57ನೇ ವಯಸ್ಸಿಗೆ ತಂದೆ ಆಗ್ತಿದ್ದಾರಾ Arbaaz Khan? 2ನೇ ಪತ್ನಿ ನಡುವೆ 22 ವರ್ಷ Age Gap!

Published : May 26, 2025, 05:20 PM ISTUpdated : May 27, 2025, 03:05 PM IST

ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್​ ಖಾನ್ ಅವರು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದರು. ಪತ್ನಿ ಶುರಾ ಖಾನ್‌ ಜೊತೆಗೆ ಅವರು ಆಸ್ಪತ್ರೆಗೆ ಬಂದಿದ್ದರು.​ ಆ ವೇಳೆ ಶೂರಾ ಖಾನ್‌ ಬೇಬಿ ಬಂಪ್‌ ನೋಡಿ ಅನೇಕರು ಪ್ರಗ್ನೆಂಟ್‌ ಇರಬಹುದಾ ಎಂದು ಪ್ರಶ್ನಿಸುತ್ತಿದ್ದಾರೆ.  

PREV
19

ಶುರಾ ಖಾನ್ ಹಾಗೂ ಅರ್ಬಾಜ್‌ ಖಾನ್‌ ಅವರು ಆಸ್ಪತ್ರೆಗೆ ಭೇಟಿ ಕೊಟ್ಟು, ಇದ್ದಕ್ಕಿದ್ದಂತೆ ಹೊರಟರು, ಕ್ಯಾಮರಾಗೂ ಪೋಸ್‌ ಕೊಟ್ಟಿರಲಿಲ್ಲ. ಇನ್ನು ಶುರಾ ಖಾನ್‌ ಅವರು ನಡೆಯುವಾಗ ಅರ್ಬಾಜ್‌ ಖಾನ್‌ ಸಾಥ್‌ ಕೊಟ್ಟರು. 

29

ಶುರಾ ಖಾನ್‌ ಅವ್ರನ್ನು ಅಷ್ಟು ಕೇರ್‌ ಮಾಡೋದು ನೋಡಿ ಅರ್ಬಾಜ್‌ ಖಾನ್‌ ಅವರು ಮಗುವಿನ ನಿರೀಕ್ಷೆಯಲ್ಲಿದ್ದಾರಾ ಎಂಬ ಪ್ರಶ್ನೆ ಬಂದಿದೆ.

39

ಪ್ರಗ್ನೆನ್ಸಿ ಬಗ್ಗೆ ಅರ್ಬಾಜ್‌ ಖಾನ್‌, ಶುರಾ ಖಾನ್‌ ಅವರು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಅಷ್ಟೇ ಅಲ್ಲದೆ ಕಳೆದ ವರ್ಷ ಗುಡ್‌ ನ್ಯೂಸ್‌ ಎಂದು ಪ್ರಶ್ನಿಸಿದಾಗ ಸಿಟ್ಟಾಗಿದ್ದರು.

49

ಅರ್ಬಾಜ್‌ ಖಾನ್‌ ಅವರು ಮೊದಲು ಮಲೈಕಾ ಅರೋರ ಅವರನ್ನು ಮದುವೆಯಾಗಿದ್ದರು. 20 ವರ್ಷಗಳ ಕಾಲ ಜೀವನ ಮಾಡಿರುವ ಈ ಜೋಡಿ ಡಿವೋರ್ಸ್‌ ಪಡೆದಿತ್ತು.

59

ಇವರಿಬ್ಬರಿಗೂ ಅರ್ಹಾನ್‌ ಖಾನ್‌ ಎಂಬ ಮಗನಿದ್ದಾನೆ. ಅರ್ಹಾನ್‌ ಅವರಿಗೆ ಈಗ 22 ವರ್ಷ ವಯಸ್ಸು. ಅಂದಹಾಗೆ ಒಂದು ವರ್ಷ ಡೇಟಿಂಗ್​ ಬಳಿಕ ಅರ್ಬಾಜ್​ ಮತ್ತು ಶೂರಾ 2023ರ ಡಿಸೆಂಬರ್​ 24ರಂದು ಮದುವೆಯಾಗಿದ್ದರು. ಅರ್ಪಿತಾ ಖಾನ್​ ಮನೆಯಲ್ಲಿ ಮದುವೆ ನೆರವೇರಿತ್ತು.

69

ಡಿವೋರ್ಸ್‌ ಬಳಿಕ ಅರ್ಬಾಜ್‌ ಖಾನ್‌ ಅವರು 2018-2023ರವರೆಗೆ ಜಾರ್ಜಿಯಾ ಆಂಡ್ರಿಯಾನಿ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು. ಇದನ್ನು ಅವರು ಅಧಿಕೃತಪಡಿಸಿದ್ದರು.

79

ಅರ್ಬಾಜ್‌ ಖಾನ್‌ ಅವರು ಜಾರ್ಜಿಯಾ ಜೊತೆ ಬ್ರೇಕಪ್‌ ಮಾಡಿಕೊಂಡು, ಆಮೇಲೆ ಶುರಾ ಖಾನ್‌ ಜೊತೆ ಪ್ರೀತಿಯಲ್ಲಿ ಬಿದ್ದರು.

89

ಅರ್ಬಾಜ್‌ ಖಾನ್‌ ನಿರ್ಮಾಣದ ಸಿನಿಮಾದಲ್ಲಿ ರವೀನಾ ಟಂಡನ್‌ ಅವರ ಮೇಕಪ್‌ ಆರ್ಟಿಸ್ಟ್‌ ಆಗಿ ಶುರಾ ಖಾನ್‌ ಕೆಲಸ ಮಾಡಿದ್ದರು. ಆ ಟೈಮ್‌ನಲ್ಲಿ ಇವರಿಬ್ಬರಿಗೂ ಪರಿಚಯ ಆಗಿ ಪ್ರೀತಿಯಲ್ಲಿ ಬಿದ್ದರು.

99

ಅರ್ಬಾಜ್‌ ಖಾನ್‌ ಅವರು ತಂಗಿ ಅರ್ಪಿತಾ ಖಾನ್‌ ಮನೆಯಲ್ಲಿ ಎರಡನೇ ಬಾರಿಗೆ ಮದುವೆಯಾಗಿದ್ದರು. ತುಂಬ ಖಾಸಗಿಯಾಗಿ ಈ ಮದುವೆ ನಡೆದಿತ್ತು.

Read more Photos on
click me!

Recommended Stories