ಎರಡನೇ ಮಗ ಅಕಾಯ್ ಹುಟ್ಟಿದ ಬಳಿಕ ಐಪಿಎಲ್ ಮ್ಯಾಚ್ ವೇಳೆ ಕಾಣಿಸಿಕೊಂಡ ಅನುಷ್ಕಾ ಶರ್ಮಾ ಮುಖದ ಹೊಳಪು ಎಲ್ಲರ ಗಮನ ಸೆಳೆಯುತ್ತಿದೆ. ಬಾಣಂತಿ ಹೊಳಪು ನಿಚ್ಚಳವಾಗಿದೆ ಎನ್ನುತ್ತಿದ್ದಾರೆ ಫ್ಯಾನ್ಸ್.
ಮೇ 2024ರಲ್ಲಿ ಕೊನೆಯ RCB ಪಂದ್ಯದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಅನುಷ್ಕಾ ಶರ್ಮಾ ಫೋಟೋಗಳು ವೈರಲ್ ಆಗಿವೆ. ಮಹಿಳಾ ಕ್ರಿಕೆಟಿಗರ ಜೊತೆ ನಟಿ ನೀಡಿದ ಪೋಸ್‌ಗಳಲ್ಲಿ ಆಕೆಯ ಹೊಳಪು ಎಲ್ಲರ ಗಮನ ಸೆಳೆದಿದೆ.
29
ಮೂರು ತಿಂಗಳ ಹಿಂದಷ್ಟೇ ಎರಡನೇ ಮಗುವಿಗೆ ಜನ್ಮ ನೀಡಿದ ಅನುಷ್ಕಾಳ ಫೋಟೋ ನೋಡಿದ ಬಳಿಕ ಬಾಣಂತಿ ಹೊಳಪೆಂಬುದು ನಿಜ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
39
ಬಾಲಿವುಡ್ ನಟಿ, ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ದಂಪತಿ ಜನವರಿ 11, 2021 ರಂದು ಮಗಳು ವಾಮಿಕಾಳನ್ನು ಸ್ವಾಗತಿಸಿದರು. ಮತ್ತು ಈಗ, ಫೆಬ್ರವರಿ 15, 2024ರಂದು ಮಗ ಅಕಾಯ್ ಜನನವನ್ನು ಘೋಷಿಸಿದರು.
49
ಮಕ್ಕಳ ಫೋಟೋಗಳನ್ನು ಸೋಷ್ಯಲ್ ಮೀಡಿಯಾದಿಂದ ದೂರವಿಡಲು ಬಯಸುವ ಈ ಸೆಲೆಬ್ರಿಟಿ ಜೋಡಿ, ಈ ನಿಟ್ಟಿನಲ್ಲಿ ತಮ್ಮ ಮನವಿಗೆ ಸ್ಪಂದಿಸಿದ ಪಾಪರಾಜಿಗಳಿಗೆ ಇತ್ತೀಚೆಗೆ ಉಡುಗೊರೆ ಕಳುಹಿಸಿ ಧನ್ಯವಾದ ಹೇಳಿದ್ದರು.
59
ಎರಡನೇ ಬಾರಿಗೆ ತಾಯ್ತನವನ್ನು ಸ್ವೀಕರಿಸಿದ ನಂತರ, ಅನುಷ್ಕಾ ಈಗಾಗಲೇ ಭಾರತಕ್ಕೆ ಮರಳಿದ್ದಾರೆ ಮತ್ತು ಅವರ ಐಪಿಎಲ್ ಪಂದ್ಯಗಳಲ್ಲಿ ತನ್ನ ಪತಿ ವಿರಾಟ್‌ಗೆ ಚಿಯರ್‌ಲೀಡರ್ ಆಗಿದ್ದಾರೆ.
69
ಮೇ 19, 2024ರಂದು RCB ಮತ್ತು CSK ನಡುವಿನ ಕೊನೆಯ ಪಂದ್ಯದ ನಂತರ, ಅನುಷ್ಕಾ ಶರ್ಮಾ ತನ್ನ ಮಹಿಳಾ ಕ್ರಿಕೆಟಿಗರಾದ ಸ್ಮೃತಿ ಮಂದಣ್ಣ, ಶ್ರೇಯಾಂಕಾ ಪಾಟೀಲ್ ಮುಂತಾದವರ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ.
79
ಕಪ್ಪು ವರ್ಣದ ತೋಳಿಲ್ಲದ ಗೌನ್‌ನಲ್ಲಿ ಸರಳವಾಗಿರುವ ಅನುಷ್ಕಾ ಮುಖ ಬೆಣ್ಣೆಯಂತೆ ಹೊಳೆಯುತ್ತಿದ್ದು, ಮುದ್ದಾಗಿ ಕಾಣಿಸುತ್ತಿದ್ದಾರೆ.
89
ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು, ನಟಿಯ ಹಳೆಯ ಫೋಟೋಗಳಿಗೂ ಈಗಿನವಕ್ಕೂ ಇರುವ ಹೊಳಪಿನ ವ್ಯತ್ಯಾಸವನ್ನು ಗಮನಿಸಿ ಕಾಮೆಂಟ್ ಮಾಡುತ್ತಿದ್ದಾರೆ.
99
ಗರ್ಭಾವಸ್ಥೆಯ ನಂತರ ಸಹಜವಾಗೇ ಕೊಂಚ ತೂಕ ಹೆಚ್ಚಿಸಿಕೊಂಡಿರುವ ಅನುಷ್ಕಾ ಹಿಂದೆಂದಿಗಿಂತಲೂ ಹೆಚ್ಚು ಕಾಂತಿಯುತವಾಗಿದ್ದಾರೆ ಎಂದು ಹೇಳುತ್ತಿದ್ದಾರೆ.