ಮಗ ಮನೆಗೆ ಬರೋವರೆಗೂ ಸ್ವೀಟ್ಸ್ ಮಾಡಬಾರದು: ಗೌರಿ ಖಾನ್‌ ಅದೇಶ!

First Published | Oct 22, 2021, 5:59 PM IST

ಅಕ್ಟೋಬರ್ 2 ರಂದು ಕ್ರೂಸ್ ಡ್ರಗ್ಸ್ ಪಾರ್ಟಿ (Drug Party) ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಶಾರುಖ್ ಖಾನ್ (Shah Rukh Khan) ಮತ್ತು ಗೌರಿ ಖಾನ್‌ (Gauri Khan ) ಅವರ ಪುತ್ರ ಆರ್ಯನ್ ಖಾನ್ (Aryan Khan) ಇನ್ನೂ ಜೈಲಿನಲ್ಲಿದ್ದಾನೆ. ಮತ್ತೊಮ್ಮೆ ಆರ್ಯನ್ ಜಾಮೀನು ಅರ್ಜಿಯನ್ನು ಕೋರ್ಟ್ ಬುಧವಾರ ತಿರಸ್ಕರಿಸಿದೆ. ಈಗ ಆರ್ಯನ್ ವಕೀಲರು ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗುತ್ತಾರೆ ಮತ್ತು ಅಕ್ಟೋಬರ್ 26 ರಂದು ಜಾಮೀನು ಅರ್ಜಿಯ ವಿಚಾರಣೆ ಬರಲಿದೆ. ಈ ನಡುವೆ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ತನ್ನ ಅಡುಗೆ ಸಿಬ್ಬಂದಿಗೆ ಮಗ ಆರ್ಯನ್ ಖಾನ್ ಮನೆಗೆ ಮರಳುವ ವರೆಗೂ ಮನ್ನತ್‌ನಲ್ಲಿ ಯಾವುದೇ ಸಿಹಿತಿಂಡಿಗಳನ್ನು ತಯಾರಿಸದಂತೆ ಆದೇಶಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರ ಆರ್ಯನ್ ಖಾನ್ ಮುಂಬೈನ ಕ್ರೂಸ್ ಡ್ರಗ್ಸ್ ಪಾರ್ಟಿ ಕೇಸ್‌ನ ಅಡಿಯಲ್ಲಿ ಸಿಕ್ಕಿ ಬಿದ್ದು, ಜೈಲಿನಲ್ಲಿದ್ದಾನೆ. ಕಳೆದ ಎರಡು ವಾರಗಳಲ್ಲಿ, ಶಾರುಖ್ ಖಾನ್ ಮತ್ತು ಅವರ ಕುಟುಂಬ (Family) ಜೀವನವು ತಲೆಕೆಳಗಾಗಿದೆ. ಆರ್ಯನ್ ಖಾನ್ ಜಾಮೀನು ಪಡೆಯುವವರೆಗೂ ಆರ್ಥರ್ ರೋಡ್ ಸೆಂಟ್ರಲ್ ಜೈಲ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ.

ಮುಂಬೈ ವಿಶೇಷ ಎನ್‌ಡಿಪಿಎಸ್ (NDPS) ನ್ಯಾಯಾಲಯವು ಆತನ ಮತ್ತು ಏಳು ಇತರೆ ಆರೋಪಿಗಳ ಜಾಮೀನು  ಅರ್ಜಿಗಳನ್ನು (Bail Please) ಅಕ್ಟೋಬರ್ 20 ರಂದು ಮತ್ತೆ  ನಿರಾಕರಿಸಿತು.ಈಗ ಆರ್ಯನ್ ವಕೀಲರು ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಲಿದ್ದಾರೆ ಮತ್ತು  ಅಕ್ಟೋಬರ್ 26 ರಂದು ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ (Mumbai High court) ನೆಡೆಯಲಿದೆ.

Tap to resize

ಮಗನ ಬಂಧನದ ನಂತರ ಶಾರುಖ್ ಅನೇಕ ಶೂಟಿಂಗ್‌ಗಳನ್ನು (Shooting) ತಪ್ಪಿಸಿಕೊಂಡಿದ್ದಾರೆ. ಈ ಪ್ರಕರಣದಿಂದ ದೀಪಿಕಾ ಪಡುಕೋಣೆ (Deepika Padukone) ಮತ್ತು ನಯನತಾರಾ (Nayanatara) ಜೊತೆಯ ಅವರ ದೊಡ್ಡ ಬಜೆಟ್ ಸಿನಿಮಾ (Big Budge Movie) ಅಟ್ಲೀ  ಮೇಲೆ ಪರಿಣಾಮ ಬೀರಿದೆ. ಖಾನ್ ದೀಪಿಕಾ ಜೊತೆ ಮಲ್ಲೋರ್ಕಾ, ಕ್ಯಾಡಿಜ್ ಮತ್ತು ವೆಜರ್ ಡಿ ಲಾ ಫ್ರೊಂಟೆರಾ ಮುಂತಾದ ಸುಂದರ ಸ್ಥಳಗಳಲ್ಲಿ ಎರಡು ಹಾಡುಗಳನ್ನು ಚಿತ್ರೀಕರಿಸಲು ಸ್ಪೇನ್ (Spain)ಗೆ ಹೋಗಬೇಕಿತ್ತು, ಆದರೆ ಅದು ಸಾಧ್ಯವಾಗಿಲ್ಲ. 

