ಬಾಯ್​ಫ್ರೆಂಡ್​ ಎದುರೇ ಮಾಜಿ ಹುಡುಗನಿಗೆ ಲೊಚ ಲೊಚ ಕಿಸ್​ ಕೊಟ್ಟ ಸ್ಟಾರ್​ ನಟಿ! ಕಕ್ಕಾಬಿಕ್ಕಿ ಗೆಳೆಯ- ವಿಡಿಯೋ ವೈರಲ್

Published : Jan 01, 2026, 12:25 PM IST

ನಟಿ ತಾರಾ ಸುತಾರಿಯಾ ತಮ್ಮ ಹಾಲಿ ಬಾಯ್​ಫ್ರೆಂಡ್​ ವೀರ್ ಪಹರಿಯಾ ಜೊತೆ ಮಾಜಿ ಪ್ರಿಯಕರ ಎಪಿ ಧಿಲ್ಲೋನ್ ಅವರ ಸಂಗೀತ ಕಚೇರಿಗೆ ಹಾಜರಾಗಿದ್ದರು. ಈ ವೇಳೆ ವೇದಿಕೆಯಲ್ಲೇ ಎಪಿ ಧಿಲ್ಲೋನ್ ಅವರನ್ನು ಅಪ್ಪಿಕೊಂಡು ಮುತ್ತಿಕ್ಕಿದ್ದು, ಇದನ್ನು ಕಂಡ ವೀರ್ ಪಹರಿಯಾ ಕಕ್ಕಾಬಿಕ್ಕಿಯಾದ ವಿಡಿಯೋ ವೈರಲ್ ಆಗಿದೆ.

PREV
15
ಸ್ಟಾರ್​ ನಟಿ ಸದ್ದು

ಸೋಷಿಯಲ್​ ಮೀಡಿಯಾದಲ್ಲಿ ಇದೀಗ ಸ್ಟಾರ್​ ನಟಿಯ ವಿಡಿಯೋ ಒಂದು ಭಾರಿ ಸದ್ದು ಮಾಡುತ್ತಿದೆ. ಅದು ಖ್ಯಾತ ನಟಿ ತಾರಾ ಸುತಾರಿಯಾ ಅವರದ್ದು. 2019 ರಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್ 2 ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಟಿ ತಾರಾ ಸುತಾರಿಯಾ, "ಮರ್ಜಾವಾನ್", "ಏಕ್ ವಿಲನ್ ರಿಟರ್ನ್ಸ್", "ತಡಪ್", "ಹೀರೋಪಂತಿ 2", ಮತ್ತು "ಅಪೂರ್ವ" ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

25
ಸಂಗೀತ ಕಚೇರಿಯಲ್ಲಿ ಭಾಗಿ

ಇಂತಿಪ್ಪ ನಟಿ ಕಳೆದ ಶುಕ್ರವಾರ ನಡೆದ ಖ್ಯಾತ ಗಾಯಕ ಹಾಗೂ ತಾರಾ ಅವರ ಎಕ್ಸ್​ ಬಾಯ್​ಫ್ರೆಂಡ್​ ಎ.ಪಿ ಧಿಲ್ಲೋನ್ ಅವರ ಸಂಗೀತ ಕಚೇರಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತಾರಾ ಸುತಾರಿಯಾ ಅವರು ತಮ್ಮ ಹಾಲಿ ಸ್ನೇಹಿತ ವೀರ್ ಪಹರಿಯಾ ಜೊತೆ ಕಾಣಿಸಿಕೊಂಡಿದ್ದರು.

35
ಒಂದೇ ಸಮನೆ ಕಿಸ್​

ಆದರೆ, ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ, ತಾರಾ ಸುತಾರಿಯಾ ವೇದಿಕೆಯಲ್ಲಿ ಗಾಯಕಿಯೊಂದಿಗೆ ತಮ್ಮ ಹಿಟ್ ಹಾಡಾದ ಥೋಡಿ ಸಿ ದಾರು ಹಾಡಿಗೆ ಹೆಜ್ಜೆ ಹಾಕುತ್ತಿರುವಾಗಲೇ ಕುತೂಹಲದ ಘಟನೆಯೊಂದು ನಡೆಯಿತು. ಅದೇನೆಂದರೆ ತಾರಾ ತಮ್ಮ ಬಾಯ್​ಫ್ರೆಂಡ್ ಪಕ್ಕದಲ್ಲಿ ಇರುವಾಗಲೇ ಓಡಿ ಹೋಗಿ ಎಪಿ ಧಿಲ್ಲೋನ್ ಅವರನ್ನು ಅಪ್ಪಿಕೊಂಡು ಒಂದೇ ಸಮನೆ ಕಿಸ್​ ಮಾಡಿದ್ದಾರೆ.

45
ಬಾಯ್​ಫ್ರೆಂಡ್​ ಕಕ್ಕಾಬಿಕ್ಕಿ

ಇಷ್ಟೇ ಆದರೆ ಏನೂ ಆಗುತ್ತಿರಲಿಲ್ಲವೇನೋ. ಈ ಸಂದರ್ಭದಲ್ಲಿ ಕ್ಯಾಮೆರಾ ಕಣ್ಣು ವೀರ್ ಪಹರಿಯಾ ಅವರತ್ತ ನೆಟ್ಟಿದೆ. ತಮ್ಮ ಗೆಳತಿ ಈ ರೀತಿ ನಡೆದುಕೊಂಡಿದ್ದನ್ನು ನೋಡಿ ವೀರ್​ ಕಕ್ಕಾಬಿಕ್ಕಿಯಾಗಿದ್ದಾರೆ. ಅವರ ರಿಯಾಕ್ಷನ್​ ಈಗ ಸೋಷಿಯಲ್​ ಮೀಡಿಯಾದಲ್ಲಿ ಹೈಲೈಟ್​ ಆಗುತ್ತಿದೆ! ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ.ಜೋಡಿ ಕುರಿತು

55
ಜೋಡಿ ಕುರಿತು

ಇನ್ನು ತಾರಾ ಸುತಾರಿಯಾ ಮತ್ತು ವೀರ್ ಪಹರಿಯಾ ಜೋಡಿ ಕುರಿತು ಹೇಳುವುದಾದರೆ, 2025 ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ವರ್ಷದ ಆರಂಭದಲ್ಲಿ ಅವರು ಒಟ್ಟಿಗೆ ಸಮಯ ಕಳೆಯುವುದನ್ನು ಮತ್ತು ಖಾಸಗಿ ವಿಹಾರಗಳಿಗೆ ಹೋಗುವುದನ್ನು ಗುರುತಿಸಿದಾಗ ಅವರ ಸಂಬಂಧದ ಬಗ್ಗೆ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಕೊನೆಗೆ ಇವರ ಸಂಬಂಧ ಒಂದು ಹಂತವನ್ನೂ ಮೀರಿರುವ ಬಗ್ಗೆ ವರದಿಯಾಗಿದೆ, ಮದುವೆಯಾಗಿಲ್ಲವಷ್ಟೇ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories