DHOOM 4 ಚಿತ್ರಕ್ಕೆ ಸೌತ್ ಸೂಪರ್ ಸ್ಟಾರ್ ಬಹುತೇಕ ಆಯ್ಕೆ; ಇಲ್ಲಿ ವಿಲನ್‌ ಆಗ್ತಾನೆ ಹೀರೋ!

First Published | Sep 17, 2024, 2:29 PM IST

ಬಾಲಿವುಡ್ ಸೂಪರ್ ಹಿಟ್ ಸಿನಿಮಾಗಳಲ್ಲಿ ಧೂಮ್ ಸಹ ಸೇರುತ್ತದೆ. ಈಗಾಗಲೇ ಧೂಮ್ ಚಿತ್ರದ ಮೂರು ಸರಣಿಗಳೂ ಸಹ ಬಾಕ್ಸ್ ಆಫಿಸ್‌ ದೋಚಿದ್ದವು. ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿರುವ ಧೂಮ್ ಸಿನಿಮಾಗಳ ಹಾಡುಗಳು ಸಹ ಸೂಪರ್ ಹಿಟ್ ಸಾಲಿಗೆ ಸೇರುತ್ತವೆ. 

ಇದೀಗ ಮತ್ತೆ ಧೂಮ್ ಸದ್ದು ಮಾಡುತ್ತಿದೆ. ಧೂಮ್-4ನ್ನು ತೆರೆಯ ಮೇಲೆ ತರಲು ಯಶ್ ರಾಜ್ ಬ್ಯಾನರ್ ಸಿದ್ಧವಾಗಿದೆ. ಮೂರು ಸರಣಿಗಳು ಹಿಟ್ ಆಗಿರುವ ಕಾರಣ ಯಶ್ ರಾಜ್ ಬ್ಯಾನರ್ ಪ್ರತಿಯೊಂದು ಪಾತ್ರದ ಆಯ್ಕೆ ಹಾಗೂ ತಂತ್ರಜ್ಞಾನದ ಬಳಕೆಯ ಕುರಿತು ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದ. ಇದೀಗ ಚಿತ್ರತಂಡ ವಿಲನ್ ಪಾತ್ರಕ್ಕಾಗಿ ದಕ್ಷಿಣ ಭಾರತದತ್ತ ಮುಖ ಮಾಡಿದೆ ಎಂಬ ವರದಿಗಳು ಹೊರ ಬಂದಿವೆ.

ಕೆಲ ಮಾಧ್ಯಮಗಳ ವರದಿ ಪ್ರಕಾರ, ಧೂಮ್-4 ನಿರ್ಮಾಣ ಸಂಸ್ಥೆಯವರು ದಕ್ಷಿಣ ಭಾರತದ ಸ್ಟಾರ್ ಹೀರೋ ಜೊತೆ ಮಾತುಕತೆ ನಡೆಸಿದೆ ಎನ್ನಲಾಗಿದೆ. ಆದ್ರೆ ಈ ಬಗ್ಗೆ ನಟ ಅಥವಾ ಚಿತ್ರತಂಡ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಇದಕ್ಕೂ ಮೊದಲು ಧೂಮ್-4ಗಾಗಿ ಅಕ್ಷಯ್ ಕುಮಾರ್, ರಣ್‌ಬೀರ್ ಕಪೂರ್ ಮತ್ತು ರಣ್‌ವೀರ್ ಸಿಂಗ್ ಹೆಸರು ಕೇಳಿ ಬಂದಿತ್ತು. ಇದೀಗ ಅಚ್ಚರಿಯ ಹೆಜ್ಜೆಯನ್ನು ಇರಿಸಿರುವ ನಿರ್ಮಾಣ ಸಂಸ್ಥೆ ಸೌಥ್ ಸಿನಿ ಅಂಗಳದತ್ತ ಮುಖ ಮಾಡಿದೆ.

Tap to resize

ಧೂಮ್-3 ಸಿನಿಮಾ 2013ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ವಿಲನ್ ರೋಲ್‌ನಲ್ಲಿ ಆಮೀರ್ ಖಾನ್ ನಟಿಸಿದ್ದರು. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಉದಯ್ ಚೋಪ್ರಾ ನಟಿಸಿದ್ದರು. ನಟಿಯಾಗಿ ಕತ್ರಿನಾ ಕೈಫ್ ಸಿನಿಮಾದಲ್ಲಿ ಮೋಡಿ ಮಾಡಿದ್ದರು. ಧೂಮ್, ಧೂಮ್-2 ಸಿನಿಮಾಗಳಲ್ಲಿಯೂ ಅಭಿಷೇಕ್ ಬಚ್ಚನ್ ಮತ್ತು ಉದಯ್ ಚೋಪ್ರಾ ಇದೇ ಪಾತ್ರದಲ್ಲಿ ನಟಿಸಿದ್ದರು. ವಿಲನ್ ಮತ್ತು ನಟಿ ಪಾತ್ರಗಳು ಬದಲಾಗುತ್ತಾ ಬಂದಿದೆ. ಈ ಎಲ್ಲಾ ಚರ್ಚೆಗಳ ನಡುವೆ ನಾಯಕಿಯ ಹುಡುಕಾಟವನ್ನು ಸಹ ಚಿತ್ರತಂಡ ನಡೆಸುತ್ತಿದೆ.

ಧೂಮ್ ಮೊದಲ ಚಿತ್ರದಲ್ಲಿ ಜಾನ್ ಅಬ್ರಾಹಂ, ಧೂಮ್-2ರಲ್ಲಿ ಹೃತಿಕ್ ರೋಷನ್ ಮತ್ತು ಧೂಮ್-3ರಲ್ಲಿ ಆಮೀರ್ ಖಾನ್ ಹಾಗೂ ಇವರಿಗೆ ನಾಯಕಿಯರಾಗಿ ಇಶಾ ಡಿಯೋಲ್, ಐಶ್ವರ್ಯಾ ರೈ ಬಚ್ಚನ್ ಮತ್ತು ಕತ್ರಿನಾ ಕೈಫ್ ನಟಿಸಿದ್ದರು. ನಟಿಯರು ಹಾಟ್ ಡ್ಯಾನ್ಸ್‌ಗಳು ಚಿತ್ರದ ಮತ್ತೊಂದು ಹೈಲೆಟ್ ಆಗಿತ್ತು. ಇದೀಗ ಈ ಮೂವರನ್ನು ಸರಿದೂಗಿಸುವ ನಟಿಯರನ್ನು ಚಿತ್ರತಂಡ ಹುಡುಕಬೇಕಿದೆ.

ಇದೀಗ ಸಿನಿ ಅಭಿಮಾನಿಗಳು ಧೂಮ್-4ಗಾಗಿ ಕಾಯುತ್ತಿದ್ದಾರೆ. ಬೈಕ್ ಸವಾರರ ನೆಚ್ಚಿನ ಸಿನಿಮಾಗಳಲ್ಲಿ ಇದು ಒಂದಾಗಿದೆ. ಯಶ್ ರಾಜ್ ಬ್ಯಾನರ್, ವಿಲನ್ ರೋಲ್‌ಗಾಗಿ ತಮಿಳು ನಟ ಸೂರ್ಯ ಅವರನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಜೈಭೀಮ್ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಸೂರ್ಯ ಚಿತ್ರವನ್ನು ಒಪ್ಪಿಕೊಂಡರೆ ದಕ್ಷಿಣದ ರಾಜ್ಯಗಳಲ್ಲಿಯೂ ಒಳ್ಳೆಯ ಪ್ರದರ್ಶನ ಕಾಣುತ್ತೆ ಅನ್ನೋದು ನಿರ್ಮಾಣ ಸಂಸ್ಥೆಯ ಲೆಕ್ಕಾಚಾರ. ಆದ್ರೆ ಸೂರ್ಯ ಚಿತ್ರದ ಕಥೆಗೆ ಹೆಚ್ಚು ಮಹತ್ವ ನೀಡುತ್ತಾರೆ. ಹಾಗಾಗಿ ಧೂಮ್-4 ಕಹಾನಿ ಏನಾಗಿರಲಿದೆ ಮೇಲೆ ಸೂರ್ಯ ಒಪ್ಪಿಕೊಳ್ಳುವ ಸಾಧ್ಯತೆ ಇದೆ.

Latest Videos

click me!