ಆರ್ಯನ್ ಖಾನ್ ಪ್ರಕರಣವು ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ (Katrina Kaif) ಅವರ ಟೈಗರ್ 3  ಸಿನಿಮಾದ ಮೇಲೂ ಪರಿಣಾಮ ಬೀರಿದೆ. ಇಬ್ಬರೂ ಖಾನ್ ಗಳು ಪರಸ್ಪರರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳನ್ನು ಮಾಡಬೇಕಿತ್ತು.
ತಾನು ಆರ್ಯನ್ ಖಾನ್ ಪ್ರಕರಣ ಮತ್ತು ಆತನ ಯೋಗಕ್ಷೇಮವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಎಂದು ಸಂದರ್ಶನವೊಂದರಲ್ಲಿ (interview) ಸಲ್ಮಾನ್ ಖಾನ್ ಹೇಳಿದರು ಮತ್ತು  ಅವರು ನಿರಂತರವಾಗಿ ಶಾರುಖ್ ಜೊತೆಯಲ್ಲಿದ್ದಾರೆ.
  

ದೀಪಾವಳಿ ಹತ್ತಿರ ಬರುತಿದೆ. ಆದರೆ ಶಾರುಖ್ ಖಾನ್ ಮತ್ತು ಅವರ ಕುಟುಂಬವು ಹಬ್ಬವನ್ನು ಆಚರಿಸುವ ಮನಸ್ಥಿತಿಯಲ್ಲಿಲ್ಲ. ಆರ್ಯನ್ ಮನೆಗೆ ಮರಳುವವರೆಗೂ ಯಾವುದೇ ಸಿಹಿ ಪದಾರ್ಥಗಳನ್ನು ಮಾಡದಂತೆ ಗೌರಿ ತನ್ನ ಅಡುಗೆ ಸಿಬ್ಬಂದಿಗೆ ಮನ್ನತ್‌ನಲ್ಲಿ ಸೂಚಿಸಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ

ಹಾಗೇ ಗೌರಿ ಅವರಿಗೆ ಖೀರ್ ಎಂದರ ತುಂಬಾ ಪ್ರೀತಿ. ಆದ್ದರಿಂದ ಅವರನ್ನು ಸಂತೋಷ ಪಡಿಸಲು ಸಿಬ್ಬಂದಿ ಅವರಿಗಾಗಿ ಪಾ/ಸ ಮಾಡುತ್ತಿದ್ದರು. ಈ ವಿಷಯ ತಿಳಿದಾಗ, ಶ್ರೀಮತಿ ಖಾನ್ ತಕ್ಷಣವೇ ಅವರನ್ನು ತಡೆದರು ಮತ್ತು ಆರ್ಯನ್‌ಗೆ ಜಾಮೀನು ಸಿಗುವವರೆಗೂ ಯಾವುದೇ ಸಿಹಿ ತಿನಿಸನ್ನು ಮಾಡದಂತೆ ಅದೇಶ ನೀಡಿದ್ದಾರಂತೆ.

ಶಾರುಖ್ ಕೂಡ ಉತ್ತಮ ಸ್ಥಿತಿಯಲ್ಲಿಲ್ಲ ಮತ್ತು ಅವರು ಸಮಯಕ್ಕೆ ಸರಿಯಾಗಿ ಊಟ ಮಾಡುವುದನ್ನು ಮತ್ತು ಕಡಿಮೆ ನಿದ್ದೆ ಮಾಡುವುದನ್ನು ನಿಲ್ಲಿಸಿದ್ದಾರೆ. ಖಾನ್ ತನ್ನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ದೂರವಾಣಿಯಲ್ಲಿ (Phone Call) ಸಂಪರ್ಕದಲ್ಲಿದ್ದಾರೆ . ಆದರೆ ನಟ ಮನ್ನತ್‌ಗೆ ಭೇಟಿ ನೀಡದಂತೆ ಸ್ನೇಹಿತರನ್ನು ವಿನಂತಿಸಿಕೊಂಡಿದ್ದಾರೆ ಎನ್ನಲಾಗಿದೆ. 

Latest Videos

click me!