ಅಯ್ಯೋ..! ವಮಿಕಾ ಫ್ರಾಕ್ ಹಾಕೊಂಡ್ರಾ? ಅನುಷ್ಕಾ ಶರ್ಮಾ ಸಖತ್ ಟ್ರೋಲ್

Published : Jan 25, 2023, 02:45 PM IST

ಅನುಷ್ಕಾ ಶರ್ಮಾ ಧರಿಸಿದ್ದ ಹಳದಿ ಬಣ್ಣದ ಬಟ್ಟೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ನೆಟ್ಟಿಗರು ಮಗಳ ಬಟ್ಟೆ ಧರಿಸಿದ್ದಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

PREV
16
ಅಯ್ಯೋ..! ವಮಿಕಾ ಫ್ರಾಕ್ ಹಾಕೊಂಡ್ರಾ? ಅನುಷ್ಕಾ ಶರ್ಮಾ ಸಖತ್ ಟ್ರೋಲ್

ಬಾಲಿವುಡ್ ನಟಿ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸದ್ಯ ಮತ್ತೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಮದುವೆ, ಮಗು ಅಂತ ಸಂಸಾರದ ಕಡೆ ಹೆಚ್ಚು ಗಮನ ಹರಿಸಿದ್ದ ನಟಿ ಅನುಷ್ಕಾ ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. 

26

ಅನುಷ್ಕಾ ಸದ್ಯ ಚಕ್ದ ಎಕ್ಸ್ ಪ್ರೆಸ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಇದು ಖ್ಯಾತ ಕ್ರಿಕೆಟ್ ಆಟಗಾರ್ತಿ  ಜೂಲನ್ ಗೋಸ್ವಾಮಿ ಅವರ ಬಯೋಪಿಕ್ ಆಗಿದೆ. ಜೂಲನ್ ಗೋಸ್ವಾಮಿ ಪಾತ್ರದಲ್ಲಿ ಅನುಷ್ಕಾ ಶರ್ಮಾ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಪ್ರಮೋಷನ್ ನಲ್ಲಿ ಅನುಷ್ಕಾ ಬ್ಯುಸಿಯಾಗಿದ್ದಾರೆ. 

36

ಅನುಷ್ಕಾ ಡೆನಿಮ್ ಪ್ಯಾಂಟ್ ಮತ್ತು ಹಳದಿ  ಬಣ್ಣದ ಆಫ್ ಶೋಲ್ಡರ್ ಟಾಪ್ ಧರಿಸಿದ್ದರು. ಅನುಷ್ಕಾ ಲುಕ್ ಎಲ್ಲರ ಗಮನ ಸೆಳೆದಿದೆ. ಸಿಕ್ಕಾಪಟ್ಟೆ ಗಾಳಿ ಬರುತ್ತಿದ್ದ ಕಾರಣ ಟಾಪ್ ಮೇಲಕ್ಕೆ ಹಾರುತ್ತಿತ್ತು. ತಕ್ಷಣ ಅನುಷ್ಕಾ ಸರಿಮಾಡಿಕೊಂಡರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

46

ಅನುಷ್ಕಾ ಅವರ ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಮಗಳ ಬಟ್ಟೆ ಯಾಕೆ ಧರಿಸಿದ್ದೀರಿ ಎಂದು ಕೇಳಿದ್ದಾರೆ. ವಮಿಕಾ ಫ್ರಾಕ್ ಯಾಕೆ ಧರಿಸಿದ್ದೀನಿ ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾರೆ. 'ಅರಾಮದಾಯಕವಿವಲ್ಲದ ಬಟ್ಟೆಯನ್ನು ಯಾಕೆ ಧರಿಸುತ್ತೀರಿ' ಎಂದು ಪ್ರಶ್ನೆ ಮಾಡಿದ್ದಾರೆ. ಅನೇಕರು ವಿವಿಧ ರೀತಿ ಕಾಮೆಂಟ್ ಮಾಡಿದ್ದಾರೆ. 

56

 ಸಿನಿಮಾದ ಬಗ್ಗೆ ಮಾತನಾಡಿದ ಅನುಷ್ಕಾ 'ಇದು ನಿಜವಾಗಿಯೂ ವಿಶೇಷವಾದ ಸಿನಿಮಾವಾಗಿದೆ. ಚಕ್ಡಾ ಎಕ್ಸ್‌ಪ್ರೆಸ್ ಮಾಜಿ ಭಾರತೀಯ ನಾಯಕಿ ಜೂಲನ್ ಗೋಸ್ವಾಮಿ ಅವರ ಜೀವನದಿಂದ ಪ್ರೇರಿತವಾಗಿದೆ ಮತ್ತು ಇದು ಮಹಿಳಾ ಕ್ರಿಕೆಟ್ ಜಗತ್ತಿಗೆ ಒಂದು ಕಣ್ಣು ತೆರೆಸುತ್ತದೆ. ಒಂದು ಸಮಯದಲ್ಲಿ ಜೂಲನ್ ಕ್ರಿಕೆಟಿಗಳಾಗಲು ಮತ್ತು ಜಾಗತಿಕ ವೇದಿಕೆಯಲ್ಲಿ ತನ್ನ ದೇಶವನ್ನು ಹೆಮ್ಮೆಪಡಲು ನಿರ್ಧರಿಸಿದಾಗ ಮಹಿಳೆಯರಿಗೆ ತುಂಬಾ ಕಠಿಣವಾಗಿತ್ತು' ಎಂದು ಹೇಳಿದ್ದಾರೆ. 

66

ಅನುಷ್ಕಾ ಶರ್ಮಾ ನಿರೀಕ್ಷೆಯ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಜೀರೋ ಸಿನಿಮಾ ಬಳಿಕ ಅನುಷ್ಕಾ ಮತ್ತೆ ತೆರೆಮೇಲೆ ಬಂದಿಲ್ಲ. ದೊಡ್ಡ ಪರದೆ ಮೇಲೆ ಅನುಷ್ಕಾರನ್ನು ಕಣ್ತುಂಬಿಕೊಳ್ಳುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಇದು ನಿರಾಸೆ ಮೂಡಿಸಿದೆ. ಈ ಸಿನಿಮಾ ಬಳಿಕ ಅನುಷ್ಕಾ ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಎಂದು ಕಾಯುತ್ತಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories