ನಟಿ ರಶ್ಮಿಕಾ ಮಂದಣ್ಣ ಅವರು ಈ ಹಿಂದೆ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ ಆಗಿ ಬ್ರೇಕಪ್ ಮಾಡಿಕೊಂಡಿದ್ದರು. ಇದಕ್ಕೆ ಸ್ಪಷ್ಟವಾದ ಕಾರಣ ಏನು ಎಂದು ಈ ಜೋಡಿ ಎಂದೂ ಕೂಡ ಹೇಳಿಕೊಂಡಿಲ್ಲ. ಇವರ ವೈವಾಹಿಕ ಜೀವನ, ಡಿವೋರ್ಸ್ ಬಗ್ಗೆ ಜ್ಯೋತಿಷಿ ವೇಣು ಸ್ವಾಮಿ ಹೇಳಿದ ಮಾತು ವೈರಲ್ ಆಗ್ತಿದೆ.
ಈಗ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಮತ್ತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವಿಜಯ್ ದೇವರಕೊಂಡ ಮನೆಯಲ್ಲಿ ತುಂಬ ಖಾಸಗಿಯಾಗಿ ಈ ನಿಶ್ಚಿತಾರ್ಥ ನಡೆದಿದೆ ಎನ್ನಲಾಗಿದೆ. ಆದರೆ ಈ ಜೋಡಿ ಮಾತ್ರ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
25
ರಶ್ಮಿಕಾ ಮಂದಣ್ಣಗೋಸ್ಕರ ಪೂಜೆ
ನಟಿ ರಶ್ಮಿಕಾ ಮಂದಣ್ಣನಿಗೋಸ್ಕರ ನಾನು ಪೂಜೆ ಮಾಡಿದಾಗ ಕೆಲವರು ನನ್ನನ್ನು ಸಿಕ್ಕಾಪಟ್ಟೆ ಟೀಕಿಸಿದರು. ಆಕೆಗೆ ಸೌಂದರ್ಯವೇ ಇಲ್ಲ ಅಂತ ಕೆಲವರು ಟೀಕೆ ಮಾಡಿದರು. ಆದರೆ ಆಕೆಯನ್ನು ಹೀರೋಯಿನ್ ಎಂದು ಮೆರೆಸುತ್ತಿದ್ದಾರೆ. ಕೆಲವರು, "ನಿಮಗೆ ಹುಚ್ಚು ಹಿಡಿದಿದೆ, ಆಕೆಗೂ ಹುಚ್ಚು ಹಿಡಿದಿದೆ" ಎಂದು ಹೇಳಿದರು. ಆದರೆ ಇವತ್ತು ಅವಳು 'ನ್ಯಾಷನಲ್ ಕ್ರಷ್' ಎಂದು ಕರೆದಿದ್ದಾರೆ.
35
ಯಶಸ್ಸಿನ ಬಗ್ಗೆ ಹೇಳಿದ್ದೆ
“ಕನ್ನಡ ನಟ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಆಗಿತ್ತು. ಅವರಿಬ್ಬರ ಜಾತಕ ನೋಡಿ ಬ್ರೇಕಪ್ ಮಾಡಿಕೋ ಎಂದು ಹೇಳಿದ್ದೆ. ಆಮೇಲೆ ಅವಳು ಬ್ರೇಕಪ್ ಮಾಡಿಕೊಂಡಳು, ಅದಾದ ಬಳಿಕ ನ್ಯಾಶನಲ್ ಕ್ರಶ್ ಆದಳು. ಅವಳಿಗೆ ರಾಜಶ್ಯಾಮಲ ದೇವಿಯ ಪೂಜೆಯನ್ನು ಮಾಡಿದೆವು. ನಿಮಗೆ ಊಹಿಸೋಕೆ ಆಗದಷ್ಟರ ಮಟ್ಟಿಗೆ ಯಶಸ್ಸು ಪಡೆಯುತ್ತೀಯಾ, ಒಂದು ದಿನ ಎಂಪಿ ಕೂಡ ಆಗುತ್ತೀಯಾ ಎಂದು ಹೇಳಿದ್ದೆ” ಎಂದು ವೇಣು ಸ್ವಾಮಿ ಹೇಳಿದ್ದಾರೆ.
“ಇಂದು ರಶ್ಮಿಕಾ ಮಂದಣ್ಣ ಒಂದು ಸಿನಿಮಾಕ್ಕೆ 6-7 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾಳೆ. ಇದಕ್ಕೆ ಯೋಗವಿರಬೇಕು. ಯೋಗವಿಲ್ಲದಿದ್ದರೆ ಯಾವುದೇ ಪೂಜೆ ಫಲಿಸದು. ಯೋಗವಿಲ್ಲದವರಿಗೆ, "ನಿಮಗೆ ಯೋಗವಿಲ್ಲ, ಇದನ್ನು ಬಿಟ್ಟುಬಿಡಿ" ಎಂದು ಸ್ಪಷ್ಟವಾಗಿ ಹೇಳುತ್ತೇನೆ” ಎಂದು ವೇಣು ಸ್ವಾಮಿ ಹೇಳಿದ್ದಾರೆ.
55
ವಿಜಯ್ ಜೊತೆ ಡಿವೋರ್ಸ್
“ಗೀತಾ ಗೋವಿಂದಂ ಸಿನಿಮಾ ಟೈಮ್‌ನಿಂದಲೂ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿತ್ತು. ಅದು ಎಲ್ಲರಿಗೂ ಗೊತ್ತಿರೋದು. ಇವರಿಬ್ಬರು ಮದುವೆ ಆಗ್ತಾರೆ, ಆದರೆ ಡಿವೋರ್ಸ್ ಆಗುತ್ತದೆ. ಈ ವಿಷಯವನ್ನು ನಾನು ಅವಳಿಗೆ ಹೇಳಿದ್ದೆ, ಅದಿಕ್ಕೆ ಸಿಟ್ಟು ಮಾಡಿಕೊಂಡು ರಶ್ಮಿಕಾ ನನ್ನ ಜೊತೆ ಮಾತನಾಡಿಸೋದು ನಿಲ್ಲಿಸಿದ್ದಳು. ರಶ್ಮಿಕಾ ಮಂದಣ್ಣ ವೈಯಕ್ತಿಕ ಜೀವನ ಅಷ್ಟು ಚೆನ್ನಾಗಿಲ್ಲ” ಎಂದು ಹೇಳಿದ್ದಾರೆ.