ಅಲಿಬಾಗ್‌ನಲ್ಲಿ ಐಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಖರೀದಿಸಿದ ಫಾರ್ಮ್‌ಹೌಸ್‌ ಬೆಲೆ ಎಷ್ಟು ಗೊತ್ತಾ?

Published : Sep 02, 2022, 06:16 PM IST

ಅನುಷ್ಕಾ ಶರ್ಮಾ (Anushka Sharma) ಮತ್ತು ವಿರಾಟ್ ಕೊಹ್ಲಿ (Virat Kohli) ದಂಪತಿ ಅಲಿಬಾಗ್‌ನಲ್ಲಿ ಫಾರ್ಮ್‌ಹೌಸ್ ಖರೀದಿಸಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದೆ. ವರದಿಗಳ ಪ್ರಕಾರ, ಗಣೇಶ ಚತುರ್ಥಿಯ ಸಂದರ್ಭದಲ್ಲಿ ಈ ಒಪ್ಪಂದ ಅಂತಿಮಗೊಳಿಸಲಾಗಿದೆ. ಇಟೈಮ್ಸ್ ವರದಿಗಳ ಪ್ರಕಾರ, ಅವರ ಫಾರ್ಮ್‌ಹೌಸ್ 8 ಎಕರೆ ವಿಸ್ತಾರವಾಗಿದೆ. ಅಲಿಬಾಗ್‌ನ ಜಿರಾದ್ ಗ್ರಾಮದ ಬಳಿ 8 ಎಕರೆ ಜಾಗದಲ್ಲಿ ಮನೆ ನಿರ್ಮಿಸಲಾಗುವುದು ಎಂದು ಹೇಳಲಾಗುತ್ತಿದೆ. 

PREV
17
  ಅಲಿಬಾಗ್‌ನಲ್ಲಿ ಐಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ  ಖರೀದಿಸಿದ ಫಾರ್ಮ್‌ಹೌಸ್‌ ಬೆಲೆ ಎಷ್ಟು ಗೊತ್ತಾ?

ಫಾರ್ಮ್‌ಹೌಸ್‌ನ ವೆಚ್ಚದ ಕುರಿತು ಹೇಳುವುದಾದರೆ, ದಂಪತಿ ಇದಕ್ಕಾಗಿ ಸುಮಾರು 19 ಕೋಟಿ 24 ಲಕ್ಷದ 50 ಸಾವಿರ ರೂ ಖರ್ಚುಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ದಂಪತಿಗಳು ಈಗಾಗಲೇ 1 ಕೋಟಿ 15 ಲಕ್ಷ ರೂಪಾಯಿಗಳನ್ನು ಸರ್ಕಾರದ ಖಜಾನೆಗೆ ಠೇವಣಿ ಮಾಡಿದ್ದಾರೆ. 

27

ಅನುಷ್ಕಾ-ವಿರಾಟ್‌ಗಿಂತ ಮೊದಲು ಇಲ್ಲಿ ಹೆಚ್ಚು ಬಾಲಿವುಡ್ ಸೆಲೆಬ್ರೆಟಿಗಳುಗಳ ಮನೆಗಳು ಮತ್ತು ಫಾರ್ಮ್‌ಹೌಸ್‌ಗಳಿವೆ. ಇತ್ತೀಚೆಗೆ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಇಲ್ಲಿ 5BHK ನ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ, ಅದು ಸುಮಾರು 22 ಕೋಟಿ ರೂ ಬೆಲೆಯದು.

37

ಹೊರಬರುತ್ತಿರುವ ವರದಿಗಳ ಪ್ರಕಾರ, ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಫಾರ್ಮ್‌ಹೌಸ್ ಖರೀದಿಸಿದ್ದಾರೆ. ಆ ಜಮೀನಿನಲ್ಲಿ ಐಷಾರಾಮಿ ಬಂಗಲೆ ನಿರ್ಮಿಸಲಾಗುವುದು. 8  ಎಕರೆ ಜಾಗದಲ್ಲಿ ಐಷಾರಾಮಿ ಮನೆ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.

47

ಏಷ್ಯಾಕಪ್ ಟೂರ್ನಿಯಲ್ಲಿ (Asiacup Tourney) ವಿರಾಟ್ ಈ ದಿನಗಳಲ್ಲಿ ನಿರತರಾಗಿದ್ದಾರೆ, ಆದ್ದರಿಂದ ಅವರ ಸಹೋದರ ವಿಕಾಸ್ ಕೊಹ್ಲಿ ಈ ಡೀಲ್‌ ಅನ್ನು ಅಂತಿಮಗೊಳಿಸಿದ್ದಾರೆ. ಸಮೀರಾ ಹ್ಯಾಬಿಟಾಟ್ಸ್ ಎಂಬ ರಿಯಲ್ ಎಸ್ಟೇಟ್ (Real Estate) ಕಂಪನಿಯಿಂದ ಸಂಪೂರ್ಣ ವ್ಯವಹಾರ ನಡೆದಿದೆ.

57

ಹೊರಬರುತ್ತಿರುವ ಸುದ್ದಿಗಳ ಪ್ರಕಾರ, ದಂಪತಿ ಸುಮಾರು 6 ತಿಂಗಳ ಹಿಂದೆ ಅಲಿಬಾಗ್‌ನಲ್ಲಿರುವ ಈ ಭೂಮಿ ನೋಡಿದ್ದರು. ಆದರೆ ವಿರಾಟ್ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಒಪ್ಪಂದವನ್ನು ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ. ಆದರೆ ಈಗ ಎಲ್ಲವೂ ಅಂತಿಮವಾಗಿದೆ. ಈ ಜಮೀನಿಗೆ ರಿಜಿಸ್ಟ್ರೆಷನ್‌ ಶುಲ್ಕವಾಗಿ ದಂಪತಿ 3 ಲಕ್ಷ 35 ಸಾವಿರ ರೂಪಾಯಿ ಠೇವಣಿ ಇಟ್ಟಿದ್ದಾರೆ.


 

67

ವಿರಾಟ್ ಕೊಹ್ಲಿ ಇತ್ತೀಚೆಗೆ ಬಾಲಿವುಡ್ ಗಾಯಕ ಕಿಶೋರ್ ಕುಮಾರ್ ಅವರ ಜುಹು ಬಂಗಲೆಯ ಒಂದು ಭಾಗವನ್ನು ಬಾಡಿಗೆಗೆ ಪಡೆದಿದ್ದಾರೆ, ಅಲ್ಲಿ ಅವರು ರೆಸ್ಟೋರೆಂಟ್ ಅನ್ನು ನಿರ್ಮಿಸುತ್ತಿದ್ದಾರಂತೆ ಎಂದು ವರದಿಗಳು ಹೇಳುತ್ತಿವೆ. ಅದನ್ನು ಸಿದ್ಧಪಡಿಸುವ ಕೆಲಸವೂ ವೇಗವಾಗಿ ನಡೆಯುತ್ತಿದೆ ಮತ್ತು ಹೆಚ್ಚಿನ ಭಾಗ ರೆಸ್ಟೊರೆಂಟ್ ಸಿದ್ಧವಾಗಿದ್ದು, ಮುಂದಿನ ತಿಂಗಳು ದೀಪಾವಳಿ ಸಂದರ್ಭದಲ್ಲಿ ಆರಂಭಿಸಲಾಗುವುದು ಎಂದು ಹೇಳಲಾಗುತ್ತಿದೆ.

77

ಅನುಷ್ಕಾ ಶರ್ಮಾ ಅವರ ಕೆಲಸದ  ಬಗ್ಗೆ ಹೇಳುವುದಾದರೆ, ಈ ದಿನಗಳಲ್ಲಿ ಅವರು ತಮ್ಮ ಮುಂಬರುವ ಚಿತ್ರ ಚಕ್ಡಾ ಎಕ್ಸ್‌ಪ್ರೆಸ್‌ಗಾಗಿ ತೀವ್ರವಾಗಿ ತಯಾರಿ ನಡೆಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಕೂಡ ಶುರುವಾಗಿದೆ. ಬಹಳ ದಿನಗಳ ನಂತರ ಅನುಷ್ಕಾ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ .

Read more Photos on
click me!

Recommended Stories