ಆರ್‌ಆರ್‌ಆರ್ ಚಿತ್ರದ ನಟ ರಾಮ್ ಚರಣ್ 38ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಹೈದಾರಾಬ್‌ನಲ್ಲಿ ಸ್ನೇಹಿತರು ಮತ್ತು ಕುಟುಂಬಸ್ಥರ ಜೊತೆ ಆಚರಿಸಿಕೊಂಡಿದ್ದಾರೆ.
ಆರ್‌ಆರ್‌ಆರ್ ಸಿನಿಮಾ ಮೂರ್ನಾಲ್ಕು ಪ್ರತಿಷ್ಠಿತ ಅವಾರ್ಡ್‌ಗಳನ್ನು ಪಡೆದ ಕಾರಣ ಶುಭಕೋರಿದ ಪ್ರತಿಯೊಬ್ಬರಿಗೂ ಹುಟ್ಟುಹಬ್ಬದ ದಿನವೇ ಧನ್ಯವಾದಗಳನ್ನು ತಿಳಿಸಿದ್ದಾರೆ.
ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಡಿಸೈನರ್ ಔಟ್‌ಫಿಟ್‌ನಲ್ಲಿ ರಾಮ್ ಚರಣ್ ಕಾಣಿಸಿಕೊಂಡಿದ್ದಾರೆ....ನೀಲಿ ಬಣ್ಣದ ಬಾಡಿಫಿಟ್ ಮಿನಿಯಲ್ಲಿ ಉಪಾಸನಾ ಮಿಂಚಿದ್ದಾರೆ.
ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಉಪಾಸನಾ ಐದು ವರೆ ತಿಂಗಳ ಗರ್ಭಿಣಿ ಎನ್ನಲಾಗಿದೆ. ಈ ವರ್ಷದ ಕೊನೆಯಲ್ಲಿ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳಲಿದ್ದಾರೆ.
'ಹ್ಯಾಪಿ ಬರ್ತಡೇ ಬೆಸ್ಟ್ ಫ್ರೆಂಡ್' ಎಂದು ಸೋಷಿಯಲ್ ಮೀಡಿಯಾದಲ್ಲಿ ಎರಡು ಫೋಟೋವನ್ನು ಉಪಾಸನಾ ಅಪ್ಲೋಡ್ ಮಾಡಿದ್ದಾರೆ. ಒಂದರಲ್ಲಿ ರಾಮ್ ಉಪಾಸನಾ ತೊಡೆ ಮೇಲೆ ಕುಳಿತುಕೊಂಡಿದ್ದಾರೆ.
ಉಪಾಸನಾ ಹೊಟ್ಟೆಯಲ್ಲಿ ನಮ್ಮ ಕೂಸು ಆಗಮನದ ವಿಚಾರ ತಿಳಿಯುತ್ತಿದ್ದಂತೆ ನಮಗೆ ಲಕ್ ಮೇಲೆ ಲಕ್ ಬರುತ್ತಿದೆ. ಹೀಗಾಗಿ ನಮ್ಮ ಜೀವನದ ಲಕ್ಕಿ ಬೇಬಿ ಇದಾಗಲಿದೆ ಎಂದು ರಾಮ್ ಹೇಳಿದ್ದರು.