Romantic Holdiay: ಮಲೈಕಾ-ಅರ್ಜುನ್‌ ಜೋಡಿ ಮಾಲ್ಡೀವ್ಸ್‌‌ನಲ್ಲಿ

Suvarna News   | Asianet News
Published : Dec 06, 2021, 08:12 PM IST

ಮಲೈಕಾ ಅರೋರಾ (Malaika Arora) ಬಾಯ್ ಫ್ರೆಂಡ್ ಅರ್ಜುನ್ ಕಪೂರ್ (Arjun Kapoor) ಜೊತೆ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದಾಗ್ಯೂ, ಕೆಲವು ಸಮಯದಿಂದ ದಂಪತಿಗಳ ನಡುವಿನ ಸಂಬಂಧವು ಉತ್ತಮವಾಗಿಲ್ಲ ಮತ್ತು ಅವರು ತಮ್ಮ ಬ್ರೇಕಪ್‌ ಘೋಷಿಸಬಹುದು ಎಂಬ ವದಂತಿಗಳಿವೆ. ಆದರೆ ಇತ್ತೀಚಿಗೆ ಇವರಿಬ್ಬರ ಫೋಟೋಗಳು ವೈರಲ್‌ ಆಗಿವೆ ಮತ್ತು ಎಲ್ಲಾ ವದಂತಿಗಳಿಗೆ ತೆರೆ ಎಳೆದಿದೆ. ಮಲೈಕಾ ಅರೋರಾ ಮತ್ತು ಅರ್ಜನ್ ಕಪೂರ್ ಈ ದಿನಗಳಲ್ಲಿ ಮಾಲ್ಡೀವ್ಸ್‌ನಲ್ಲಿ ತಮ್ಮ ಹಾಲಿಡೇ ಆನಂದಿಸುತ್ತಿದ್ದಾರೆ. ಈ ಕಪಲ್‌ ತಮ್ಮ  ಹಾಲಿಡೇಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ .

PREV
18
Romantic Holdiay: ಮಲೈಕಾ-ಅರ್ಜುನ್‌ ಜೋಡಿ ಮಾಲ್ಡೀವ್ಸ್‌‌ನಲ್ಲಿ

ಈ ಹಿಂದೆ ಈ ಜೋಡಿ ಶೇರ್‌ ಮಾಡಿದ ತಮ್ಮ  ಫೋಟೋಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ. ಅರ್ಜುನ್ ಕಪೂರ್ ಡಿಸೆಂಬರ್ 4 ರಂದು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಕೆಲವು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಸಮುದ್ರ ತೀರದಲ್ಲಿರುವ ರೆಸಾರ್ಟ್‌ನಲ್ಲಿ ಸೈಕ್ಲಿಂಗ್ ಮಾಡುತ್ತಿದ್ದಾರೆ. ಈ ಸಮಯದಲ್ಲಿ, ಅವರ ಲೇಡಿಲವ್ ಮಲೈಕಾ ಅರೋರಾ ಸಹ ಅವರೊಂದಿಗೆ ಸೈಕ್ಲಿಂಗ್ ಮಾಡುತ್ತಿದ್ದಾರೆ.

28

ಇದಲ್ಲದೆ, ಅರ್ಜುನ್ ತನ್ನ ಇನ್‌ಸ್ಟಾ ಸ್ಟೋರಿಯಲ್ಲಿ ಮತ್ತೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ವೈನ್, ಗ್ಲಾಸ್‌ಗಳು ಬೀಚ್‌ ಮತ್ತು ಮಲೈಕಾ ಅರೋರಾ ಅವರ ಪಾದಗಳು  ಕಂಡುಬರುತ್ತವೆ. ಈ ಫೋಟೋ ರಾತ್ರಿ ಸಮಯದ್ದಾಗಿದೆ.  ಇದಲ್ಲದೆ, ಮಲೈಕಾ ತನ್ನ ಇನ್‌ಸ್ಟಾ ಸ್ಟೋರಿಯಲ್ಲಿ ಕೆಲವು ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
 

38

ಇತ್ತೀಚೆಗೆ ಮಲೈಕಾ ಅರೋರಾ ಕ್ರಿಸ್‌ಮಸ್ ಮತ್ತು ಹೊಸ ವರ್ಷವನ್ನು ಗೆಳೆಯ ಅರ್ಜುನ್ ಕಪೂರ್ ಜೊತೆಗೆ ಆಚರಿಸಬೇಕಂತೆ. ಆದರೆ ಅರ್ಜುನ್ ಕಪೂರ್ ತಮ್ಮ ಚಲನಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದರಿಂದ ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಒಟ್ಟಿಗೆ ಆಚರಿಸಲು ಸಮಯವಿಲ್ವಂತೆ. ಇದು ಮಲೈಕಾ ಮತ್ತು ಅವರ ನಡುವಿನ ಬಿರುಕಿಗೆ ಕಾರಣವಾಯಿತು ಎಂದು ಕೇವಲ ವದಂತಿಗಳು ಬಂದಿದ್ದವು. 

