ವಿಜಯ್ ಟಿವಿ ಸೂಪರ್ ಸಿಂಗರ್ ಕಾರ್ಯಕ್ರಮಕ್ಕೆ ಅಭಿಮಾನಿ ಬಳಗವೇ ಇದೆ. ಈ ಕಾರ್ಯಕ್ರಮ ಜೂನಿಯರ್, ಸೀನಿಯರ್ ಅಂತ ಪ್ರತ್ಯೇಕವಾಗಿ ನಡೆಯುತ್ತಿದೆ. ಈ ವರ್ಷ ಸೂಪರ್ ಸಿಂಗರ್ ಜೂನಿಯರ್ ಸೀಸನ್ 10 ಜೋರಾಗಿ ನಡೆಯುತ್ತಿತ್ತು. ಫೈನಲ್‌ನಲ್ಲಿ ಐದು ಸ್ಪರ್ಧಿಗಳು ಇದ್ದರು. ಐವರು ಹುಡುಗಿಯರೇ.
24
ಸೂಪರ್ ಸಿಂಗರ್ ಫೈನಲ್‌ಗೆ ಕಮಲ್ ಹಾಸನ್ ಮತ್ತು ಎ.ಆರ್.ರಹಮಾನ್ ವಿಶೇಷ ಅತಿಥಿಗಳಾಗಿ ಬಂದಿದ್ದರು. ಕಮಲ್ ಹಾಸನ್ ತಮ್ಮದೇ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದರು, ಅಲ್ಲದೇ ವೈರಲ್ ಸ್ಟಾರ್ ಶ್ರೀವರ್ಷಿಣಿ ಜೊತೆ ಹಾಡಿದರು.
34
ಫೈನಲ್‌ನಲ್ಲಿ ನಸ್ರೀನ್ ಮತ್ತು ಗಾಯತ್ರಿ ನಡುವೆ ಪೈಪೋಟಿ ಇತ್ತು. ಗಾಯತ್ರಿ ಗೆದ್ದರು, 60 ಲಕ್ಷ ಮೌಲ್ಯದ ಮನೆ ಸಿಕ್ತು. ನಸ್ರೀನ್‌ಗೆ ಎರಡನೇ ಸ್ಥಾನ ಮತ್ತು 10 ಲಕ್ಷ ರೂಪಾಯಿ ಸಿಕ್ತು. ಸಾರಾ ಮತ್ತು ಆದ್ಯಾ ಮೂರನೇ ಸ್ಥಾನ ಪಡೆದರು.
ಗಾಯತ್ರಿ ಗೆದ್ದಾಗ, ನಸ್ರೀನ್ ಅತ್ತರು. ಎ.ಆರ್.ರಹಮಾನ್ ಅವರನ್ನು ಸಮಾಧಾನಪಡಿಸಿ, ತಮ್ಮ ಸಂಗೀತ ಶಾಲೆಯಲ್ಲಿ ಓದಲು ಅವಕಾಶ ಕೊಟ್ಟರು. ನಸ್ರೀನ್ ಒಪ್ಪಿಕೊಂಡರು. ಇದೀಗ ಎ.ಆರ್.ರಹಮಾನ್‌ಗೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.