ಜೇನುಹುಳ ಕಚ್ಚಿದಂತೆ ಊದಿದ ಮುಖ; ನಟಿಗೇನಾಯ್ತು?

First Published | May 20, 2024, 1:09 PM IST

ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಆಯೇಷಾ ಸಿಂಗ್ ಎಲ್ಲಿಯೂ ಕಾಣಿಸದಿರುವುದು ಅಭಿಮಾನಿಗಳನ್ನು ಕೊಂಚ ಚಿಂತೆಗೀಡು ಮಾಡಿತ್ತು. ಇದೀಗ, ನಟಿ ತನ್ನ ಅನುಪಸ್ಥಿತಿಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಘಮ್ ಹೈ ಕಿಸಿಕೇ ಪ್ಯಾರ್ ಮೇ ಧಾರಾವಾಹಿಯಲ್ಲಿ ನಟಿಸಿದ ಬಳಿಕ ಆಯೇಶಾ ಸಿಂಗ್ ಮನೆ ಮಾತಾಗಿದ್ದಾರೆ.  ಇದರಲ್ಲಿ ಸಾಯಿ ಚವಾನ್ ಎಂಬ ಧೈರ್ಯಶಾಲಿ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದಾರೆ ಆಯೇಷಾ. 

ಘುಮ್ ಹೈ ಕಿಸಿಕೆ ಪ್ಯಾರ್ ಮೇ ನಂತರ, ಆಯೇಶಾ ಯಾವುದೇ ದೂರದರ್ಶನ ಅಥವಾ ರಿಯಾಲಿಟಿ ಶೋಗಳ ಭಾಗವಾಗಿಲ್ಲ. ವಿಶಾಲ್ ಆದಿತ್ಯ ಸಿಂಗ್ ಅವರ ಟಿವಿ ಶೋ ಚಾಂದ್ ಜಲ್ನೆ ಲಗಾದಲ್ಲಿ ಅವರು ನಟಿಸುತ್ತಿದ್ದಾರೆ ಎಂಬ ವದಂತಿಗಳಿದ್ದವು, ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. 

Tap to resize

ನಟನೆಗೆ ಮರಳಲು ಅಭಿಮಾನಿಗಳು ಕಾಯುತ್ತಿರುವಾಗ, ನಟಿ ರಜೆ ತೆಗೆದುಕೊಂಡು ತಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಆನಂದಿಸುವಲ್ಲಿ ನಿರತರಾಗಿದ್ದರು. 

ಆದ್ರೆ ಇತ್ತೀಚಿಗೆ ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಈ ನಟಿ ಎಲ್ಲಿಯೂ ಕಾಣಿಸದಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಇದೀಗ, ನಟಿ ಅಂತಿಮವಾಗಿ ತನ್ನ ಅನುಪಸ್ಥಿತಿಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಊದಿಕೊಂಡ ಮುಖ
ಆಯೇಶಾ ಸಿಂಗ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಮೊದಲ ಕೆಲವು ಚಿತ್ರಗಳಲ್ಲಿ, ಅವರು ಸಂತೋಷದಿಂದ ನಗುತ್ತಿದ್ದಾರೆ; ಆದಾಗ್ಯೂ, ಕೊನೆಯ ಚಿತ್ರದಲ್ಲಿ, ತುಟಿ ಪ್ರದೇಶದ ಸುತ್ತ ಆಯೇಷಾ ಮುಖವು ಊದಿಕೊಂಡಿದೆ. 

ಜಾಸ್ತಿ ನಗ್ಬೇಡ, ಕಡೆಗೆ ಅಳ್ತಿ ಅಂತ ಅಪ್ಪಅಮ್ಮ ಹೇಳ್ತಿದ್ದರು. ಹಾಗೇ ಆಯ್ತು. ಆರೋಗ್ಯ ಸಮಸ್ಯೆಯಿಂದ ಹೀಗಾಗಿದೆ, ಆದ್ರೆ ಹುಷಾರಾಗ್ತಾ ಇದೀನಿ ಎಂದಿದ್ದಾರೆ.

ಇದೇನು ಅಲರ್ಜಿಯೇ ಅಥವಾ ಆಕೆಯ ಮುಖಕ್ಕೆ ಗಾಯವಾಗಿದೆಯೇ? ಇದು ಗೊತ್ತಿಲ್ಲ. ಸಧ್ಯಕ್ಕೆ ಅಭಿಮಾನಿಗಳು ತಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ಅವರು ಬಯಸುತ್ತಲೇ ಶೀಘ್ರದಲ್ಲೇ ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಹಂಚಿಕೊಳ್ಳುವುದಾಗಿ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ.

ಮೇಲಿನ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿದ ತಕ್ಷಣ, ಅಭಿಮಾನಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು. ನಟನೆಗಾಗಿ, ಆಯೇಶಾ ಸಿಂಗ್ ವಕೀಲರಾಗಿ ವೃತ್ತಿಜೀವನವನ್ನು ತೊರೆದರು ಮತ್ತು ಮನರಂಜನಾ ಉದ್ಯಮಕ್ಕೆ ಕಾಲಿಟ್ಟರು. 

Latest Videos

click me!