48

ಮೂರು ವರ್ಷಗಳ ಹಿಂದೆ ಅರ್ಜುನ್ ಮತ್ತು ಮಲೈಕಾ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಆಗ ಇಬ್ಬರೂ ಪರಸ್ಪರ ಕೈ ಹಿಡಿದುಕೊಂಡು ಫೋಟೋ ಕೂಡ ಶೇರ್ ಮಾಡಿದ್ದಾರೆ. ಆ ದಿನ ಅರ್ಜುನ್ ಕಪೂರ್ ಹುಟ್ಟುಹಬ್ಬವೂ ಆಗಿತ್ತು. ಅಭಿಮಾನಿಗಳು ಇವರ ಮದುವೆ  ನೋಡಲು ಕಾತುರರಾಗಿದ್ದಾರೆ.


 

58

ಕರಣ್ ಜೋಹರ್ ಅವರ ಚಾಟ್ ಶೋ 'ಕಾಫಿ ವಿತ್ ಕರಣ್' ನಲ್ಲಿ ಮಲೈಕಾ ಅರೋರಾ ಅವರು ಅರ್ಜುನ್ ಕಪೂರ್ ಅವರನ್ನು ಇಷ್ಟಪಡುತ್ತಾರೆ ಎಂದು ಒಪ್ಪಿಕೊಂಡರು. ಅದೇ ಸಮಯದಲ್ಲಿ, ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಹೊಗಳುವುದನ್ನು ಸಹ ಕಾಣಬಹುದು. ಮಲೈಕಾ ಅರ್ಜುನ್ ಕಪೂರ್ ಗಿಂತ 12 ವರ್ಷ ದೊಡ್ಡವಳು. ಮಲೈಕಾಗೆ 48 ವರ್ಷವಾದರೆ, ಅರ್ಜುನ್ ಕಪೂರ್ ಗೆ ಕೇವಲ 36 ವರ್ಷ.

68

ಕೆಲವು ತಿಂಗಳ ಹಿಂದೆ, ಲಾಕ್‌ಡೌನ್ ಸಮಯದಲ್ಲಿ, ಅಭಿಮಾನಿಯೊಬ್ಬರು ಅರ್ಜುನ್ ಕಪೂರ್ ಅವರ ಮದುವೆಯ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ, ನಾನು ಮದುವೆಯಾದಾಗ ನಾನು ನಿಮಗೆ ಎಲ್ಲವನ್ನೂ ಹೇಳುತ್ತೇನೆ. ಸದ್ಯಕ್ಕೆ ಯಾವುದೇ ಯೋಜನೆಗಳಿಲ್ಲ ಎಂದು ಅರ್ಜುನ್ ಹೇಳಿದ್ದರು.

78

ಪ್ರತಿಯೊಬ್ಬರೂ ಮತ್ತೆ ಪ್ರೀತಿಯಲ್ಲಿ ಬೀಳಲು ಬಯಸುತ್ತಾರೆ, ಸಂಬಂಧವನ್ನು ಹೊಂದಲು ಬಯಸುತ್ತಾರೆ. ಯಾರೂ ಏಕಾಂಗಿಯಾಗಿರಲು ಮತ್ತು ಅವರ ಇಡೀ ಜೀವನವನ್ನು ಏಕಾಂಗಿ ಕಳೆಯಲು ಬಯಸುವುದಿಲ್ಲ. ನಾನು ಈ ಆಯ್ಕೆಯನ್ನು ಬುದ್ಧಿವಂತಿಕೆಯಿಂದ ಮಾಡಿದ್ದೇನೆ ಎಂದು ನನಗೆ ಖುಷಿಯಾಗಿದೆ ಎಂದು ಮಲೈಕಾ ಹೇಳಿದ್ದರು.
 

88

ಮದುವೆಯಾದ 19 ವರ್ಷಗಳ ನಂತರ, ಮಲೈಕಾ ಅರ್ಬಾಜ್‌ಗೆ ವಿಚ್ಛೇದನ ನೀಡಲು ನಿರ್ಧರಿಸಿದರು ಮತ್ತು ಅವರು ಮೇ 2017 ರಲ್ಲಿ ವಿಚ್ಛೇದನ ಪಡೆದರು. ಅರ್ಬಾಜ್‌ನ ಬೆಟ್ಟಿಂಗ್ ಚಟದಿಂದ ಮಲೈಕಾ ಬೇಸತ್ತಿದ್ದರು ಮತ್ತು ಅದಕ್ಕಾಗಿಯೇ ಅವರು ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು  ಎಂದು ಮಾಧ್ಯಮಗಳು ವರದಿ ಮಾಡಿವೆ.

Read more Photos on
click me!

Recommended Stories