ಸತ್ಯರಾಜ್ ಕುಟುಂಬದ ಸಿಬಿರಾಜ್, ದಿವ್ಯಾ ಬಗ್ಗೆ ಬಹುತೇಕರಿಗೆ ತಿಳಿದಿದ್ದರೂ, ಸತ್ಯರಾಜ್ ಪತ್ನಿ ಮಹೇಶ್ವರಿ ಬಗ್ಗೆ ಬಹುತೇಕರಿಗೆ ತಿಳಿದಿರುವ ಸಾಧ್ಯತೆ ಕಡಿಮೆ. ಈ ಹಿನ್ನೆಲೆಯಲ್ಲಿ, ತಾಯಿಯ ಬಗ್ಗೆ ದಿವ್ಯಾ ಭಾವುಕ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅದರಂತೆ ಸತ್ಯರಾಜ್ ಪತ್ನಿ ಮಹೇಶ್ವರಿ ಕಳೆದ ನಾಲ್ಕು ವರ್ಷಗಳಿಂದ ಕೋಮಾದಲ್ಲಿದ್ದಾರಂತೆ. ಅವರಿಗೆ PEG ಟ್ಯೂಬ್ ಮೂಲಕ ಆಹಾರ ನೀಡಲಾಗುತ್ತಿದೆ ಎಂದು ಹೇಳಿರುವ ಅವರು, ವೈದ್ಯಕೀಯ ಪ್ರಗತಿಗಾಗಿ ಆಶಾವಾದದಿಂದ ಕಾಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.