ಅಜ್ಜಿಯ ಆಭರಣ, ದುಬಾರಿ ಲೆಹಂಗಾ; ಸಂಗೀತ, ಮೆಹಂದಿ ಸಂಭ್ರಮದಲ್ಲಿ ಆತಿಯಾ ಜೊತೆ ರಾಹುಲ್ ಮಸ್ತ್ ಡಾನ್ಸ್

Published : Jan 30, 2023, 01:29 PM IST

ಆತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಸಂಗೀತ ಮತ್ತು ಮೆಹಂದಿ ಸಮಾರಂಭದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

PREV
16
ಅಜ್ಜಿಯ ಆಭರಣ, ದುಬಾರಿ ಲೆಹಂಗಾ; ಸಂಗೀತ, ಮೆಹಂದಿ ಸಂಭ್ರಮದಲ್ಲಿ ಆತಿಯಾ ಜೊತೆ ರಾಹುಲ್ ಮಸ್ತ್ ಡಾನ್ಸ್

ಬಾಲಿವುಡ್ ನಟಿ ಆತಿಯಾ ಶೆಟ್ಟಿ ಮತ್ತು ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಜನವರಿ 23ರಂದು ಅದ್ದೂರಿಯಾಗಿ ವಿವಾಹವಾದರು. ಸುನಿಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಇಬ್ಬರೂ ಹಸೆಮಣೆ ಏರಿದರು. ಇಬ್ಬರೂ ಮದುವೆಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಮದುವೆ ಬಳಿಕ ಇಬ್ಬರೂ ಮೆಹಂದಿ, ಸಂಗೀತ ಸಂಮಾರಂಭಗಳ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.  

26

ಆತಿಯಾ ಮತ್ತು ಕೆಎಲ್ ರಾಹುಲ್ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಸಂಗೀತ ಸಮಾರಂಭದಲ್ಲಿ ಆತಿಯಾ ಧರಿಸಿದ್ದ ಲೆಂಹಂಗಾ ಆಕರ್ಷಕವಾಗಿದೆ.  ಸ್ವರೋವ್ಸ್ಕಿ ಸ್ಫಟಿಕಗಳಿಂದ ಮಾಡಲ್ಪಟ್ಟ ಚಿಕನ್‌ಕಾರಿ ಲೆಹಂಗಾ ಧರಿಸಿದ್ದರು. ಆಂಟಿಕ್ ಕಿವಿಯೋಲೆ ಮತ್ತು ಅಜ್ಜಿಯಿಂದ ಬಂದ ಪಾರಂಪರಿಕ ಆಭರಣಗಳನ್ನು ಧರಿಸಿದ್ದರು.

36

ಜನವರಿ 22ರಂದು ನಡೆದ ಮೆಹಂದಿ ಮತ್ತು ಸಂಗೀತ ಸಮಾರಂಭದ ಫೋಟೋಗಳನ್ನು ಕೆಎಲ್ ರಾಹುಲ್ ಮತ್ತು ಆತಿಯಾ ಶೆಟ್ಟಿ ಈಗ ಹಂಚಿಕೊಂಡಿದ್ದಾರೆ.  ಅಂಜುಲ್ ಭಂಡಾರಿ ಅವರು ಡಿಸೈನ್ ಮಾಡಿರುವ ಲೆಹಂಗಾ ಧರಿಸಿದ್ದರು. ಸಂಗೀತ ಸಮಾರಂಭಕ್ಕೆ ಧರಿಸಿದ್ದ ಲೆಹಂಗಾದಲ್ಲಿ ಕೈಯಿಂದ ಮಾಡಿದ ನೇಯ್ಗೆ, ಮುತ್ತು ಮತ್ತು 39 ಸಾವಿರಕ್ಕೂ ಹೆಚ್ಚು ಸ್ವರೋವ್ಸ್ಕಿ ಸ್ಫಟಿಕಗಳಲ್ಲಿ ವಿಷೇಶ ಲೆಹಂಗಾ ಡಿಸೈನ್ ಮಾಡಲಾಗಿತ್ತು. 

46

ಕೆಎಲ್ ರಾಹುಲ್ ಧರಿಸಿದ್ದ ಬಟ್ಟೆ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಮಿಂಟ್ ಗ್ರೀನ್ ಹೆವು ಎಂಬ್ರಾಯಿಡರಿ ಇರುವ  ಕುರ್ತಾ ಮತ್ತು ಪೈಜಾಮಾ  ಧರಿಸಿದ್ದರು. ಹೇರ್ ಸ್ಟೈಲ್ ಮತ್ತು ದಾಡಿ ಸ್ಟೈಲ್ ಕೂಡ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.  

56

ಮದುವೆಯಲ್ಲಿ ಆತಿಯಾ ಆಕರ್ಷಕ ಬಟ್ಟೆಗಳನ್ನು ಧರಿಸಿದ್ದರು. ವಿಶೇಷವಾಗಿ ಡಿಸೈನ್ ಮಾಡಿಸಿ ಧರಿಸಿದ್ದ ಫೋಟೋಗಳು ಈಗ ವೈರಲ್ ಆಗುತ್ತಿವೆ. ಮದುವೆ ದಿನವೂ ವಿಶೇಷವಾದ ಲೆಹಂಗಾ ಧರಿಸಿದ್ದರು. 1 ವರ್ಷ 51 ದಿನಗಳಿಂದ ತಾಯಿರಿಸಿದ್ದ ವಿಶೇಷ ಲೆಹಂಗಾ ಧರಿಸಿ ಕಂಗೊಳಿಸಿದ್ದರು. 

66

ಮದುವೆ ದಿನ ಆತಿಯಾ ಮತ್ತು ರಾಹುಲ್ ಇಬ್ಬರೂ ಪಿಂಕ್ ಬಣ್ಣದ ಗ್ರ್ಯಾಂಗ್ ಡ್ರೆಸ್ ನಲ್ಲಿ ಕಂಗೊಳಿಸಿದ್ದರು. ಆತಿಯಾ ಶೆಟ್ಟಿ ಪಿಂಕ್ ಚಿಕನ್‌ಕಾರಿ ಲೆಹಂಗಾ ಧರಿಸಿದ್ದರು. ಕೆಎಲ್ ರಾಹುಲ್ ಪಿಂಕ್ ಬಣ್ಣದ ಶೆರ್ವಾನಿಯಲ್ಲಿ ಕಂಗೊಳಿಸಿದ್ದರು. ಆತಿಯಾ ಧರಿಸಿದ್ದ ಲೆಹಂಗಾ ಮೇಲೆ  ಹ್ಯಾಂಡ್ ಮೇಡ್ ವರ್ಕ್ ಮಾಡಿಸಲಾಗಿತ್ತು. ಕೈಯಿಂದ ನೇಯ್ಗೆ ಮಾಡಲಾಗಿದ್ದು ಜರ್ದೋಜಿ ಮಚ್ಚು ಜಾಲಿ ವರ್ಕ್ ಅನ್ನು ರೇಶ್ಮೆಯಿಂದ ಮಾಡಿಸಲಾಗಿದೆ. ರೇಶ್ಮೆ ಆರ್ಗನ್ಜಾದಿಂದ ಮಾಡಿದ ದುಪಟ್ಟಾವನ್ನು ಧರಿಸಿದ್ದರು. ಈ ಸುಂದರ ಲೆಹಂಗಾವನ್ನು ಖ್ಯಾತ ಡಿಸೈನರ್ ಅನಾಮಿಕ ಖನ್ನಾ ಅವರು ಡಿಸೈನ್ ಮಾಡಿದ್ದರು.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories