ಕಾರ್ಯಕ್ರಮದಲ್ಲಿ, ಕೃತಿ ತಾನು ಕರಣ್ ಜೋಹರ್ ಅವರ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರಕ್ಕಾಗಿ ಆಡಿಷನ್ ಮಾಡಿದ್ದೇನೆ, ಆದರೆ ತಿರಸ್ಕರಿಸಲಾಯಿತು ಎಂದು ಬಹಿರಂಗಪಡಿಸಿದರು. ಕೃತಿ, 'ಇದು ನನ್ನ ವೃತ್ತಿ ಜೀವನದ (Career) ಮೊದಲ ಆಡಿಷನ್ ಆಗಿತ್ತು ಎಂದಿದ್ದಾರೆ. 'ಬಹರಾ'ದಲ್ಲಿ ಡ್ಯಾನ್ಸ್ ಮಾಡಲು ಮತ್ತು 'ವೇಕ್ ಅಪ್ ಸಿದ್'ನಲ್ಲಿ ಕೆಲವು ದೃಶ್ಯಗಳನ್ನು ಮಾಡಲು ನನ್ನನ್ನು ಕೇಳಲಾಯಿತು. ಆ ಸಮಯದಲ್ಲಿ ನಾನು ತುಂಬಾ ಕಳಪೆಯಾಗಿ ಮಾಡಿದ್ದೆ. ನಾನು ಚಿತ್ರಕ್ಕೆ ಸಿದ್ಧವಿರಲಿಲ್ಲ ಎಂದೂ ಬಹಿರಂಗಪಡಿಸಿದ್ದಾರೆ.