Aryan Khan: ಮಗನಿಗಾಗಿ ಶಾರೂಖ್‌ ತೆಗೆದು ಕೊಂಡಿರುವ ದೊಡ್ಡ ನಿರ್ಧಾರ ಏನು ಗೊತ್ತಾ?

First Published | Nov 14, 2021, 4:29 PM IST

ಕ್ರೂಸ್ ಡ್ರಗ್ (Drug) ಪ್ರಕರಣದಲ್ಲಿ ಶಾರುಖ್ ಖಾನ್ (Sharh Rukh Khan) ಪುತ್ರ ಆರ್ಯನ್ ಖಾನ್ (Aryan Khan) ಸಿಕ್ಕಿಬಿದ್ದ  ಆಘಾತದಿಂದ ಹೊರಬರಲು ಇನ್ನೂ ಖಾನ್ ಕುಟುಂಬಕ್ಕೆ ಸಾಧ್ಯವಾಗಿಲ್ಲ. ಇಷ್ಟೇ ಅಲ್ಲ, ಆರ್ಯನ್ ತುಂಬಾ ಭಯಗೊಂಡಿದ್ದಾರೆ, ಅವರು ಮಾತನಾಡುವುದನ್ನು ಮತ್ತು ಸ್ನೇಹಿತರನ್ನು ಭೇಟಿಯಾಗುವುದನ್ನು ನಿಲ್ಲಿಸಿದ್ದಾರೆ. ಅವರು ಮನೆಯಲ್ಲಿ ಮೌನವಾಗಿ ಕುಳಿತುಕೊಳ್ಳುತ್ತಾರೆ. ಮಗನ ಸ್ಥಿತಿ ನೋಡಿ ಶಾರುಖ್ ಮತ್ತು ಗೌರಿ ಖಾನ್ ತುಂಬಾ ನೊಂದಿದ್ದಾರೆ. ಆದರೆ, ಮಗನ ವಿಚಾರದಲ್ಲಿ ಕೊಂಚ ಎಚ್ಚರಿಕೆಯನ್ನೂ ವಹಿಸಿದ್ದಾರೆ. ಇಂತಹ ಘಟನೆ ಮರುಕಳಿಸಬಾರದು ಎಂದು ಬಯಸುತ್ತಾರೆ. ಈ ನಡುವೆ ಶಾರುಖ್ ಮಗನ ಸಲುವಾಗಿ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಏನದು? ಕೆಳಗೆ ಓದಿ. 

ವರದಿಗಳ ಪ್ರಕಾರ ಶಾರುಖ್ ಖಾನ್ ತಮ್ಮ ಮುಂಬರುವ ಪ್ರಾಜೆಕ್ಟ್‌ಗಳಿಂದ ಬ್ರೇಕ್‌ ತೆಗೆದುಕೊಂಡಿದ್ದಾರೆ ಮತ್ತು ಅವರ ಮಗನೊಂದಿಗೆ ಸಮಯ ಕಳೆಯಲು ನಿರ್ಧರಿಸಿದ್ದು ನವೆಂಬರ್ ಕೊನೆಯ ವಾರದಲ್ಲಿ ಅವರು ತಮ್ಮ ಕೆಲಸಕ್ಕೆ ಮರಳುತ್ತಾರೆ.

ಈ ನಡುವೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಗ್ಗೆ ಚಿಂತಿತರಾಗಿದ್ದಾರೆ. ಈ ಹಿಂದೆ ಶಾರುಖ್ ಖಾನ್ ತಮ್ಮ ಪುತ್ರ ಆರ್ಯನ್ ಖಾನ್‌ಗಾಗಿ ಹೊಸ ಅಂಗರಕ್ಷಕನನ್ನು ಹುಡುಕುತ್ತಿದ್ದಾರೆ ಎಂಬ ಸುದ್ದಿ ಇತ್ತು ಆದರೆ ಈಗ ಅವರು  ದೊಡ್ಡ  ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ. 

Tap to resize

ಇತ್ತೀಚಿನ ವರದಿಗಳ ಪ್ರಕಾರ, ಶಾರುಖ್ ಖಾನ್ ತಮ್ಮ ಮಗನಿಗಾಗಿ ತಮ್ಮ ಬಾಡಿಗಾರ್ಡ್‌ ರವಿ ಸಿಂಗ್ ಅವರನ್ನು ನೀಡಿದ್ದಾರೆ ಮತ್ತು ಅವರಿಗಾಗಿ ಹೊಸ ಅಂಗರಕ್ಷಕನನ್ನು ಹುಡುಕುತ್ತಿದ್ದಾರೆ. ಆರ್ಯನ್ ಯಾವುದೇ ಹೊಸ ಅಂಗರಕ್ಷಕನೊಂದಿಗೆ  ಕಂಫರ್ಟಬಲ್‌ ಅಗಿಲ್ಲ. ಆದ್ದರಿಂದ ಅವರು ಈ ನಿರ್ಧಾರವನ್ನು ತೆಗೆದುಕೊಂಡರು

ಅಕ್ಟೋಬರ್ 2 ರಂದು ಡ್ರಗ್ಸ್‌ಗಾಗಿ ಆರ್ಯನ್ ಅವರನ್ನು ಎನ್‌ಸಿಬಿ ಕಸ್ಟಡಿಗೆ ತೆಗೆದುಕೊಂಡಿತ್ತು ಮತ್ತು ಅಕ್ಟೋಬರ್ 8 ರಂದು ಅವರನ್ನು ಆರ್ಥರ್ ರೋಟ್‌ ಜೈಲಿಗೆ ಕಳುಹಿಸಲಾಯಿತು. ಮಗನನ್ನು ಜೈಲಿನಿಂದ ಹೊರತರಲು  ಶಾರುಖ್ ಹಲವು ಪ್ರಯತ್ನಗಳನ್ನು ಮಾಡಿ ಕೊನೆಗೂ ಜಾಮೀನು ಪಡೆದರು.

ಇದೀಗ ಆರ್ಯನ್ ಜೈಲಿನಿಂದ ಹೊರಬಂದ ನಂತರ ಶಾರುಖ್  ಖಾನ್ ಮತ್ತು ಗೌರಿ ತಮ್ಮ ಪುತ್ರ ಆರ್ಯನ್ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಹಲವು ವರದಿಗಳಲ್ಲಿ ಹೇಳಲಾಗುತ್ತಿದೆ

ಶಾರುಖ್‌ ಖಾನ್‌ ಹಾಗೂ ಗೌರಿ ಖಾನ್‌ ಮಗ ಆರ್ಯನ್‌ ಅವರಿಗೆ ಸಂಬಂಧಿಸಿದ ಎಲ್ಲಾ ಮಾಧ್ಯಮ ಪ್ರಸಾರದಿಂದ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಂಡರು ಮತ್ತು ಮಾಧ್ಯಮಗಳಲ್ಲಿ ಆರ್ಯನ್ ಅವರ ಬಗ್ಗೆ ಹೇಳಿರುವ ಅಥವಾ ಬರೆದ ವಿಷಯಗಳ ಬಗ್ಗೆ  ಅವರು ತಲೆಕೆಡಿಸಿಕೊಳ್ಳಲು ಬಯಸುವುದಿಲ್ಲ ಎಂಬ ವಿಷಯವನ್ನು ಖಾನ್ ಅವರ ಅಪ್ತ ಮೂಲವು ತಿಳಿಸಿದೆ ಏಂದು ವರದಿಗಳು ಹೇಳಲಾಗಿದೆ.

ಆರ್ಯನ್ ಖಾನ್  ವರ ಸ್ನೇಹಿತರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ಶಾರುಖ್ ಮತ್ತು ಗೌರಿ ತಮ್ಮ ಸ್ನೇಹಿತರನ್ನು ಸಾಮಾಜಿಕ ಮಾಧ್ಯಮದಲ್ಲಿ ಅಥವಾ ಫೋನ್ ಮೂಲಕ ಸಂಪರ್ಕಿಸಿದವರನ್ನು ನಿಕಟವಾಗಿ ಗಮನಿಸುತ್ತಾರೆ. ತಮಗೆ ಸಣ್ಣದೊಂದು ತೊಂದರೆಯನ್ನೂ ಉಂಟು ಮಾಡುವ ಜನರೊಂದಿಗೆ ಆರ್ಯನ್ ಇರುವುದನ್ನು ಅವರು ಬಯಸುತ್ತಿಲ್ಲ.

ಶಾರುಖ್ ಮತ್ತು ಗೌರಿ ಅವರು ಆರ್ಯನ್ ಅನ್ನು ದೀರ್ಘಕಾಲದವರೆಗೆ ಸಾರ್ವಜನಿಕ ಪ್ರದರ್ಶನದಿಂದ ದೂರವಿರಿಸಲು ನಿರ್ಧರಿಸಿದ್ದಾರೆ. ಅಂದರೆ ಆರ್ಯನ್ ಇನ್ನು ಬಹಳ ದಿನ ಮನೆಯಲ್ಲಿ ಇರುತ್ತಾರೆ. ಆರ್ಯನ್ ಲಂಡನ್‌ನ ಸೆವೆನ್ ಓಕ್ಸ್ ಶಾಲೆಯಿಂದ 12ನೇ ತರಗತಿಯಲ್ಲಿ ತೇರ್ಗಡೆಯಾಗಿದ್ದಾರೆ.

ಮೊದಲು ಅವರು ಮುಂಬೈನ ಧೀರೂಭಾಯಿ ಅಂಬಾನಿ ಶಾಲೆಯಲ್ಲಿ ಓದುತ್ತಿದ್ದರು. ಅವರು 2020 ರಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್, ಸಿನಿಮಾಟಿಕ್ ಆರ್ಟ್ಸ್, ಫಿಲ್ಮ್ ಮತ್ತು ಟೆಲಿವಿಷನ್ ಪ್ರೊಡಕ್ಷನ್, ಸ್ಕೂಲ್ ಆಫ್ ಸಿನಿಮಾಟಿಕ್ ಆರ್ಟ್ಸ್ ಪದವಿಯನ್ನು ಪಡೆದಿದ್ದಾರೆ.

Latest Videos

click me!