Bollywood Freindship: ಕುಲ್ಫಿಗಾಗಿ ದೆಹಲಿಯ ರಸ್ತೆಯಲ್ಲಿ ಸಾರಾ ಜಾನ್ವಿ ಜಗಳ!

Suvarna News   | Asianet News
Published : Dec 06, 2021, 08:16 PM IST

ಸೈಫ್ ಅಲಿ ಖಾನ್  (Saif Ali Khan) ಅವರ ಪುತ್ರಿ ಸಾರಾ ಅಲಿ ಖಾನ್ (Sara Ali Khan) ಈ ದಿನಗಳಲ್ಲಿ ದೆಹಲಿಯಲ್ಲಿದ್ದಾರೆ. ಸಾರಾ ತಮ್ಮ ಮುಂಬರುವ ಚಿತ್ರ 'ಅತ್ರಂಗಿ ರೇ' (Atrangi Re) ಪ್ರಚಾರಕ್ಕಾಗಿ ದೆಹಲಿ ತಲುಪಿದ್ದಾರೆ. ಈ ಸಮಯದಲ್ಲಿ, ಸಾರಾ ಅವರ ತಾಯಿ ಅಮೃತಾ ಸಿಂಗ್ (Amrita Singh) ಮತ್ತು ಫ್ರೆಂಡ್‌ ಜಾನ್ವಿ ಕಪೂರ್ (Janhvi Kapoor) ಸಹ ಅವರೊಂದಿಗೆ ಇದ್ದಾರೆ. ಸಾರಾ ಕೆಲವೊಮ್ಮೆ ಆಕೆ ದೆಹಲಿಯ ಬೀದಿಗಳಲ್ಲಿ ದೇಸಿ ಕುಲ್ಫಿ ತಿನ್ನುತ್ತಿದ್ದಾರೆ. ಕೆಲವೊಮ್ಮೆ ಅವರು ಆಟೋ ಸವಾರಿ ಮಾಡುವುದು ಕಂಡು ಬಂದಿದೆ. ಸಾರಾ ಮತ್ತು ಜಾನ್ವಿಯ ಕುಲ್ಫಿ ತಿನ್ನುತ್ತಿರುವ ಫೋಟೋ ವಿಡಿಯೋ ಸಖತ್‌ ವೈರಲ್‌ ಆಗಿದೆ.

PREV
17
Bollywood Freindship: ಕುಲ್ಫಿಗಾಗಿ ದೆಹಲಿಯ ರಸ್ತೆಯಲ್ಲಿ ಸಾರಾ ಜಾನ್ವಿ ಜಗಳ!

ದೆಹಲಿಯಲ್ಲಿನ ಹಲವು ಫೋಟೋಗಳನ್ನು ಸಾರಾ ಅಲಿ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಫೋಟೋವೊಂದರಲ್ಲಿ, ಅವರು ಇಂಡಿಯಾ ಗೇಟ್ ಬಳಿ ದೇಸಿ ಕುಲ್ಫಿ ತಿನ್ನುತ್ತಿದ್ದಾರೆ. ಈ ವೇಳೆ ಸಾರಾ ಜೊತೆ ಆಕೆಯ ಸ್ನೇಹಿತೆ ಜಾನ್ವಿ ಕಪೂರ್ ಕೂಡ ಇದ್ದರು. ಈ ಫೋಟೋದಲ್ಲಿ ಜಾನ್ವಿಯನ್ನು ಚುಡಾಯಿಸುತ್ತಾ ಸಾರಾ ಕುಲ್ಫಿ ತಿನ್ನುತ್ತಿದ್ದಾರೆ. ಅದೇ ಸಮಯದಲ್ಲಿ ಜಾನ್ವಿ ಕೋಪ ಮಾಡಿಕೊಂಡು ಮುಖ ತಿರುಗಿಸಿದ್ದಾರೆ.

27

ಸಾರಾ ಅಲಿ ಖಾನ್ ಅವರು ದೆಹಲಿಯ ಬೀದಿಗಳಲ್ಲಿ ಆಟೋ ರಿಕ್ಷಾದಲ್ಲಿ ತಿರುಗುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಸಾರಾ ಆಟೋ ರಿಕ್ಷಾದಿಂದ ತನ್ನ ಕೈಯನ್ನು ಹೊರ ಹಾಕಿ ದೆಹಲಿಯಲ್ಲಿ ಸಾಮಾನ್ಯ ಮನುಷ್ಯನಂತೆ ಎಷ್ಟು ಸಂತೋಷದಿಂದ ಬದುಕುತ್ತಿದ್ದೇನೆ ಎಂದು ಹೇಳಿದ್ದಾರೆ.

37

ಕುಲ್ಫಿ ತಿಂದ ನಂತರ ಸಾರಾ ಅಲಿ ಖಾನ್ ದೆಹಲಿಯ ಪಂಡರ ರಸ್ತೆಯಲ್ಲಿ ವಿವಿಧ ತಿಂಡಿಗಳನ್ನು ಸವಿದಿದ್ದಾರೆ. ಅವರು ತಮ್ಮ ಸ್ನೇಹಿತರೊಂದಿಗೆ ತೆಗೆದ ಫೋಟೋಗಳನ್ನು ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಳ್ಳುತ್ತಾ, 'ನನ್ನ ಚಕಚಕ್ ಕುಟುಂಬ. ಏಕೆಂದರೆ ಫುಡ್‌ ಇಸ್‌ ಬೆಸ್ಟ್‌ ಸೆಲೆಬ್ರೆಷನ್‌' ಎಂದು  ಸಾರಾ ಬರೆದಿದ್ದಾರೆ

47

ಶನಿವಾರ, ಸಾರಾ ಅಲಿ ಖಾನ್ ತಾಯಿ ಅಮೃತಾ ಸಿಂಗ್ ಅವರೊಂದಿಗೆ ದೆಹಲಿಯ ಬಾಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಾರಾ ಅಲಿ ಖಾನ್ ಪಿಂಕ್ ಮತ್ತು ವೈಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದರು. ಸಾರಾ ಮತ್ತು ಆಕೆಯ ತಾಯಿ ತಮ್ಮ ಮುಖವನ್ನು ಮಾಸ್ಕ್‌ನಿಂದ ಮುಚ್ಚಿಕೊಂಡಿದ್ದರು. ಗುರುದ್ವಾರದ ಎದುರಿನ ಸರೋವರದ ಬಳಿ ಇಬ್ಬರೂ ಫೋಟೋಗಳಿಗೆ ಪೋಸ್ ನೀಡಿದರು.

57

ಈ ಹಿಂದೆ ಸಾರಾ ಅಲಿ ಖಾನ್ ತನ್ನ ಸ್ನೇಹಿತೆ ಜಾನ್ವಿ ಕಪೂರ್ ಜೊತೆ ಕೇದಾರನಾಥ ಧಾಮ ತಲುಪಿದ್ದರು. ಸಾರಾ ಅಲಿ ಖಾನ್ ಅವರು ನವೆಂಬರ್ 1 ರಂದು ಸಾಮಾಜಿಕ ಮಾಧ್ಯಮದಲ್ಲಿ ಕೇದಾರನಾಥ ಧಾಮದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ, ಅವರು ಜಾನ್ವಿ ಕಪೂರ್ ಅವರೊಂದಿಗೆ ಕೇದಾರನಾಥ ಧಾಮ್ ಮತ್ತು ಉತ್ತರಾಖಂಡದ ಇತರ ದೇವಾಲಯಗಳಲ್ಲಿ ಸುತ್ತಾಡುತ್ತಿರುವುದು ಕಂಡುಬಂದಿದೆ.

67

ಸಾರಾ ಅವರ ಫೋಟೋಗಳನ್ನು ನೋಡಿದ ಮುಸ್ಲಿಂ ಮೂಲಭೂತವಾದಿಗಳು ಟ್ರೋಲ್ ಮಾಡಲು ಪ್ರಾರಂಭಿಸಿದರು. 'ನೀವು ಮುಸ್ಲಿಂ? ನಾಚಿಕೆಪಡಿ ಮತ್ತು ಅಲ್ಲಾಹನಿಗೆ ಭಯಪಡಿ ಎಂದು ಒಬ್ಬ ವ್ಯಕ್ತಿ ಹೇಳಿದರು. ಅದೇ ಸಮಯದಲ್ಲಿ, 'ಅಲ್ಲಾ ನಿಮಗೆ ಮಾರ್ಗದರ್ಶನ ನೀಡಲಿ. ಕಾಫಿರಾ ಎಂಬ ಮುಸ್ಲಿಂ, ಹೆಸರು ಬದಲಿಸಿ ಕೊಳ್ಳಿ' ಎಂದು ಇನ್ನೊಬ್ಬ ವ್ಯಕ್ತಿ ಕಾಮೆಂಟ್‌ ಮಾಡಿದ್ದರು.

77

ಕೆಲ ದಿನಗಳ ಹಿಂದೆ ಸಾರಾ ಅಲಿ ಖಾನ್ ರಾಜಸ್ಥಾನ ಪ್ರವಾಸಕ್ಕೆ ತೆರಳಿದ್ದರು. ಸಾರಾ ಇಲ್ಲಿನ ನೀಮುಚ್ ಮಾತಾ ದೇವಸ್ಥಾನ, ಎಕ್ಲಿಂಗ್ಜಿಗೆ ಭೇಟಿ ನೀಡಿದ್ದರು. ಇದರೊಂದಿಗೆ ಸಾರಾ ಬೋಹ್ರಾ ಗಣೇಶ್ ಜಿ, ಜಗದೀಶ್ ದೇವಸ್ಥಾನ
ಮತ್ತು ಮಹಾದೇವ ದೇವಸ್ಥಾನಕ್ಕೂ ಭೇಟಿ ನೀಡಿದ್ದರು. ದರ್ಶನದ ನಂತರ ದೇವಾಲಯದ ಮುಂಭಾಗದಲ್ಲಿ ಸಾರಾ ಇಲ್ಲಿ ಫೋಟೋ ತೆಗೆದುಕೊಂಡಿದ್ದರು.

Read more Photos on
click me!

Recommended Stories