47ರಲ್ಲಿ ಕೂಡಿಬಂದ ಕಂಕಣಬಲ: ದಾಂಪತ್ಯಕ್ಕೆ ಕಾಲಿಟ್ಟ ಬಾಹುಬಲಿಯ ಕುಮಾರವರ್ಮಾ

First Published | Nov 28, 2024, 5:49 PM IST

ಬಾಹುಬಲಿ ದಿ ಕಂಕ್ಲುಷನ್‌ನಲ್ಲಿ ಕುಮಾರ ವರ್ಮಾನ ಪಾತ್ರದ ಮೂಲಕ ದೇಶದೆಲ್ಲೆಡೆ ಫೇಮಸ್ ಆದ ತೆಲುಗು ನಟ ಸುಬ್ಬರಾಜು ಅವರಿಗೆ 47ನೇ ವಯಸ್ಸಲ್ಲಿ ಕಂಕಣ ಬಲ ಕೂಡಿ ಬಂದಿದ್ದು,ಶ್ರವಂತಿ ಎಂಬುವವರೊಂದಿಗೆ ಹಸೆಮಣೆ ಏರಿದ್ದಾರೆ. 

ನಟ ಸುಬ್ಬರಾಜು ಮದುವೆ

ತೆಲುಗು ಹಾಗೂ ತಮಿಳು  ಚಿತ್ರರಂಗದಲ್ಲಿ ಈಗ ಮದುವೆ ಸೀಸನ್ ನಡೆಯುತ್ತಿದೆ. ಕೆಲ ದಿನಗಳ ಹಿಂದಷ್ಟೇ ನಾಗಾರ್ಜುನ ಮೊದಲ ಪುತ್ರ ನಾಗಚೈತನ್ಯ ಮದುವೆ ನಟಿ ಶೋಭಿತಾ ಧೂಲಿಪಲ್ಲ ಜೊತೆ ಫಿಕ್ಸ್ ಆಗಿದ್ದರೆ, ಜೊತೆ ಜೊತೆಗೆ ಕಿರಿಯ ಪುತ್ರ ಅಖಿಲ್ ಮದುವೆಯೂ ಜೈನಾಬ್ ಎಂಬುವವರರೊಂದಿಗೆ ಫಿಕ್ಸ್ ಆಗಿದ್ದು ಎಂಗೇಜ್ ಆಗಿದ್ದಾರೆ. ಅತ್ತ ತಮಿಳಿನಲ್ಲಿ ನಟಿ ರಮ್ಯಾ ಪಾಂಡ್ಯ ಮದುವೆ ಇತ್ತೀಚೆಗಷ್ಟೇ ನಡೆಯಿತು. ಇದಾದ ನಂತರ ನಟಿ ಕೀರ್ತಿ ಸುರೇಶ್ ಕೂಡ ಬೇಗ ಮದುವೆ ಆಗುವ ಸುದ್ದಿ ಹರಿದಾಡುತ್ತಿದೆ. ಇದರ ನಡುವೆ ತೆಲುಗಿನ ಖ್ಯಾತ ನಟ ಪೋಷಕ ಮತ್ತು ಖಳನಟ ಪಾತ್ರಗಳಲ್ಲಿ ಪ್ರಸಿದ್ಧಿ ಪಡೆದಿದ್ದ, ಬಾಹುಬಲಿಯ ಕುಮಾರ ವರ್ಮಾ ಖ್ಯಾತಿಯ ಸುಬ್ಬರಾಜು ಮದುವೆ ಆಗಿದ್ದಾರೆ.

ನಟ ಸುಬ್ಬರಾಜು ಮದುವೆ

ತೆಲುಗು, ತಮಿಳು ಪ್ರೇಕ್ಷಕರಿಗೆ ಇವರ ಪರಿಚಯ ಬೇಕಿಲ್ಲ. ತಮಿಳಿನಲ್ಲಿ ಎಂ.ಕುಮರನ್, ಪೋಕ್ಕಿರಿ, ಸರವಣ, ಆಯುಧಂ, ಆದಿ, ಬಾಹುಬಲಿ 2, ಅಸುರಗುರು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಚಿತ್ರಗಳಲ್ಲಿಯೂ ನಟಿಸಿರುವ ಸುಬ್ಬರಾಜು ಅವರಿಗೆ ಈಗ ತಮ್ಮ 47ರ ಹರೆಯದಲ್ಲಿ ಕಂಕಣಬಲ ಕೂಡಿ ಬಂದಿದೆ.

Tap to resize

47 ವರ್ಷದ ಸುಬ್ಬರಾಜು ಬ್ಯಾಚುಲರ್ ಲೈಫ್‌ಗೆ ಗುಡ್‌ಬೈ ಹೇಳಿ ಮದುವೆ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪತ್ನಿಯ ಜೊತೆ ಫೋಟೋ ಹಾಕಿ ಮದುವೆ ವಿಚಾರ ತಿಳಿಸಿದ್ದಾರೆ. ಕೊನೆಗೂ ಗೆದ್ದೆ ಅಂತ ಅವರು ಇನ್ಸ್ಟಾದಲ್ಲಿ ಬರೆದುಕೊಂಡು ಮದುವೆ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. 

2003ರಲ್ಲಿ 'ಖಡ್ಗಂ' ಚಿತ್ರದ ಮೂಲಕ ಸಿನಿಮಾಗೆ ಬಂದ ಸುಬ್ಬರಾಜು ಅವರು ಕಡಿಮೆ ಸಮಯದಲ್ಲಿ ಒಳ್ಳೆ ನಟ ಅಂತ ಹೆಸರು ಮಾಡಿದ್ರು. ಬಾಹುಬಲಿ 2 ಚಿತ್ರ ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿತು. ಇನ್ನು ಇನ್ಸ್ಟಾಗ್ರಾಮ್‌ನಲ್ಲಿ ಮದುವೆ ವಿಚಾರ ತಿಳಿಸಿದ ನಟನಿಗೆ ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಗೈದಿದ್ದಾರೆ. 

ವಧು ಶ್ರವಂತಿ ಕೆಂಪು ಬಣ್ಣದ ಝರಿ ರೇಷ್ಮೆ ಸೀರೆಯುಟ್ಟಿದ್ದರೆ, ನಟ ಸುಬ್ಬರಾಜು ರೇಷ್ಮೆ ಪಂಚೆ ಜುಬ್ಬಾ ಹಾಗೂ ಶಲ್ಯ ಧರಿಸಿದ್ದಾರೆ.  ಪುರಿ ಜಗನ್ನಾಥ್ ನಿರ್ದೇಶನದ 2003ರ ಸಿನಿಮಾ 'ಅಮ್ಮ ನಾನ ಒ ತಮಿಳ್ ಅಮ್ಮಾಯಿ' ಸಿನಿಮಾವೂ ಅವರಿಗೆ ಸಾಕಷ್ಟು ಜನಪ್ರಿಯತೆ ತಂದು ಕೊಟ್ಟಿತ್ತು. 

Latest Videos

click me!