ಶಿವಾಜಿ to ಹನುಮಾನ್; ರಿಷಬ್ ಶೆಟ್ಟಿ ಬಹುನಿರೀಕ್ಷಿತ ಮುಂದಿನ ಸಿನಿಮಾ ಲಿಸ್ಟ್ ಕುರಿತು ಅಭಿಮಾನಿಗಳು ಹುಡುಕಾಡುತ್ತಿದ್ದಾರೆ. ಕಾಂತಾರಾ ಚಾಪ್ಟರ್ 1 ಯಶಸ್ಸಿನಲ್ಲಿರುವ ರಿಷಬ್ ಶೆಟ್ಟಿ ಇದೀಗ ಪ್ರಮುಖ ಸಿನಿಮಾಗಳ ಶೂಟಿಂಗ್ ಆರಂಭಿಸುತ್ತಿದ್ದಾರೆ. ರಿಷಬ್ ಬಹುನೀರೀಕ್ಷಿತ ಸಿನಿಮಾ ಲಿಸ್ಟ್ ಇಲ್ಲಿದೆ.
ಕಳೆದ ಐದು ವರ್ಷಗಳಿಂದ ಕಾಂತಾರಾ ಕಾಡಿನಲ್ಲೇ ಬೀಡು ಬಿಟ್ಟ ರಿಷಬ್ ಶೆಟ್ಟಿ ಭರ್ಜರಿ ಯಶಸ್ಸು ಕಂಡಿದ್ದಾರೆ. ಕಾಂತಾರಾ ಸಿನಿಮಾ ಬಳಿಕ ಇದೀಗ ಬಿಡುಗಡೆಯಾಗಿರುವ ಕಾಂತಾರಾ ಚಾಪ್ಟರ್ 1 ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. 8 ದಿನದಲ್ಲಿ 400 ಕೋಟಿ ರೂಪಾಯಿಗೂ ಅಧಿಕ ಸಂಗ್ರಹ ಮಾಡಿದೆ. ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
26
ರಿಷಬ್ ಶೆಟ್ಟಿ ಸಿನಿಮಾ
ರಿಷಬ್ ಶೆಟ್ಟಿ ಸಿನಿಮಾ
ರಿಷಬ್ ಶೆಟ್ಟಿ ನಟ, ನಿರ್ದೇಶಕನಾಗಿ ಕಾಂತಾರಾ ಸಿನಿಮಾ ಪ್ರೇಕ್ಷಕರ ಮುಂದಿಟ್ಟು ಯಶಸ್ಸು ಗಳಿಸಿದ್ದಾರೆ. ಇದೀಗ ರಿಷಬ್ ಶೆಟ್ಟಿ ಮುಂಬರುವ ಸಿನಿಮಾ ಯಾವುದು ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. ರಿಷಬ್ ಶೆಟ್ಟಿ ಬಿಗ್ ಬಜೆಟ್ ಸಿನಿಮಾಗಳು ಸೆಟ್ಟೇರುತ್ತಿದೆ. ಈ ಪೈಕಿ ಎರಡು ಸಿನಿಮಾ ದೇಶದ ಕುತೂಹಲ ಕೆರಳಿಸಿದೆ.
36
ಜೈ ಹನುಮಾನ್
ಜೈ ಹನುಮಾನ್
ಪ್ರಶಾಂತ್ ವರ್ಮಾ ನಿರ್ದೇಶನದ ಜೈ ಹನುಮಾನ್ ಸಿನಿಮಾ ಡಿಸೆಂಬರ್ ತಿಂಗಳಿನಿಂದ ಶೂಟಿಂಗ್ ಆರಂಭಿಸಲಿದೆ. ಇದುವರೆಗೆ ರಿಷಬ್ ಶೆಟ್ಟಿ ಕಾಂತಾರಾ ಚಾಪ್ಟರ್ 1 ಸಿನಿಮಾ ಕಾರಾ ಶೂಟಿಂಗ್ ಆರಂಭಗೊಂಡಿರಲಿಲ್ಲ. ಈಗಾಗಲೇ ಸಿನಿಮಾ ಕೆಲಸಗಳು ನಡೆಯುತ್ತಿದೆ. ಇತ್ತ ರಿಷಬ್ ಶೆಟ್ಟಿ ಕೂಡ ಸಂಪೂರ್ಣ ತಯಾರಿಯೊಂದಿಗೆ ಶೂಟಿಂಗ್ ನಡೆಸಲಿದ್ದಾರೆ. ಚಿತ್ರದ ಪೋಸ್ಟರ್ ಭಾರಿ ಸದ್ದು ಮಾಡುತ್ತಿದೆ.
ಛತ್ರಪತಿ ಶಿವಾಜಿ ಮಹಾರಾಜರಾಗಿ ಕಾಣಿಸಿಕೊಳ್ಳಲಿರುವ ಭಾರಿ ಬಿಗ್ ಬಜೆಟ್ ಹಿಂದಿ ಸಿನಿಮಾ ದೇಶದ ಕುತೂಹಲ ಕೆರಳಿಸಿದೆ. ಚಿತ್ರದ ಪೋಸ್ಟರ್ ಈಗಾಗಲೇ ಹಲವರ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾ ಶೂಟಿಂಗ್ 2026ರಲ್ಲಿ ಆರಂಭಗೊಳ್ಳುತ್ತಿದೆ. ಚಿತ್ರದ ಸ್ಕ್ರಿಪ್ಟ್ ಸೇರಿದಂತೆ ಇತರ ಕೆಲಸಗಳು ಬಹುತೇಕ ಪೂರ್ಣಗೊಂಡಿದೆ.
56
ಬೆಲ್ ಬಾಟಂ 2
ಬೆಲ್ ಬಾಟಂ 2
ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡ ಬೆಲ್ ಬಾಟಂ ಸಿನಿಮಾದ ಎರಡನೇ ಭಾಗ ತೆರೆಗೆ ಬರುತ್ತಿದೆ. ಈ ಕುರಿತು ತಯಾರಿಗಳು ನಡೆಯುತ್ತಿದೆ. ಜಯತೀರ್ಥ ನಿರ್ದೇಶನದ ಈ ಸಿನಿಮಾ ಕನ್ನಡ ಸಿನಿಮಾ ರಂಗದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಇದೀಗ ಇದರ ಎರಡನೇ ಭಾಗ ಬರುತ್ತಿದೆ.
66
ರುದ್ರಪ್ರಯಾಗ ದಿಂದ ನಾಥುರಾಮ್
ರುದ್ರಪ್ರಯಾಗ ದಿಂದ ನಾಥುರಾಮ್
ರಿಷಬ್ ಶೆಟ್ಟಿ ನಿರ್ದೇಶದ ರುದ್ರಪ್ರಯಾಗ್ ಸಿನಿಮಾ ತಯಾರಿಗಳು ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದೇ ವೇಳೆ ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ನಾಥುರಾಮ್ ಸಿನಿಮಾ ಕೂಡ ಸೆಟ್ಟೇರುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇನ್ನು ಕಾಂತಾರಾ 2 ಸಿನಿಮಾ ಸೂಚನೆ ನೀಡಲಾಗಿದ್ದು, ಯಾವಾಗ, ಏನು ಅನ್ನೋ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲ.