₹24 ಕೋಟಿ ಗಳಿಸಿದೆ 'ಎನ್‌ಟಿಆರ್: ಕಥಾನಾಯಕ'
ಸುಮಾರು ₹70-80 ಕೋಟಿ ಪ್ರೀ ರಿಲೀಸ್ ವ್ಯವಹಾರ ನಡೆದಿದ್ದು, ಈ ಚಿತ್ರಕ್ಕೆ ಥಿಯೇಟ್ರಿಕಲ್ ಆಗಿ ಸುಮಾರು 14 ಕೋಟಿ ಷೇರು ಬಂದಿದೆ. ಅಂದರೆ ₹60 ಕೋಟಿಗೂ ಹೆಚ್ಚು ನಷ್ಟ ತಂದಿದೆ. ನಂತರ ಒಂದು ತಿಂಗಳ ನಂತರ 'ಎನ್‌ಟಿಆರ್: ಮಹಾನಾಯಕ' ಚಿತ್ರವನ್ನು ಬಿಡುಗಡೆ ಮಾಡಲಾಯಿತು.
ಮೊದಲ ಭಾಗ ಆಕರ್ಷಿಸಲು ಸಾಧ್ಯವಾಗದ ಕಾರಣ ಎರಡನೇ ಭಾಗದ ಬಗ್ಗೆಯೂ ಜನರು ಆಸಕ್ತಿ ತೋರಿಸಲಿಲ್ಲ. ಇದರಿಂದ ಮೊದಲ ಪ್ರದರ್ಶನದಿಂದಲೇ ಈ ಚಿತ್ರ ಕೂಡ ಪ್ಲಾಫ್ ಎಂಬ ಮಾತುಗಳು ಕೇಳಿಬಂದವು. ಟಿಡಿಪಿ ಕಾರ್ಯಕರ್ತರು ಸಹ ಈ ಚಿತ್ರವನ್ನು ನೋಡದಿರುವುದು ಗಮನಾರ್ಹ. ಎರಡನೇ ಭಾಗ 2 ಕೋಟಿ ಕೂಡ ಗಳಿಸಲು ಸಾಧ್ಯವಾಗಲಿಲ್ಲ. ಹೀಗೆ ಒಟ್ಟಾರೆಯಾಗಿ 'ಎನ್‌ಟಿಆರ್' ಜೀವನಚರಿತ್ರೆ ಸಿನಿಮಾಗಳು ವಿತರಕರಿಗೆ ₹60 ಕೋಟಿಗೂ ಹೆಚ್ಚು ಹಣವನ್ನು ನಷ್ಟ ಮಾಡಿದೆ.