ಪಾಪಾರಾಜಿಗಳಿಗೆ ಖುಷಿಯಿಂದ ಪೋಸ್ ನೀಡಿದ ಸೆಲೆಬ್ರಿಟಿಗಳು; ಪೋಟೋ ವೈರಲ್
First Published | Aug 2, 2022, 5:35 PM ISTಇತ್ತೀಚೆಗೆ, ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ (Anushka Sharma Virat Kohli )ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ರಜೆ ಮುಗಿಸಿ ದಂಪತಿ ಮುಂಬೈಗೆ ಮರಳಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ತಮ್ಮ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡರು. ಇಬ್ಬರೂ ಕ್ಯಾಮರಾಮನ್ ಗೆ ರೊಮ್ಯಾಂಟಿಕ್ ಪೋಸ್ ಕೊಟ್ಟಿದ್ದಾರೆ. ಪೋಸ್ ನೀಡಿದ ನಂತರ, ಅನುಷ್ಕಾ ಕೂಡ ಖುಷಿಯಲ್ಲಿರುವ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಅವರ ಸ್ಟೈಲ್‌ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಇವರಲ್ಲದೆ ಇನ್ನೂ ಅನೇಕ ಸೆಲೆಬ್ರಿಟಿಗಳು ಮುಂಬೈನ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡರು.