾನ್‌ ಖಾನ್‌ಗೆ ಆಫರ್‌ ಮಾಡಲಾಗಿತ್ತಂತೆ ಆದರೆ ನಟ ಸಲ್ಮಾನ್ ಖಾನ್ ಈ ಪಾತ್ರವನ್ನು ನಿರಾಕರಿಸಿದರಂತೆ ಇದು ಅಂತಿಮವಾಗಿ ಶಾರುಖ್ ಖಾನ್ ಪಾಲಾಯ್ತು ಎಂಬ ಕುತೂಹಲಕಾರಿ ವಿಚಾರ ಬಯಲಾಗಿದೆ.

45

ಇದಾದ ನಂತರ ಇವರ ಪ್ರೇಮದ ಬಿಸಿ ಆರುವ ಹಂತ ತಲುಪಿದ್ದು, ಸಲ್ಮಾನ್ ಮತ್ತು ಐಶ್ವರ್ಯಾ ಪರಸ್ಪರ ದೂರಾಗಿದ್ದರು.  ಸಲ್ಮಾನ್ ಖಾನ್ ವಿರುದ್ಧ ಐಶ್ವರ್ಯಾ ರೈ ಹಿಂಸೆಯ ಆರೋಪ ಮಾಡಿದ್ದರು.  ಈಗಲೂ ಈ ಜೋಡಿ ಯಾವ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಜೊತೆಯಾಗಿ ಕಾಣಿಸಿಕೊಳ್ಳುವುದೇ ಇಲ್ಲ. 

55

ಅಂದಹಾಗೆ 2000ದಲ್ಲಿ ತೆರೆಕಂಡ ಈ ಜೋಶ್ ಮೂವಿಯಲ್ಲಿ ಐಶ್ವರ್ಯಾ ರೈ, ಶಾರುಖ್ ಖಾನ್, ಚಂದ್ರಚೂರ್ ಸಿಂಗ್, ಪ್ರಿಯಾ ಗಿಲ್ ನಟಿಸಿದ್ದರು. ಕಮರ್ಷಿಯಲ್ ಹಿಟ್ ಆದ ಈ ಸಿನಿಮಾವನ್ನು ಮನ್ಸೂರ್ ಖಾನ್ ನಿರ್ದೇಶನ ಮಾಡಿದ್ದರು.

Read more Photos on
click me!

Recommended Stories